ಇತ್ತೀಚಿನ ದಿನಗಳಲ್ಲಿಆರೋಗ್ಯ ಕಾಪಾಡಿಕೊಳ್ಳಬೇಕಾದರೆ, ಆಹಾರ ಕ್ರಮ, ವ್ಯಾಯಾಮ ಇತ್ಯಾದಿಗಳನ್ನು ನಿತ್ಯವೂ ಪಾಲಿಸಿಕೊಂಡು ಹೋಗಬೇಕು.ನಾವು ಅನುಸರಿಸುವ ಆಹಾರ ಕ್ರಮವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಮುಖ್ಯವಾಗಿ ಕೆಲವೊಂದು ಸಂದರ್ಭದಲ್ಲಿ ನಾವು ಫಾಸ್ಟ್ ಫುಡ್ ಗೆ ಮೊರೆ ಹೋಗುವ ಕಾರಣದಿಂದಾಗಿ ಆರೋಗ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುವುದು. ಹೀಗಾಗಿ ಪ್ರಕೃತಿದತ್ತವಾಗಿ ಸಿಗುವಂತಹ ಕೆಲವೊಂದು ಹಣ್ಣು ಹಾಗೂ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ, ಆಗ ಖಂಡಿತವಾಗಿಯೂ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ನಾವು ನಿಮಗೆ ಈ ಲೇಖನದಲ್ಲಿ ಪೇರಳೆ ಹಣ್ಣಿನ ಬಗ್ಗೆ ತಿಳಿಸಿಕೊಡಲಿದ್ದೇವೆ.
ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.ಈ ಹಣ್ಣನ್ನುಇನ್ನು ಕೆಲವರು ಚೇಪೆ ಕಾಯಿ ಅಂತ ಕೂಡ ಕರೆಯುತ್ತಾರೆ. ಈ ಹಣ್ಣಿನಲ್ಲಿ ಕಂಡು ಬರುವ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿವೆ. ಇದರಲ್ಲಿ ವಿಟಮಿನ್ ಸಿ, ಲೈಕೋಪೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಪೇರಳೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಮತ್ತು ಕೂದಲಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ಪೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
ಪೇರಳೆ ಹಣ್ಣಿನ ಪ್ರಯೋಜನಗಳು:
ಕಣ್ಣಿನ ಆರೋಗ್ಯವನ್ನು ಕಾಪಾಡುವುದು
ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿ ವಿಟಮಿನ್ ಎ ಅಗತ್ಯವಾಗಿ ಬೇಕು. ಪೇರಳೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ವಿಟಮಿನ್ ಎ ಗಳಿದೆ. ಪೇರಳೆ ಸೇವನೆಯಿಂದ ದೃಷ್ಟಿಯ ಸಮಸ್ಯೆಯನ್ನು ತಪ್ಪಿಸಬಹುದು. ಇದು ಕಣ್ಣುಗಳು ಒಣಗುವುದನ್ನು ತಡೆಯುವುದು ಮತ್ತು ಇರುಳುಗಣ್ಣಿನ ಅಪಾಯವನ್ನು ದೂರವಿಡಬಹುದು.
ಮಧುಮೇಹವನ್ನುನಿಯಂತ್ರಿಸುವುದು
ಇದು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.ಪೇರಳೆ ಹಣ್ಣಿನಲ್ಲಿ ನ್ಯಾಚುರಲ್ ಶುಗರ್ ಇರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಬಿಡುಗಡೆ ಮಾಡುವುದು. ಇದರಿಂದ ಬೇಗನೆ ಸಕ್ಕರೆ ಮಟ್ಟವು ಏರುವುದು ತಪ್ಪುವುದು.
ಮಿತವಾದ ಪ್ರಮಾಣದಲ್ಲಿ ಪೇರಳೆ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತೀರ ಕೆಳಮಟ್ಟಕ್ಕೆ ಇಳಿಯಬಹುದು.
ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ಪೇರಳೆಯಲ್ಲಿ ನಾರಿನಾಂಶವು ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು, ಮಲಬದ್ಧತೆ ನಿವಾರಣೆ ಮಾಡಿ, ಜಠರಕರುಳಿನ ಹಲವಾರು ಸಮಸ್ಯೆಗಳು, ಹೊಟ್ಟೆ ನೋವು, ಹೊಟ್ಟೆ ಕಿರಿಕಿರಿ, ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳನ್ನುನಿವಾರಿಸುತ್ತದೆ. ಪೇರಳೆ ಹಣ್ಣಿನಲ್ಲಿವಿಟಮಿನ್ ಸಿ ಮತ್ತು ಇತರ ಕೆಲವೊಂದು ಆಂಟಿಆಕ್ಸಿಡೆಂಟ್‌ಗಳಿವೆ, ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನುಸರಾಗವಾಗಿಸುತ್ತದೆ.
ಬೊಜ್ಜು ಕಡಿಮೆ ಮಾಡಲು ಸಹಕಾರಿ
ಪೇರಳೆ ಹಣ್ಣಿನಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆ ತುಂಬಿರುವಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದು.ಈ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ. ಚಯಾಪಚಯವನ್ನು ನಿಯಂತ್ರಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.