ನವದೆಹಲಿ,ಜೂ.26: ಗರ್ಭಿಣಿಯರಿಗೆ ಕೋವಿಡ್-19 ಲಸಿಕೆ ನೀಡಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆಯು, ಅಗತ್ಯವಾಗಿ ನೀಡಲೇಬೇಕು ಎಂದೂ ತಿಳಿಸಿದೆ.
ಗರ್ಭಿಣಿಯರು ಮಾರಣಾಂತಿಕ ವೈರಸ್ನ ಸೋಂಕಿಗೆ ಒಳಗಾಗುವ ಆತಂಕಗಳು ವ್ಯಕ್ತವಾಗುತ್ತಿರುವ ನಡುವೆಯೇ ಆರೋಗ್ಯ ಇಲಾಖೆ ಈ ನಿರ್ದೇಶನ ನೀಡಿದೆ.
ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಗರ್ಭಿಣಿಯರಿಗೆ ಲಸಿಕೆಯು ಉಪಯುಕ್ತವಾದದ್ದು. ಲಸಿಕೆಯನ್ನು ಅವರಿಗೆ ಅಗತ್ಯವಾಗಿ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಅವರು ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ್ದಾರೆ.