- ಪಾನ್ ಮಸಾಲ, ಗುಟ್ಕಾ, ಸಿಗರೇಟ್ ಪ್ರಿಯರಿಗೆ ಜಿಎಸ್ ಟಿ ಬರೆ
- ಲಾಟರಿ, ಕ್ಯಾಸಿನೊ, ಆನ್‌ಲೈನ್ ಗೇಮಿಂಗ್ ಮೇಲೂ ಹೆಚ್ಚುವರಿ ತೆರಿಗೆ
- ಪಾಸ್ಟ್ ಫುಡ್ ಸೇರಿದಂತೆ ಹಾನಿಕಾರಕ ಆಹಾರ ಪದಾರ್ಥಗಳ ಮೇಲೂ 40% ಜಿಎಸ್‌ಟಿ
New delhi: ಭಾರತ ಸರ್ಕಾರವು (Government of India) ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಮೇಲೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ ಧೂಮಪಾನ (Smoking),
ಮದ್ಯಪಾನ (Alcohol) ಹಾಗೂ ತಂಬಾಕು ಸೇವನೆ (Tobacco Consumption) ಆರೋಗ್ಯಕ್ಕೆ ಅಪಾಯಕಾರಿಯೆಂದು ಎಲ್ಲೆಡೆ ಎಚ್ಚರಿಕೆ ನೀಡಲಾಗುತ್ತಿದೆ. ಆದರೆ, ಇನ್ನೂ ಕೋಟ್ಯಾಂತರ ಜನರು ಈ ದುಷ್ಟಚಟಗಳಲ್ಲಿ ತೊಡಗಿಕೊಂಡಿದ್ದಾರೆ.
ಇಂತಹ ವ್ಯಸನಿಗಳನ್ನು ನಿಯಂತ್ರಿಸಲು ಹಾಗೂ ಸಮಾಜವನ್ನು ಹಾನಿಕಾರಕ ವಸ್ತುಗಳಿಂದ ದೂರವಿಡಲು ಕೇಂದ್ರ ಸರ್ಕಾರವು ದೊಡ್ಡ ನಿರ್ಧಾರ ಕೈಗೊಂಡಿದ್ದು, ತಂಬಾಕು ಉತ್ಪನ್ನಗಳ ಜೊತೆಗೆ ಕೆಲವು ಪಾನೀಯಗಳ ಮೇಲಿನ ಜಿಎಸ್‌ಟಿ (GST) ದರವನ್ನು ಹೆಚ್ಚಿಸಲಾಗಿದೆ.
ಪ್ರಸ್ತುತ ಪಾನ್ ಮಸಾಲ, ಗುಟ್ಕಾ, ಬೀಡಿ, ಸಿಗರೇಟ್, ಜರ್ದಾ, ಸಂಸ್ಕರಿಸದ ತಂಬಾಕು ಮತ್ತು ಸುಗಂಧಭರಿತ ತಂಬಾಕುಗಳ ಮೇಲೆ 28% ಜಿಎಸ್‌ಟಿ ಹಾಗೂ ಕಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತಿದೆ.
ಆದರೆ 2025ರ ಸೆಪ್ಟೆಂಬರ್ 22ರಿಂದ ಈ ಉತ್ಪನ್ನಗಳನ್ನು ನೇರವಾಗಿ 40% ಜಿಎಸ್‌ಟಿ ಸ್ಲ್ಯಾಬ್‌ಗೆ ವರ್ಗಾವಣೆ ಮಾಡುವ ನಿರ್ಧಾರ ಸರ್ಕಾರ ಕೈಗೊಂಡಿದೆ.
ಇದರ ಜೊತೆಗೆ ಸಕ್ಕರೆ ಮಿಶ್ರಿತ ಪಾನೀಯಗಳು, ಕಾರ್ಬೋನೇಟೆಡ್ ಡ್ರಿಂಕ್ಸ್, ಕೆಫೀನ್ ಮಿಶ್ರಿತ ಪಾನೀಯಗಳು ಮತ್ತು ಎನರ್ಜಿ ಡ್ರಿಂಕ್ಸ್‌ಗಳ ಮೇಲೂ ಇದೇ ಶೇಕಡ 40ರ ತೆರಿಗೆ ಜಾರಿಯಲ್ಲಿರಲಿದೆ. ಅಂದರೆ,
ಮುಂದಿನ ದಿನಗಳಲ್ಲಿ ಕುಲ್‌ಡ್ರಿಂಕ್ಸ್‌ಗಳ(Cooldrinks) ಬೆಲೆಯೂ ಗಣನೀಯವಾಗಿ ಏರಿಕೆಯಾಗಲಿದೆ.ಸಿಗರೇಟ್‌ಗಳ ಮೇಲೆ ಈಗಾಗಲೇ 28% ಜಿಎಸ್‌ಟಿ ಜೊತೆಗೆ ಸೆಸ್ ವಿಧಿಸಲಾಗುತ್ತಿದೆ.

ಈ ಸೆಸ್ ನಿರ್ದಿಷ್ಟ (Specific) ಹಾಗೂ ಅಡ್ವಾಲೋರಂ (Ad valorem) ಎಂಬ ಎರಡು ರೀತಿಯಾಗಿದೆ.
- ನಿರ್ದಿಷ್ಟ ಸೆಸ್ ಸಿಗರೇಟ್‌ನ ಉದ್ದವನ್ನು ಅವಲಂಬಿಸಿ ಪ್ರತಿ ಸ್ಟಿಕ್‌ಗೆ ₹2.1 ರಿಂದ ₹4.2ರವರೆಗೆ ಬದಲಾಗುತ್ತದೆ.
- ಜೊತೆಗೆ ಹೆಚ್ಚುವರಿ ಶೇಕಡಾವಾರು ತೆರಿಗೆ ಕೂಡ ಜಾರಿಯಲ್ಲಿದೆ. 74 ಮಿಲಿ ಮೀಟರ್‌ವರೆಗಿನ ಸ್ಟಿಕ್‌ಗಳಿಗೆ 5% ಹಾಗೂ 84 ಮಿಲಿ ಮೀಟರ್‌ಗಿಂತಲೂ ದೀರ್ಘವಾದ ಸ್ಟಿಕ್‌ಗಳಿಗೆ 36% ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ.
- ಆದರೆ ಹೊಸ ಕ್ರಮ ಜಾರಿಯಾದ ಬಳಿಕ ಇವುಗಳ ಮೇಲೆ ಸರಳ 40% ತೆರಿಗೆ ದರ ಅನ್ವಯವಾಗಲಿದೆ.
ಇನ್ನು ಹೊಸ ನಿಯಮ ಪ್ರಕಾರ, ಕೆಳಗಿನ ವಸ್ತುಗಳ ಬೆಲೆ ನೇರವಾಗಿ ಏರಿಕೆಯಾಗಲಿದೆ: - ಪಾನ್ ಮಸಾಲಾ, ಗುಟ್ಕಾ, ಸಿಗರೇಟ್‌ಗಳು
- ಜರ್ದಾ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳು
- ಸಂಸ್ಕರಿಸದ ತಂಬಾಕು
- ಬೀಡಿ ಮತ್ತು ಸುಗಂಧ ತಂಬಾಕು
- ಕಾರ್ಬೋನೇಟೆಡ್, ಕೆಫೀನ್ ಮಿಶ್ರಿತ ಪಾನೀಯಗಳು
- ಎನರ್ಜಿ ಡ್ರಿಂಕ್ಸ್ ಮತ್ತು ಸಕ್ಕರೆ ಮಿಶ್ರಿತ ಕುಲ್‌ಡ್ರಿಂಕ್ಸ್ ತಂಬಾಕು ಹಾಗೂ ಪಾನೀಯಗಳಷ್ಟೇ ಅಲ್ಲದೆ, ಇನ್ನೂ ಹಲವು ಐಷಾರಾಮಿ ಹಾಗೂ ಹಾನಿಕಾರಕ ವಸ್ತುಗಳ ಮೇಲೂ 40% ತೆರಿಗೆ ಅನ್ವಯಿಸಲಾಗುತ್ತಿದೆ. ಅವುಗಳಲ್ಲಿ:
- ಲಾಟರಿ ಟಿಕೆಟ್‌ಗಳು, ಕ್ಯಾಸಿನೊ ಸೇವೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು
- ಹೆಚ್ಚಿನ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶವಿರುವ ಫಾಸ್ಟ್ ಫುಡ್, ಪ್ಯಾಕ್ ಮಾಡಿದ ತಿಂಡಿಗಳು
- 1,500 ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಸ್‌ಯುವಿಗಳು ಮತ್ತು 4 ಮೀಟರ್‌ಗಿಂತ ಉದ್ದದ ವಾಹನಗಳು ಅಂದರೆ, ಮುಂದಿನ ದಿನಗಳಲ್ಲಿ ಈ ಎಲ್ಲ ವಸ್ತುಗಳ ಬೆಲೆಗಳು ದುಪ್ಪಟ್ಟಾಗಲಿವೆ.
ಇನ್ನು ಈ ಕ್ರಮವನ್ನು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗಿದೆ. ತಂಬಾಕು, ಮದ್ಯ, ಸಕ್ಕರೆ ಮಿಶ್ರಿತ ಪಾನೀಯಗಳ ಅತಿಯಾದ ಸೇವನೆಯಿಂದ ಡಯಾಬಿಟೀಸ್, ಹೃದಯಾಘಾತ,
ಕ್ಯಾನ್ಸರ್ ಮತ್ತು ಯಕೃತ್ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ದುಷ್ಟ ಚಟಗಳನ್ನು ತಡೆಯಲು ತೆರಿಗೆ ದರವನ್ನು ಹೆಚ್ಚಿಸುವುದು ಒಂದು ಪ್ರಾಯೋಗಿಕ ಮಾರ್ಗವಾಗಿದೆ. ಆರೋಗ್ಯ ತಜ್ಞರ(Health experts) ಪ್ರಕಾರ,
ಬೆಲೆ ಏರಿಕೆಯ ಪರಿಣಾಮವಾಗಿ ಜನರಲ್ಲಿ ಬಳಕೆ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಯುವಜನತೆ ತಂಬಾಕು ಮತ್ತು ಕುಲ್‌ಡ್ರಿಂಕ್ಸ್ ಸೇವನೆ ತಗ್ಗಿಸುವ ನಿರೀಕ್ಷೆಯಿದೆ.
ಇದರಿಂದ ದೀರ್ಘಾವಧಿಯಲ್ಲಿ ಆರೋಗ್ಯ ವೆಚ್ಚ ಕಡಿಮೆಯಾಗಬಹುದು.2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆಯಲ್ಲಿ ವಸ್ತುಗಳನ್ನು ಮುಖ್ಯವಾಗಿ 5%, 12%, 18% ಮತ್ತು 28% ಸ್ಲ್ಯಾಬ್‌ಗಳಲ್ಲಿ ಹಂಚಲಾಗಿತ್ತು.
ಆದರೆ ಈಗ ಹೊಸ ತಿದ್ದುಪಡಿ ಮೂಲಕ 40% ತೆರಿಗೆ ಸ್ಲ್ಯಾಬ್ ಸೇರಿಸಲಾಗಿದೆ. ಇದರಿಂದ ಹಾನಿಕಾರಕ ಹಾಗೂ ಐಷಾರಾಮಿ ವಸ್ತುಗಳನ್ನು ಹೆಚ್ಚುವರಿ ವರ್ಗದಲ್ಲಿ ಸೇರಿಸಿ ಸಾಮಾನ್ಯ ವಸ್ತುಗಳಿಂದ ದೂರವಿಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದೀಪಾವಳಿಗೆ ದೇಶದ ಜನತೆಗೆ “ಗಿಫ್ಟ್” ನೀಡುವುದಾಗಿ ಹೇಳಿದ್ದರು.
ಇದನ್ನು ಓದಿ : ಬೆಂಗಳೂರು ಪಬ್, ಬಾರ್, ಹೋಟೆಲ್‌ಗಳಿಗೆ ಬಿಬಿಎಂಪಿ ಬಿಗ್ ಶಾಕ್ – ಸ್ಮೋಕಿಂಗ್ ಝೋನ್ ಇಲ್ಲದಿದ್ದರೆ ಲೈಸನ್ಸ್ ರದ್ದು!
ಇದೀಗ ಜಿಎಸ್ಟಿ ಹೆಚ್ಚಿಸಿರುವುದು ವ್ಯಸನಿಗಳಿಗೆ ಬೇಸರ ತಂದಿದ್ದರೂ ಕೂಡ ಸಾಮಾನ್ಯರಿಗೆ ಹೆಚ್ಚಿನ ನೆಮ್ಮದಿ ನೀಡಲಿದೆ.