ಟೆಹ್ರಾನ್, ಡಿ. 12: ಪ್ರತಿಭಟನೆಗೆ ಆನ್‌ಲೈನ್ ಮೂಲಕ ಪ್ರಚೋದನೆ ನೀಡಿದ ಆರೋಪದ ಮೇಲೆ ಪತ್ರಕರ್ತನೊಬ್ಬನನ್ನು ಇರಾನ್ ಸರ್ಕಾರ ಶನಿವಾರ ಗಲ್ಲಿಗೇರಿಸಿದೆ. ಈ ಪತ್ರಕರ್ತನನ್ನು ಒಮ್ಮೆ ಇರಾನ್ ಸರ್ಕಾರ ಗಡಿಪಾರು ಮಾಡಿತ್ತು.
2017ರಲ್ಲಿ ದೇಶದ ಆರ್ಥಿಕತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ನಡೆದ ಪ್ರತಿಭಟನೆಯನ್ನು ತನ್ನ ಆನ್‌ಲೈನ್ ಚಾನಲ್ ಮೂಲಕ ಪ್ರಚಾರ ಮಾಡಿ, ಜನರನ್ನು ಪ್ರಚೋದಿಸಿದ್ದ ಎಂಬ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಪತ್ರಕರ್ತ ರುಡೋಲ್ಲಾಹ್ ಝಾಮ್’ನನ್ನು ಶನಿವಾರ ಮುಂಜಾನೆ ಗಲ್ಲಿಗೇರಿಸಲಾಯಿತು. ಕಳೆದ ಜೂನ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಭೂಮಿ ಮೇಲಿನ ಭ್ರಷ್ಟಾಚಾರ ಎಂದು ಹೇಳಿ, ಝಾಮ್’ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಝಾಮ್‌ನ ವೆಬ್‌ಸೈಟ್ ಮತ್ತು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ನಿಂದ ಟೆಲಿಗ್ರಾಂ ಚಾನಲ್ ಮೂಲಕ ಇರಾನ್‌ನ ಶಿಯಾ ಪ್ರಜಾಪ್ರಭುತ್ವವನ್ನು ನೇರವಾಗಿ ಪ್ರಶ್ನಿಸಿದ ಅಧಿಕಾರಿಗಳ ಬಗ್ಗೆ ಮುಜುಗರ ಉಂಟಾಗುವ ರೀತಿ ಪ್ರಚಾರ ಮಾಡಿದ್ದರು.