London : ಭಾರತದ(India) ರಾಷ್ಟ್ರಪತಿ(President) ದ್ರೌಪದಿ ಮುರ್ಮು(Droupadi Murmu) ಅವರು ಲಂಡನ್ನಲ್ಲಿ(London) ರಾಣಿ ಎಲಿಜಬೆತ್(President of india attends queens funeral) ಅವರ ಅಂತ್ಯಕ್ರಿಯೆಯ ಕಾರ್ಯಕ್ರಮಕ್ಕೂ ಮೊದಲು ಕಿಂಗ್ ಚಾರ್ಲ್ಸ್ III ಅವರನ್ನು ಬಕಿಂಗ್ಹ್ಯಾಮ್(Buckingham Palace) ಅರಮನೆಯಲ್ಲಿ ಭೇಟಿಯಾಗಿದ್ದಾರೆ.

ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ(Funeral) ಭಾಗವಹಿಸಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್ಗೆ ಪ್ರಯಾಣಿಸಿದ್ದಾರೆ. ಬ್ರಿಟನ್ನ ದೀರ್ಘಾವಧಿಯ ದೊರೆ, ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥೆ ರಾಣಿ ಎಲಿಜಬೆತ್ II ಅವರು ಸೆಪ್ಟೆಂಬರ್ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದರು.
https://youtu.be/vKYON5ALBMw ನಿಮ್ಮ ಪ್ರಕಾರ ಮುಂದಿನ ಸಿಎಂ ಯಾರಾಗಬೇಕು?
ಇನ್ನು ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ವಿಶ್ವ ನಾಯಕರು, ರಾಜವಂಶಸ್ಥರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ವಿಶ್ವದಾದ್ಯಂತ ನೂರಾರು ಮಿಲಿಯನ್ ಜನರು ವೀಕ್ಷಿಸುವ ಅಂತ್ಯಕ್ರಿಯೆಗಾಗಿ ವಿದೇಶಿ ರಾಜಮನೆತನದವರು ಮತ್ತು ವಿಶ್ವ ನಾಯಕರು ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಗಾಗಿ ಅಮೇರಿಕಾ ಅಧ್ಯಕ್ಷ(America President) ಜೋ ಬಿಡನ್(Joe Biden) ಲಂಡನ್ಗೆ ಆಗಮಿಸಿದ್ದಾರೆ. ಇನ್ನು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಲಿಯ ಅಧ್ಯಕ್ಷ ಸರ್ಗಿಯೋ ಮ್ಯಾಟರೆಲ್ಲಾ,
ಇದನ್ನೂ ಓದಿ : https://vijayatimes.com/chandigarh-vv-students-stop-protesting/
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಚೀನಾದ ಉಪಾಧ್ಯಕ್ಷ ವಾಂಗ್ ಕಿಶನ್ ಮತ್ತು ನ್ಯಾಟೋದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಸೇರಿದಂತೆ ಅನೇಕ ಗಣ್ಯರು ಲಂಡನ್‌ಗೆ ಆಗಮಿಸಿದ್ದಾರೆ.
- ಮಹೇಶ್.ಪಿ.ಎಚ್