Lucknow: ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Mahakumbh Mela) 54 ಕೋಟಿ ಜನರು ಪುಣ್ಯಸ್ನಾನ (Holy bath) ಮಾಡಿದ್ದಾರೆ. ನಿತ್ಯ ಲಕ್ಷಾಂತರ ಜನ ಗಂಗಾ ನದಿಯಲ್ಲಿ (River Ganges) ಮಿಂದೇಳುತ್ತಿದ್ದಾರೆ. ಪಾಪನಾಶಿನಿ ಗಂಗೆಯಲ್ಲಿ (Papanashini Ganges) ಮಿಂದೆದ್ದು ಪಾವನರಾಗಿದ್ದೇವೆ ಎಂಬ ಭಾವದಲ್ಲಿ ಮುಳುಗಿದ್ದಾರೆ. ಆದರೆ ಇವೆಲ್ಲವುಗಳ ಈದೀಗ ಮಧ್ಯೆ ಆಘಾತಕಾರಿ ಮಾಹಿತಿಯೊಂದು (Shocking information) ಬಹಿರಂಗವಾಗಿದೆ.ಪ್ರಯಾಗ್ರಾಜ್ ನದಿ (Prayagraj River) ನೀರಿನಲ್ಲಿ ಮಲ ಬ್ಯಾಕ್ಟೀರಿಯಾ (Fecal bacteria) ಪ್ರಮಾಣ ಹೆಚ್ಚಾಗಿದ್ದು, ಇದು ಸ್ನಾನಕ್ಕೆ ಯೋಗ್ಯವಲ್ಲ ಎಂದು ಸ್ವತಃ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board) ಹೇಳಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board) ಜನವರಿ 12, 13ರಂದೇ ಗಂಗಾ ನದಿಯ ನೀರಿನ ಸ್ಯಾಂಪಲ್ (Water sample) ತೆಗೆದುಕೊಂಡು ಪರೀಕ್ಷೆ ನಡೆಸಿತ್ತು. ಇದೀಗ ನೀರಿನ ಸ್ಯಾಂಪಲ್ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (National Green Judiciary) (NGT) ಸಲ್ಲಿಕೆ ಮಾಡಿದೆ. ಅಷ್ಟಕ್ಕೂ ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ (Faecal coliform bacteria) ಇವೆ. ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (Biochemical Oxygen Demand) ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ (Kumbh Mela) ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ (Faecal coliform) ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕುಂಭಮೇಳದ ಗಂಗಾ ನದಿಯಲ್ಲಿ ಮಲ ಬ್ಯಾಕ್ಟೀರಿಯಾದ ಬಗ್ಗೆ, ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ (Indraprastha Apollo Hospital) ವೈದ್ಯರು ಮಾಹಿತಿ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ನ (Internal Medicine) ಹಿರಿಯ ಸಲಹೆಗಾರರೊಬ್ಬರು, ಕುಂಭದಿಂದ ಹಿಂತಿರುಗುತ್ತಿರುವ ಸಾಕಷ್ಟು ಜನರಲ್ಲಿ ನಾವು ಹಲವು ವೈದ್ಯಕೀಯ ಸಮಸ್ಯೆಗಳಿರುವುದನ್ನು ಗಮನಿಸುತ್ತಿದ್ದೇವೆ. ತುಂಬಾ ಜನರು ಇರುವ ಸ್ಥಳದಲ್ಲಿನ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಇದರಿಂದ ಇಲ್ಲಿಗೆ ಭೇಟಿ ನೀಡುವ ಆರೋಗ್ಯವಂತ ವ್ಯಕ್ತಿಗಳು ಕೂಡ ಗ್ಯಾಸ್ಟ್ರೋಎಂಟರೈಟಿಸ್ (Gastroenteritis) ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಲ್ಲಿ ಅವರಿಗೆ ಬೇದಿ, ವಾಂತಿಯಾಗುವ (Nausea, vomiting) ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.ಧಾರ್ಮಿಕ ಸಮ್ಮೇಳನದ (Religious conference) ವೇಳೆ ಗಂಗಾ ನದಿ ನೀರಿನ ಗುಣಮಟ್ಟ ಕಾಪಾಡಲು ಹಿಂದಿನಿಂದಲೂ ಎನ್ಜಿಟಿ (NGT) ಸೂಚನೆ ನೀಡಿತ್ತು. ನೀರಿನ ಗುಣಮಟ್ಟ (Water quality), ತ್ಯಾಜ್ಯ ನೀರಿನ ಶುದ್ದೀಕರಣ (Waste water treatment), ತ್ಯಾಜ್ಯ ನಿರ್ವಹಣೆ (Waste Management) ಬಗ್ಗೆ ಮಾಹಿತಿ ಕೇಳಿದೆ. ನಾಳಿನ ವಿಚಾರಣೆಗೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ (Officials of Uttar Pradesh Pollution Control Board) ಹಾಜರಿಗೆ ಸಮನ್ಸ್ ನೀಡಲಾಗಿದೆ.