ಅಮೃತ ಕಾಲ ಅಲ್ಲ, ಜನರ ಸಂಕಷ್ಟ ಕಾಲ: ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
ಇಂಧನ ದರ ಏರಿಕೆ ಮತ್ತು ಆರ್ಥಿಕ ಒತ್ತಡದ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿ
ಜನರ ಸಮಸ್ಯೆಗಳಿಗೆ ಪರಿಹಾರ ಬದಲು ಉಪದೇಶ ನೀಡಲಾಗುತ್ತಿದೆ ಎಂದು ಆರೋಪ
Bengaluru : ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಇತ್ತೀಚಿನ ಹೇಳಿಕೆಗಳ ವಿರುದ್ಧ ಸಚಿವ ಪ್ರಿಯಾಂಕಾ ಖರ್ಗೆ ( Priyank Kharge) ತೀವ್ರ ವಾಗ್ದಾಳಿ ನಡೆಸಿದ್ದಾರೆ. (Priayank kharge shows outrage against Modi’s advice)
ಬಂಗಾರ ಖರೀದಿಸಬೇಡಿ, ಸರಳ ಜೀವನ ನಡೆಸಿ ಎಂಬ ರೀತಿಯ ಸಲಹೆಗಳು ಸಾಮಾನ್ಯ ಜನರ ಬದುಕಿನ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುವಂತಿವೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (In X) ಪೋಸ್ಟ್ ಮಾಡಿರುವ ಅವರು, “ಬಂಗಾರ ತ್ಯಜಿಸುವುದು ಅಚ್ಚೇ ದಿನ್, ಬದುಕು ತ್ಯಜಿಸುವುದು ಅಮೃತ್ ಕಾಲ, ಇದು ಮೋದಿ ಮ್ಯಾಜಿಕ್” ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಜನರಿಂದಲೇ
ತ್ಯಾಗವನ್ನು ನಿರೀಕ್ಷಿಸುವ ರಾಜಕೀಯವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.
ಕೋವಿಡ್ (Covid) ಅವಧಿಯಲ್ಲಿ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎಂಬ ಕರೆ ನೀಡಿದ ಸಂದರ್ಭವನ್ನು ಉಲ್ಲೇಖಿಸಿದ ಅವರು,
ಆ ಸಮಯದಲ್ಲಿ ಲಕ್ಷಾಂತರ ಜನರು ಸಂಕಷ್ಟ ಅನುಭವಿಸಿದರು ಎಂದು ಹೇಳಿದರು. (Priayank kharge shows outrage against Modi’s advice)
ಅದೇ ರೀತಿ ನೋಟು ಅಮಾನ್ಯೀಕರಣದ ವೇಳೆ 50 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಭರವಸೆ ನೀಡಲಾಗಿತ್ತು.
ಆದರೆ ಅದರ ಪರಿಣಾಮವಾಗಿ ಜನರು ಆರ್ಥಿಕ ಮತ್ತು ಸಾಮಾಜಿಕ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದರು.
ಇದೀಗ ಬಂಗಾರ ಖರೀದಿಸಬೇಡಿ, ಪೆಟ್ರೋಲ್(Petrol) ಮಿತವಾಗಿ ಬಳಸಿ ಎಂಬ ಸಂದೇಶಗಳು ಜನರಲ್ಲಿ ಆತಂಕ ಉಂಟುಮಾಡುತ್ತಿವೆ ಎಂದು ಖರ್ಗೆ ಹೇಳಿದ್ದಾರೆ.
2024ರಲ್ಲಿ ಕಾಂಗ್ರೆಸ್ ಮಂಗಳಸೂತ್ರ ಕಸಿದುಕೊಳ್ಳುತ್ತದೆ ಎಂದು ಆರೋಪಿಸಿದ್ದ ಬಿಜೆಪಿ, ಈಗ ಬಂಗಾರದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ
ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆ ಹಾಕುತ್ತಿದೆ ಎಂದು ಟೀಕಿಸಿದರು.
ಬಂಗಾರದ ಬೆಲೆ ಈಗಾಗಲೇ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವ ಸಂದರ್ಭದಲ್ಲಿ, ಚಿನ್ನ ಖರೀದಿಸಬೇಡಿ
ಎನ್ನುವುದು ಮಧ್ಯಮ ವರ್ಗ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಖರ್ಗೆ ಆಗ್ರಹಿಸಿದ್ದಾರೆ.
ಭಾರತವು ಆರ್ಥಿಕ ತುರ್ತು ಪರಿಸ್ಥಿತಿಯ ಅಂಚಿನಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಪ್ರಶ್ನಿಸಿದ ಅವರು, (Priayank kharge shows outrage against Modi’s advice)
ಇಂಧನ ಭದ್ರತೆ, ಸರ್ಕಾರದ ಖಜಾನೆಯ ಸ್ಥಿತಿ ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.
85 ಬಿಲಿಯನ್ ಡಾಲರ್ (85 billion dollars) ಗಾತ್ರದ ಭಾರತೀಯ ಜ್ಯುವೆಲ್ಲರಿ ಮಾರುಕಟ್ಟೆಯನ್ನು ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳ ಭವಿಷ್ಯದ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆಯೇ ಎಂದು ಪ್ರಶ್ನಿಸಿದರು.
ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi )ಶ್ವೇತಪತ್ರ ಬಿಡುಗಡೆ ಮಾಡಬೇಕು
ಅಥವಾ ವಿಶೇಷ ಅಧಿವೇಶನ ಕರೆದು ದೇಶದ ನೈಜ ಆರ್ಥಿಕ ಪರಿಸ್ಥಿತಿಯನ್ನು ಜನರಿಗೆ ತಿಳಿಸಬೇಕು ಎಂದು ಖರ್ಗೆ ಒತ್ತಾಯಿಸಿದರು.
ಇಂಧನ ದರ ಏರಿಕೆ, ಗ್ಯಾಸ್ ಬೆಲೆ ಹೆಚ್ಚಳ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ,
ಸರ್ಕಾರ ಜನರ ಬದುಕಿಗೆ ಪರಿಹಾರ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:https://vijayatimes.com/transport-employees-strike-against-government/