ಮಂಗಳೂರು, ಜ. 22: ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿರುವ ಮಂಗಳೂರು ಪೊಲೀಸರು, 44 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೀದರ್ ಮತ್ತು ತೆಲಂಗಾಣದಿಂದ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ, 44 ಕೆ.ಜಿ ಗಾಂಜಾ ಸಹಿತ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನರಿಂಗಾನ ತೌಡುಗೋಳಿಯ ಅಬ್ದುಲ್ ಅಜೀಜ್ (40), ಮೊಯ್ದಿನ್ ಹಫೀಸ್ ಯಾನೆ ಅಬಿ (24), ತೆಲಂಗಾಣ ಸಂಗಾರೆಡ್ಡಿ ಜಿಲ್ಲೆಯ ವಿಠಲ್ ಚವ್ಹಾಣ್ (35), ಬೀದರ್ ನ ಬಾಲ್ಕಿ ತಾಲೂಕಿನ ಸಂಜುಕುಮಾರ್ (34) ಮತ್ತು ಕಲ್ಲಪ್ಪ (40) ರನ್ನು ಬಂಧಿಸಲಾಗಿದೆ.
ಅಂತೆಯೇ ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಅವರಿಂದ ಗಾಂಜಾ ವಶಕ್ಕೆ ಪಡೆಯಲಾಗಿದೆ. ನರಿಂಗಾನದ ಮೊಹಮ್ಮದ್ ಹಫೀಜ್ (23) ಮತ್ತು ಗುರುಪುರದ ಸಂದೀಪ್ (34) ಬಂಧಿತರು.