ರಾಷ್ಟ್ರಪತಿ ಚುನಾವಣೆಯ(Presidential Election 2022) ಮತ(Vote) ಎಣಿಕೆ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ(NewDelhi) ಸಂಸತ್ ಭವನದಲ್ಲಿ ಆರಂಭವಾಗಲಿದೆ. ಸಂಜೆ ವೇಳೆಗೆ ಮುಗಿಯುವ ಸಾಧ್ಯತೆ ಇದೆ ಎಂಬುದು ಸದ್ಯ ದೊರೆತಿರುವ ಮಾಹಿತಿ. ಆಡಳಿತಾರೂಢ ಎನ್ಡಿಎಯ ಅಭ್ಯರ್ಥಿ(NDA Candidate) ದ್ರೌಪದಿ ಮುರ್ಮು(Draupadi Murmu) ಮತ್ತು ಪ್ರತಿಪಕ್ಷದ ಯಶವಂತ್ ಸಿನ್ಹಾ(Yashwant Sinha) ಸ್ಪರ್ಧೆಯಲ್ಲಿ ಪರಸ್ಪರ ಸ್ಪರ್ಧಿಸಿದ್ದು, ಮುರ್ಮು ಪರವಾಗಿ ಮತಗಳು ಸ್ಪಷ್ಟವಾಗಿ ಬಿದ್ದಿವೆ ಎನ್ನಲಾಗಿದೆ.

ಮುರ್ಮು ಅವರು ಆಯ್ಕೆಯಾದರೆ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸೋಮವಾರ (ಜುಲೈ 18) ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳ ವ್ಯಾಪ್ತಿಯ 30 ಕೇಂದ್ರಗಳು ಸೇರಿದಂತೆ ಒಟ್ಟು 31 ಸ್ಥಳಗಳಲ್ಲಿ ಮತದಾನ ನಡೆಯಿತು. ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷದ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಮತಗಳ ಲೆಕ್ಕಾಚಾರಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಚುನಾವಣಾ ಆಯೋಗದ ಪ್ರಕಾರ, ಚುನಾವಣೆಯು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,796 ಮತದಾರರಲ್ಲಿ 99 ಪ್ರತಿಶತಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದರೆ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ(Pondicherry) 100 ಪ್ರತಿಶತದಷ್ಟು ಮತದಾನವಾಗಿದೆ. ಸಂಸತ್ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಯಾರಿಗೆ ರಾಷ್ಟ್ರಪತಿ(President) ಸ್ಥಾನ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ ಭವನವನ್ನು ತಲುಪಿದ್ದು, ಚುನಾವಣಾಧಿಕಾರಿಗಳು(Election Commissioner) ಸಂಸತ್ತಿನ ಸ್ಟ್ರಾಂಗ್ರೂಮ್ ಕೊಠಡಿ ಸಂಖ್ಯೆ 63 ರಲ್ಲಿ ಮತ ಎಣಿಕೆಗೆ ಸಿದ್ಧರಾಗಿದ್ದಾರೆ, ಅಲ್ಲಿ ಬಾಕ್ಸ್ಗಳನ್ನು ಸೂಕ್ತ ಭದ್ರತಯ ನಡುವೆ ಇರಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೇ ಇಂದು ಜುಲೈ 21 ಗುರುವಾರ ಬೆಳಗ್ಗೆ 11ಕ್ಕೆ ಆರಂಭಗೊಂಡು ಸಂಜೆ 5ಕ್ಕೆ ಮುಕ್ತಾಯಗೊಳ್ಳಲಿದೆ.