ಗಂಡಸರು(Men) ಗರ್ಭ ಧರಿಸುವುದು ಸಾಧ್ಯವೇ? ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದೇ ಹೋದರೂ, ಸಮುದ್ರದ ಕೆಲವು ಗಂಡು ಜಲಚರಗಳು ಗರ್ಭ ಧರಿಸುತ್ತವಂತೆ. ಪೈಪ್ ಮೀನು ಹಾಗೂ ಸೀ ಡ್ರಾಗನ್ಸ್ ಈ ಜಲಚರ ಪ್ರಾಣಿಗಳು ಗಂಡು ಲಿಂಗ ಹೊಂದಿದ್ದರೂ ಕೂಡ ಗರ್ಭ ಧರಿಸುತ್ತವೆ. ಹೌದು, ನಮ್ಮ ಪ್ರಪಂಚದಲ್ಲಿರುವ ಸಕಲ ಜೀವರಾಶಿಗಳಲ್ಲಿ ಈ ಎರಡು ಗಂಡು ಜಲಚರಗಳು ಮಾತ್ರ ಗರ್ಭ ಧರಿಸುತ್ತವೆ. ಆದರೆ ಮಾನವರಲ್ಲಿ ಒಬ್ಬ ಗಂಡು ಗರ್ಭ ಧರಿಸಿ, ಮಗುವಿಗೆ ಜನ್ಮ ಕೊಟ್ಟ ವಿಚಿತ್ರ ಘಟನೆಯೊಂದರ ಬಗ್ಗೆ ನಿಮಗೆ ತಿಳಿದಿದೆಯೇ? ಈ ಘಟನೆಯ ವಿವರ ಹೀಗಿದೆ.
1974 ರಲ್ಲಿ ಅಮೇರಿಕಾದಲ್ಲಿ ಟ್ರೇಸಿ ಎಂಬ ಒಂದು ಹೆಣ್ಣು ಮಗು ಜನಿಸಿತು, ಆ ಮಗು ಹೆಣ್ಣಾಗಿ ಹುಟ್ಟಿದರೂ ಕೂಡ ಗಂಡಸರ ಹಾವ-ಭಾವಗಳನ್ನು ಹೊಂದಿದ್ದಳು. ಗಂಡಸರು ಮಾಡುವ ಕೆಲಸಗಳನ್ನೇ ಮಾಡುತ್ತಿದ್ದಳು. ಹೀಗೆ ಟ್ರೇಸಿ ದೊಡ್ಡವಳಾದ ಮೇಲೆ ತನ್ನ ತಂದೆಯ ಆಸೆಯಂತೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾಳೆ. ಮುಂದೆ ಯಶಸ್ವಿ ಮಾಡೆಲ್ ಆದರೂ ಕೂಡ ಆಕೆಗೆ ಅದು ತೃಪ್ತಿ ಕೊಡಲಿಲ್ಲ. ಹಾಗಾಗಿ ಮಾಡೆಲಿಂಗ್ ಬಿಟ್ಟು ಜಿಮ್‌ಗೆ ಸೇರುತ್ತಾಳೆ, ಹುಡುಗನಂತೆ ಬಟ್ಟೆ ಕೂಡ ಧರಿಸುತ್ತಾಳೆ. ಕೊನೆಗೆ ಹೆಣ್ಣಿನ ಹೆಸರೇ ಬೇಡ ಎಂದು, ಈಕೆ ತನ್ನ ಹೆಸರನ್ನು ಥಾಮಸ್ ಬಿಟ್ಟಿ ಎಂದು ಬದಲಾಯಿಸಿಕೊಳ್ಳುತ್ತಾಳೆ.
ಆಗ ಸಂಪೂರ್ಣವಾಗಿ ಟ್ರೆಸಿ, ಥಾಮಸ್ ಬಿಟ್ಟಿ ಎಂಬ ಟ್ರಾನ್ಸ್ ಮೆನ್ ಆಗಿ ಬದಲಾಗುತ್ತಾಳೆ. ನಂತರ ಇವನು ಟೆಸ್ಟೊಸ್ಟಿರೈನ್ ಎಂಬ ಹಾರ್ಮೋನ್ ಅನ್ನು ತೆಗೆದುಕೊಂಡು ಧ್ವನಿಯನ್ನು ಕೂಡ ಬದಲಾಯಿಸಿಕೊಂಡು, ಕೊನೆಗೆ ಎದೆಯ ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ.
ಹೀಗೆ ಜೀವನ ಸಾಗುತ್ತಿದ್ದಾಗ, 24ನೇ ವಯಸ್ಸಿನಲ್ಲಿ ಥೋಮಸ್ ಅವರು ನಾನ್ಸಿ ಎಂಬ ಮಹಿಳೆಯೊಂದಿಗೆ ಲೆಸ್ಬಿಯನ್ ರಿಲೇಷನ್‌ಶಿಪ್ ಆರಂಭಿಸುತ್ತಾರೆ. ಆದರೆ ನೋಡಲು ಮಾತ್ರ ಗಂಡಾಗಿದ್ದ ಇವರ ದೇಹದಲ್ಲಿ ಹೆಣ್ಣುಗಳಿಗೆ ಸಂಬಂಧಪಟ್ಟ ಎಲ್ಲಾ ಅಂಶಗಳು ಇದ್ದವು, ಗರ್ಭಕೋಶ ಕೂಡ ಹಾಗೆಯೇ ಇತ್ತು.
ನಂತರ ನಾನ್ಸಿಗೆ ಮಕ್ಕಳಾಗುವುದಿಲ್ಲ ಎಂದು ತಿಳಿದಾಗ ಇವರಿಗೆ ಒಂದು ಉಪಾಯ ಕಂಡು ಬರುತ್ತದೆ. ಅದೇನೆಂದರೆ, ಥಾಮಸ್ ಬೆಟ್ಟಿ(Thomas Beatie) ಮಕ್ಕಳನ್ನು ಹೆರುವ ಉಪಾಯ. ಇವರ ಈ ನಿರ್ಧಾರಕ್ಕೆ ಬಹಳಷ್ಟು ವಿರೋಧ ವ್ಯಕ್ತವಾದರೂ ಕೂಡ ಇವರು ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ. ತಮ್ಮ ನಿರ್ಧಾರಕ್ಕೆ ಬದ್ಧರಾದ ಇವರು, ವೈದ್ಯರ ಮೂಲಕ ಬೇರೆಯವರ ವೀರ್ಯಾಣುಗಳನ್ನು ಕೃತಕವಾಗಿ ಇಂಜೆಕ್ಟ್ ಮಾಡಿಸಿಕೊಳ್ಳುತ್ತಾರೆ. ಈ ರೀತಿ 2007 ರಲ್ಲಿ ಥಾಮಸ್ ಬೆಟ್ಟಿ ಅವರು ಗರ್ಭಿಣಿಯಾಗುತ್ತಾರೆ,
ನಂತರ 2008 ರಲ್ಲಿ ಥಾಮಸ್ ಅವರು ಯಶಸ್ವಿಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಇದರಿಂದ ಪ್ರೇರಿತರಾದ ಥೋಮಸ್ 2012ರ ಹೊತ್ತಿಗೆ, ಮತ್ತೆ ಮೂರು ಮಕ್ಕಳಿಗೆ ಜನ್ಮ ನೀಡುತ್ತಾರೆ. ಈ ರೀತಿ ಒಂದು ಹೆಣ್ಣು ಟ್ರಾನ್ಸ್ ಮೆನ್ ಆಗಿ ಬದಲಾಗಿ ಗರ್ಭ ಧರಿಸಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದು, ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿತ್ತು.
ಪ್ರಸ್ತುತ ಥೋಮಸ್ ಬೆಟ್ಟಿ ಒಬ್ಬ ಮೋಟಿವೇಷನಲ್ ಸ್ಪೀಕರ್ ಹಾಗೂ ವಕೀಲರಾಗಿ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
- ಪವಿತ್ರ ಸಚಿನ್