• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಚಳಿಗಾಲದಲ್ಲಿ ಈ 7 ತಪ್ಪುಗಳನ್ನು ಮಾಡಬೇಡಿ !

Teju Srinivas by Teju Srinivas
in ಆರೋಗ್ಯ, ಪ್ರಮುಖ ಸುದ್ದಿ, ಲೈಫ್ ಸ್ಟೈಲ್, ವಿಜಯ ಟೈಮ್ಸ್‌
ಚಳಿಗಾಲದಲ್ಲಿ ಈ 7 ತಪ್ಪುಗಳನ್ನು ಮಾಡಬೇಡಿ !
0
SHARES
9
VIEWS
Share on FacebookShare on Twitter

ಚಳಿಗಾಲ ಆರಂಭವಾಗುತ್ತಿದ್ದಂತೆ ಶೀತ, ಕೆಮ್ಮು, ಗಂಟಲು ನೋವು (precautions for winter season) ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ತಾಪಮಾನದಲ್ಲಿನ ಬದಲಾವಣೆ, ಹೆಚ್ಚು ಸಮಯ ಮನೆಯೊಳಗೆ ಕಳೆಯುವುದು ಹಾಗೂ ವಾತಾವರಣದಲ್ಲಿ ಗಾಳಿಯ ವೇಗ ಮತ್ತು ಚಲನೆ ತೀರಾ ಕಡಿಮೆಯಾದಾಗ ಉಸಿರಾಟದ ಸೋಂಕುಗಳು ಹರಡಲು ಕಾರಣವಾಗಬಹುದು.

precautions for winter season

ಚಳಿಯಿಂದ ನೇರವಾಗಿ ವೈರಲ್ (Viral) ಸೋಂಕು ಉಂಟಾಗುವುದಿಲ್ಲ. ಆದರೆ ನಮ್ಮ ದೈನಂದಿನ ಕೆಲವು ಅಭ್ಯಾಸಗಳು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ 7 ತಪ್ಪುಗಳು

  1. ಹವಾಮಾನಕ್ಕೆ ತಕ್ಕಂತೆ ಬಟ್ಟೆ ಧರಿಸದಿರುವುದು

ಬೆಳಗ್ಗೆ ಮತ್ತು ರಾತ್ರಿ ಚಳಿ ಹೆಚ್ಚಾಗಿರುವುದರಿಂದ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಉತ್ತಮ. ದೇಹವನ್ನು ಬೆಚ್ಚಗಿಡಲು ಒಂದಕ್ಕಿಂತ ಹೆಚ್ಚು ಪದರದ ಬಟ್ಟೆಗಳನ್ನು ಧರಿಸಬಹುದು.

  1. ಕಡಿಮೆ ನೀರು ಕುಡಿಯುವುದು

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಾಗಬಹುದು ಆದರೆ ದೇಹಕ್ಕೆ ನೀರಿನ ಅಗತ್ಯ ಇದ್ದೇ ಇರುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಗಂಟಲು ಮತ್ತು ಮೂಗಿನ ಒಳಭಾಗ ಒಣಗಬಹುದು. ಹೀಗಾಗಿ ದಿನವಿಡೀ ಸಾಕಷ್ಟು ನೀರು ಹಾಗೂ ದ್ರವ್ಯ ಆಹಾರ ಸೇವಿಸುವುದು ಮುಖ್ಯ.

  1. ಕೈಗಳ ಸ್ವಚ್ಛತೆಯನ್ನು ನಿರ್ಲಕ್ಷಿಸುವುದು

ಹೊರಗಿನಿಂದ ಮನೆಗೆ ಬಂದಾಗ, ವಿಶೇಷವಾಗಿ ಜನಸಂದಣಿ ಪ್ರದೇಶಗಳಲ್ಲಿ ಓಡಾಡಿದ ಬಳಿಕ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ತೊಳೆಯದ ಕೈಗಳಿಂದ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಬೇಕು.

  1. ಮನೆಯ ಕಿಟಕಿಗಳನ್ನು ಸದಾ ಮುಚ್ಚಿಡುವುದು

ಚಳಿಯಿಂದ ರಕ್ಷಿಸಿಕೊಳ್ಳಲು ಕಿಟಕಿಗಳನ್ನು ದಿನವಿಡೀ ಮುಚ್ಚಿಡುವುದು ಸರಿಯಲ್ಲ ಮನೆಯೊಳಗೆ ಗಾಳಿಯ ಸಂಚಾರ ಕಡಿಮೆಯಾದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಬಹುದು. ಸಾಧ್ಯವಾದಾಗ ಕಿಟಕಿಗಳನ್ನು ತೆರೆದು ತಾಜಾ ಗಾಳಿ ಒಳಬರುವಂತೆ ನೋಡಿಕೊಳ್ಳಬೇಕು.

  1. ಆರಂಭಿಕ ಆರೋಗ್ಯ ಲಕ್ಷಣಗಳನ್ನು ನಿರ್ಲಕ್ಷಿಸುವುದು

ಸತತ ಸೀನುವಿಕೆ, ಗಂಟಲು ನೋವು, ಕೆಮ್ಮು ಅಥವಾ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸಬಾರದು. ಲಕ್ಷಣಗಳು ತೀವ್ರವಾಗುತ್ತಿದ್ದರೆ ಅಥವಾ ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು.

  1. ನಿದ್ರೆ ಮತ್ತು ಆಹಾರದ ಬಗ್ಗೆ ನಿರ್ಲಕ್ಷ್ಯ

ಸಾಕಷ್ಟು ನಿದ್ರೆ ಮಾಡದಿರುವುದು ಮತ್ತು ಪೌಷ್ಟಿಕ ಆಹಾರ ಸೇವಿಸದಿರುವುದು (precautions for winter season) ದೇಹದ ಸಾಮಾನ್ಯ ರೋಗನಿರೋಧಕ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಹಣ್ಣು, ತರಕಾರಿ ಸೇರಿದಂತೆ ಸಮತೋಲಿತ ಆಹಾರ ಸೇವಿಸುವುದರ ಜೊತೆಗೆ ಸಾಕಷ್ಟು ವಿಶ್ರಾಂತಿ ಪಡೆಯಬೇಕು.

  1. ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸುವುದು

ಶೀತ, ಕೆಮ್ಮು ಕಾಣಿಸಿಕೊಂಡ ತಕ್ಷಣ ಸ್ವತಃ ಔಷಧಿ ಅಥವಾ ಆ್ಯಂಟಿಬಯೋಟಿಕ್‌ಗಳನ್ನು ಸೇವಿಸುವುದು ಅಪಾಯಕಾರಿ. ಸಾಮಾನ್ಯ ಶೀತ ಹೆಚ್ಚಾಗಿ ವೈರಸ್‌ಗಳಿಂದ ಉಂಟಾಗುತ್ತದೆ. ಆ್ಯಂಟಿಬಯೋಟಿಕ್‌ಗಳು ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ. ಹೀಗಾಗಿ ವೈದ್ಯರ ಸಲಹೆಯಂತೆ ಔಷಧಿ ಸೇವಿಸಬೇಕು.

ಯಾರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ?

ಆಸ್ತಮಾ, ಸಿಒಪಿಡಿ, ಹೃದಯ ಸಂಬಂಧಿ ಕಾಯಿಲೆಗಳು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು.

ಉಸಿರಾಟದ ತೊಂದರೆ, ಎದೆನೋವು, ನಿರಂತರವಾಗಿ ಅಧಿಕ ಜ್ವರ ಅಥವಾ ಆರೋಗ್ಯದ ಲಕ್ಷಣಗಳು ತೀವ್ರವಾಗುತ್ತಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಚಳಿಗಾಲದಲ್ಲಿ ಆರೋಗ್ಯವಾಗಿರಲು ಬೆಚ್ಚಗಿನ ಬಟ್ಟೆ ಧರಿಸುವುದು, ಸಾಕಷ್ಟು ನೀರು ಕುಡಿಯುವುದು, ಕೈಗಳ ಸ್ವಚ್ಛತೆ ಕಾಪಾಡುವುದು ಮತ್ತು ಉತ್ತಮ ನಿದ್ರೆ ಪಡೆಯುವುದು ಅತ್ಯಂತ ಮುಖ್ಯ.

ಇದನ್ನು ಓದಿ : https://vijayatimes.com/increase-in-prices-of-nandini-products/

Tags: climateseasonweatherWinter

Related News

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು GBA ಡೆಡ್‌ಲೈನ್: ತಿಂಗಳಾಂತ್ಯದೊಳಗೆ ಐದು ನಗರ ಪಾಲಿಕೆಗಳಿಗೆ ಟಾರ್ಗೆಟ್
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು GBA ಡೆಡ್‌ಲೈನ್: ತಿಂಗಳಾಂತ್ಯದೊಳಗೆ ಐದು ನಗರ ಪಾಲಿಕೆಗಳಿಗೆ ಟಾರ್ಗೆಟ್

November 13, 2026
ಕರ್ನಾಟಕಕ್ಕೆ ಬಂದಿಳಿದ ಪ್ರಧಾನಿ ಮೋದಿ : ಪಿಂಕ್ ಮೆಟ್ರೋ ಸೇರಿದಂತೆ ₹15,600 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರಮುಖ ಸುದ್ದಿ

ಕರ್ನಾಟಕಕ್ಕೆ ಬಂದಿಳಿದ ಪ್ರಧಾನಿ ಮೋದಿ : ಪಿಂಕ್ ಮೆಟ್ರೋ ಸೇರಿದಂತೆ ₹15,600 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

November 13, 2026
ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಹೆಚ್ಚುವರಿ ಲಸಿಕೆ: ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಪೋಷಕರು
ಪ್ರಮುಖ ಸುದ್ದಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಹೆಚ್ಚುವರಿ ಲಸಿಕೆ: ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಪೋಷಕರು

November 12, 2026
ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಗರದಲ್ಲಿ ಹೈ ಅಲರ್ಟ್, ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಗರದಲ್ಲಿ ಹೈ ಅಲರ್ಟ್, ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

November 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.