Bangalore : ಕೋಲಾರ ಸಂಸದ ಎಸ್.ಮುನಿಸ್ವಾಮಿ (Muniswamy) ಹಣೆಗೆ ಬಿಂದಿ ಇಡದ ಮಹಿಳೆಯನ್ನು ಅವಮಾನಿಸಿರುವುಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲೇಖಕಿ ಪ್ರತಿಭಾ ನಂದ ಕುಮಾರ್ ಕುರಿತು ತಮ್ಮ (Pratibha outrage against Muniswamy) ಸಾಮಾಜಿಕ ಜಾಲತಾಣದಲ್ಲಿ ಸಂಸದರ ನಡೆಯನ್ನು ಟೀಕಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಎಲವೋ ಮುನಿಸಾಮಿ ಕೇಳು, ನೀನು ಮುನಿಯೂ ಅಲ್ಲ ಸಾಮಿಯೂ ಅಲ್ಲ. ನನಗೆ ಕಾಮನ್ ಸೆನ್ಸ್ ಇಲ್ಲ. ನನ್ನ ಗಂಡ ಬದುಕಿದ್ದಾನೆ.
ನಾನು ಮತಾಂತರವಾಗಿಲ್ಲ. ಯಾರೂ ನನಗೆ ಕಾಸು ಕೊಟ್ಟಿಲ್ಲ. ಇದು ಸಾರಾಂಶ. ಇನ್ನು ನಿನ್ನ ಕತೆ ಹೇಳು. ಉತ್ತರ ಗೊತ್ತಿದ್ದೂ ಸುಮ್ಮನಿದ್ದರೆ (Pratibha outrage against Muniswamy) ನಿನ್ನ ತಲೆ ಸಾವಿರ ಹೋಳಾದೀತು.
ನೀನು ಎಲ್ಲಿ ಕೂತಿದ್ದಾಗ ಯಾರು ಬಂದು ಕೋಟಿ ನೋಟುಗಳನ್ನು ನಿನ್ನ ಅಂಡಿನ ಕೆಳಗೆ ಇಟ್ಟು ಹೋದರು? ನಿನಗೆ ಹೆಂಡತಿ ಇಲ್ವಾ? ಮತ್ಯಾಕೆ ಅವರಿವರ ಕದ ತಟ್ಟುತ್ತೀಯಾ?
ನಿನ್ನ ವಿಸ್ತಾರ ಹಣೆಯಲ್ಲಿ ರಾರಾಜಿಸುವ ಬೂದಿ ಕಾಶಿಯ ಯಾವ ಸ್ಮಶಾನದ್ದು?
ಇದನ್ನೂ ಓದಿ : https://vijayatimes.com/congress-candidates-list-ready/
ಮೈದಾನಗಳಲ್ಲಿ ಹಾರಿಸುವ ಬಾವುಟಗಳಲ್ಲಿ ವೇದಿಕೆಗಳ ಮೇಲಿನ ಮೈಕುಗಳಲ್ಲಿ ಹನುಮಂತನ ಪಕ್ಕದಲ್ಲಿ ಬಾಡಿಬಿಲ್ಡರುಗಳ ಪೋಸಿನಲ್ಲಿ ನಂಗಾನಾಚುಗಳಲ್ಲಿ ಹರಿದ ಪಂಚೆಗಳಲ್ಲಿ ಅತ್ಯಾಚಾರದ ಬೆಂಕಿಗಳಲ್ಲಿ ಅಸಹ್ಯ ತೀರ್ಪುಗಳ ಜಾಮೀನುಗಳಲ್ಲಿ ಸಂಸ್ಕಾರ ಸಂಸ್ಕತಿ
ಸನಾತನಗಳ ಸಕಾರ ಮೋಹದಲ್ಲಿ ಮಾನ ಮಹಿಳೆ ಮತಗಳ ಮಮಕಾರದಲ್ಲಿ ಕೆಟ್ಟು ಹಳಸಿ ನಾರುವ ದುರ್ಮಾಂಸದಲ್ಲಿ ಮುಚ್ಚಿಡುವುದನ್ನು ಬಿಚ್ಚಿಡುವ ಬಿಚ್ಚಿಡುವುದನ್ನು ಮುಚ್ಚಿಡುವ ಲಂಗೋಟಿ ಗಿರಾಕಿ,
ಕೇಳು ನನ್ನ ಖಾಲಿ ಹಣೆಯಲ್ಲಿ ಬರೆದಿದೆ ನಿನ್ನ ಅಂತ್ಯ ಕುಂಕುಮದಲ್ಲಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರು ಮಹಿಳಾ ದಿನಾಚರಣೆ (Women’s Day) ನಿಮಿತ್ತ ಕೋಲಾರದಲ್ಲಿ (Kolar) ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : https://vijayatimes.com/stalin-vs-bjp/
ಈ ವೇಳೆ ಬಟ್ಟೆಗಳನ್ನು ಮಾರಾಟಕ್ಕೆ ಇಟ್ಟಿದ್ದ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರು ಹಣೆಗೆ ಬಿಂದಿ ಧರಿಸಿರಲಿಲ್ಲ. ಇದನ್ನು ಗಮನಿಸಿದ ಸಂಸದ ಮುನಿಸ್ವಾಮಿ ಅವರು,
“ಯಾಕಮ್ಮಾ ಹಣೆಗೆ ಬಿಂದಿ ಹಾಕಿಲ್ಲ, ಮೊದಲು ಬಿಂದಿ ಹಾಕಿಕೊಳ್ಳಿ. ನಿಮ್ಮ ಪತಿ ಬದುಕಿದ್ದಾರೆ ಅಲ್ಲವೇ? ನಿಮಗೆ ಕಾಮನ್ ಸೆನ್ಸ್ ಇಲ್ವಾ?” ಎಂದು ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿದೆ.