ನವದೆಹಲಿ, ಡಿ. 08: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವಂತ ರೈತರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿತ್ತು. ಆದರೆ ರೈತರ ಬೇಡಿಕೆಗಳಿಗೆ ಮಣಿಯದ ಸರ್ಕಾರದಿಂದ ಬೇಸತ್ತು ಪ್ರತಿಭಟನೆಯನ್ನು ಮುಂದುವರೆಸಿತ್ತು. ಇಂದು ಭಾರತ್ ಬಂದ್‌ಗೂ ಕರೆ ನೀಡಿ, ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಇದರ ಮಧ್ಯೆ ಇಂದು ಸಂಜೆ 7 ಗಂಟೆಗೆ ಮತ್ತೊಂದು ಸುತ್ತಿನ ಮಾತುಕತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಭಟನಾ ನಿರತ ರೈತರಿಗೆ ಆಹ್ವಾನಿಸಿದ್ದಾರೆ.
ಡಿಸೆಂಬರ್ 8ರ ಮಂಗಳವಾರ ಸಂಜೆ 7 ಗಂಟೆಗೆ ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ನ ವಕ್ತಾರರು ತಿಳಿಸಿದ್ದಾರೆ.
ರೈತರ ಕೃಷಿ ನೀತಿ ವಿರೋಧಿಸಿ ರೈತರ ಪ್ರತಿಭಟನೆ ಡಿಸೆಂಬರ್ 8ರಂದು ಭಾರತ್ ಬಂದ್ ಅಂಗವಾಗಿ ಭಾರತದಾದ್ಯಂತ ರೈತ ಸಂಘಟನೆಗಳು ಬೀದಿಗಿಳಿದಿವೆ. ಬಂದ್ ಗೆ ಕರೆ ನೀಡಿರುವ ಪ್ರತಿಭಟನಾನಿರತ ರೈತರನ್ನು ಬೆಂಬಲಿಸಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆಸಿದೆ.