• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಅಗ್ಗದ ಸೈಟು ಆಫರ್‌ಗೆ ಮೋಸ ಹೋಗಬೇಡಿ:ಬೆಂಗಳೂರಿನಲ್ಲಿ ಆಸ್ತಿ ಖರೀದಿಗೆ ಮುನ್ನ ತಿಳಿಯಲೇಬೇಕಾದ ಅಂಶಗಳಿವು

Teju Srinivas by Teju Srinivas
in ರಾಜ್ಯ, ವಿಜಯ ಟೈಮ್ಸ್‌
ಅಗ್ಗದ ಸೈಟು ಆಫರ್‌ಗೆ ಮೋಸ ಹೋಗಬೇಡಿ:ಬೆಂಗಳೂರಿನಲ್ಲಿ ಆಸ್ತಿ ಖರೀದಿಗೆ ಮುನ್ನ ತಿಳಿಯಲೇಬೇಕಾದ ಅಂಶಗಳಿವು
0
SHARES
34
VIEWS
Share on FacebookShare on Twitter
  • ಬೆಂಗಳೂರು ಆಸ್ತಿ ಹೂಡಿಕೆಯಲ್ಲಿ ಸಿಲುಕಿಸೋ (precautions before buying property) ದೊಡ್ಡ ತಪ್ಪುಗಳು: ಎ-ಖಾತಾ, ಬಿ-ಖಾತಾ ಎಚ್ಚರಿಕೆ
  • ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಕಡಿಮೆ ದರವೇ ಕಾನೂನು ಅಪಾಯದ ಸೂಚನೆ ಆಗಿರಬಹುದು
  • ಸೈಟು, ಲೇಔಟ್ ಮತ್ತು ಮನೆ ಖರೀದಿಸುವಾಗ ತಪ್ಪದೇ ಪರಿಶೀಲಿಸಬೇಕಾದ ದಾಖಲೆಗಳು ಹೀಗಿವೆ

ಬೆಂಗಳೂರು ಇಂದು ದೇಶದ ಪ್ರಮುಖ ರಿಯಲ್‌ ಎಸ್ಟೇಟ್‌ (Real Estates) ಮಾರುಕಟ್ಟೆಯಾಗಿ ರೂಪುಗೊಂಡಿದೆ. ಉದ್ಯೋಗ, ಶಿಕ್ಷಣ ಮತ್ತು ಜೀವನಶೈಲಿಯ (precautions before buying property) ಆಕರ್ಷಣೆಯಿಂದ ಸಾವಿರಾರು ಜನರು ಇಲ್ಲಿ ಸೈಟು (Site) ಅಥವಾ ಮನೆ ಖರೀದಿಸುವ ಕನಸು ಕಾಣುತ್ತಿದ್ದಾರೆ.

ಆದರೆ ಗಗನಕ್ಕೇರಿರುವ ಆಸ್ತಿ ಬೆಲೆಗಳ ಜೊತೆಗೆ ಕಾನೂನು ಗೊಂದಲಗಳು ಕೂಡ ಅಷ್ಟೇ ಹೆಚ್ಚಾಗಿವೆ. ವಿಶೇಷವಾಗಿ ‘ಎ-ಖಾತಾ’ (A-Khatha) ಮತ್ತು ‘ಬಿ-ಖಾತಾ’ (B-Khatha) ನಡುವಿನ ವ್ಯತ್ಯಾಸ ತಿಳಿಯದೇ ಹೂಡಿಕೆ ಮಾಡಿದರೆ, ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.

ಹೀಗಾಗಿ ಬೆಂಗಳೂರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಭಾವನೆಗಿಂತ ದಾಖಲೆಗಳಿಗೆ ಹೆಚ್ಚು ಮಹತ್ವ ನೀಡುವುದು ಅತ್ಯಗತ್ಯ.

precautions before buying property

ಎ-ಖಾತಾ ಆಸ್ತಿ ಎಂದರೆ ಬಿಬಿಎಂಪಿ ಅಥವಾ ಸಂಬಂಧಿತ ಯೋಜನಾ ಪ್ರಾಧಿಕಾರದ ಎಲ್ಲಾ ನಿಯಮಗಳನ್ನು (precautions before buying property) ಪಾಲಿಸಿ ಅಧಿಕೃತ ಅನುಮೋದನೆ ಪಡೆದ ಕಾನೂನುಬದ್ಧ ಆಸ್ತಿ.

ಇಂತಹ ಆಸ್ತಿಗಳಿಗೆ ಬ್ಯಾಂಕ್‌ ಸಾಲ, ಕಟ್ಟಡ ಪರವಾನಗಿ, ಮರುಮಾರಾಟ ಎಲ್ಲವೂ ಸುಲಭ. ಆದರೆ ಬಿ-ಖಾತಾ ಎಂಬುದು ಕೇವಲ ತೆರಿಗೆ ಪಾವತಿ ದಾಖಲೆ ಮಾತ್ರ.

ನಿಯಮ ಮೀರಿ ನಿರ್ಮಾಣವಾದ ಅಥವಾ ಅನುಮೋದನೆ ಇಲ್ಲದ ಆಸ್ತಿಗಳಿಗೆ ಬಿಬಿಎಂಪಿ (BBMP) ಬಿ-ಖಾತಾ ನೀಡುತ್ತದೆ. ಹೈಕೋರ್ಟ್‌ ತೀರ್ಪುಗಳ ಪ್ರಕಾರ ಬಿ-ಖಾತಾ ಆಸ್ತಿಗಳು ಸಂಪೂರ್ಣ ಕಾನೂನು ಮಾನ್ಯತೆ ಹೊಂದಿಲ್ಲ.

ಈ ಮೂಲಭೂತ ವ್ಯತ್ಯಾಸವನ್ನು ಅರಿಯದೇ ಮುಂದುವರಿದರೆ, ಖರೀದಿದಾರರು ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ.

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಾಮಾನ್ಯವಾಗಿ ಕೇಳಿಸಿಕೊಳ್ಳುವ ಮಾತು ಎಂದರೆ – “ಇದೀಗ ಬಿ-ಖಾತಾ ಇದೆ, ಮುಂದೆ ಸರ್ಕಾರ ಸಕ್ರಮ ಯೋಜನೆ ತಂದರೆ ಎ-ಖಾತಾ ಆಗುತ್ತದೆ.” ಆದರೆ ಇಂತಹ ಭರವಸೆಗಳಿಗೆ ಯಾವುದೇ ಕಾನೂನು ಗ್ಯಾರಂಟಿ ಇಲ್ಲ. ಸರ್ಕಾರದ ನೀತಿಗಳು ಬದಲಾಗಬಹುದು, ನಿಯಮಗಳು ಇನ್ನಷ್ಟು ಕಠಿಣವಾಗಬಹುದು.

ಭವಿಷ್ಯದ ನಿರೀಕ್ಷೆಯ ಮೇಲೆ ಇಂದು ಹಣ ಹೂಡುವುದು ಅಪಾಯಕರ. ಖರೀದಿ ಮಾಡುವ ಸಮಯದಲ್ಲಿ ಆಸ್ತಿ ಯಾವ ಸ್ಥಿತಿಯಲ್ಲಿ ಇದೆ ಎಂಬುದೇ ಮುಖ್ಯ.

ಕೇವಲ ತೆರಿಗೆ ರಶೀದಿ ಅಥವಾ ಪಂಚಾಯತ್ ಖಾತಾ ಇದೆ ಎಂದು ನಂಬಿ ಮುಂದುವರಿಯುವುದು ತಪ್ಪು ನಿರ್ಧಾರವಾಗಬಹುದು.

ಆಸ್ತಿ ಖರೀದಿಸುವಾಗ ಖಾತಾ ಮಾತ್ರವಲ್ಲದೆ ಸೇಲ್‌ ಡೀಡ್‌, ಮದರ್‌ ಡೀಡ್‌ (Mother Deed) , ಇತ್ತೀಚಿನ ಎನ್‌ಕಂಬರೆನ್ಸ್ ಸರ್ಟಿಫಿಕೇಟ್‌ (EC), ಲೇಔಟ್ ಅನುಮೋದನೆ ಮುಂತಾದ ದಾಖಲೆಗಳನ್ನು ಪರಿಶೀಲಿಸಲೇಬೇಕು.

ಬೆಂಗಳೂರಿನಲ್ಲಿ ಕೇವಲ ಡಿಸಿ ಕನ್ವರ್ಷನ್ ಇದ್ದರೆ ಸಾಲದು; ಲೇಔಟ್‌ಗೆ ಬಿಡಿಎ, ಬಿಎಂಆರ್‌ಡಿಎ ಅಥವಾ ಬಿಬಿಎಂಪಿ ಅನುಮೋದನೆ ಇರಬೇಕು.

ಇತ್ತೀಚಿನ ದಿನಗಳಲ್ಲಿ ಇ-ಖಾತಾ ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ ಖಾತಾ ವರ್ಗಾವಣೆ ಅಥವಾ ವಿಭಜನೆ ಆಗುತ್ತಿದೆಯೇ ಎಂಬುದೂ ಪ್ರಮುಖ ಸೂಚಕ. ಇವುಗಳಲ್ಲಿ ಅಡಚಣೆ ಕಂಡುಬಂದರೆ, ಆ ಆಸ್ತಿಯಲ್ಲಿ ಕಾನೂನು ಲೋಪ ಇರುವ ಸಾಧ್ಯತೆ ಹೆಚ್ಚು.

ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಬೆಲೆಗೆ ಸೈಟು ಸಿಗುತ್ತಿದೆ ಎಂದರೆ, ಅದರ ಹಿಂದೆ ಕಾರಣ ಹುಡುಕಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಆ ಕಡಿಮೆ ಬೆಲೆ ಅಲ್ಲಿ ಇರುವ ಕಾನೂನು ಸಮಸ್ಯೆಗಳ ಪ್ರತಿಫಲವಾಗಿರುತ್ತದೆ.

ಬಿ-ಖಾತಾ ಅಥವಾ ಅನುಮೋದನೆ ಇಲ್ಲದ ಸೈಟುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಿ ಖರೀದಿದಾರರನ್ನು ಸೆಳೆಯಲಾಗುತ್ತದೆ.

ಆದರೆ ನಂತರ ಸಾಲ ಸಿಗದೆ, ಕಟ್ಟಡ ಪರವಾನಗಿ ದೊರಕದೆ ಅಥವಾ ಕೋರ್ಟ್‌ ವ್ಯಾಜ್ಯದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ಸ್ವಲ್ಪ ಹೆಚ್ಚು ಹಣ ನೀಡಿಯಾದರೂ ಸುರಕ್ಷಿತ ಎ-ಖಾತಾ ಆಸ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ದೀರ್ಘಾವಧಿಯಲ್ಲಿ ಬುದ್ಧಿವಂತಿಕೆಯ ಹೂಡಿಕೆಯಾಗುತ್ತದೆ.

ಇದನ್ನು ಓದಿ : https://vijayatimes.com/us-approves-oil-export-to-india/

Tags: BangaloreRealEstatebengalurufakePropertysite

Related News

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು
ಪ್ರಮುಖ ಸುದ್ದಿ

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು

January 22, 2026
SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ
ಪ್ರಮುಖ ಸುದ್ದಿ

SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ

January 22, 2026
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

January 22, 2026
ನಮ್ಮ ಮೆಟ್ರೋ ಹಂತ 3A ಯೋಜನೆಯ ಡಿಪಿಆರ್ ಸಿದ್ಧ, ಕೇಂದ್ರದ ಗ್ರೀನ್ ಸಿಗ್ನಲ್ ಗೆ ನಿರೀಕ್ಷೆ
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಹಂತ 3A ಯೋಜನೆಯ ಡಿಪಿಆರ್ ಸಿದ್ಧ, ಕೇಂದ್ರದ ಗ್ರೀನ್ ಸಿಗ್ನಲ್ ಗೆ ನಿರೀಕ್ಷೆ

January 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.