Visit Channel

ಪೆಟ್ರೋಲ್‌ ಡಿಸೇಲ್ ದರದಲ್ಲಿ ಮತ್ತೆ ಏರಿಕೆ

petrol-diesel-rupee

ಬೆಂಗಳೂರು ಅ 26 : ದೇಶಾದ್ಯಂತ ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಏರಿಕೆ ಆಗಿದ್ದು, ಇದರಿಂದಾಗಿ ಡೀಸೆಲ್ ಬೆಲೆಯೂ ಕೂಡ 100ರ ಗಡಿ ದಾಟಿ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಪೆಟ್ರೋಲ್ ರೇಟ್ ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವು ನಾಗಾಲೋಟದಲ್ಲಿದ್ದು ಕಳೆದ ವಾರದಿಂದ ದಿನವೂ ಪೈಸೆ ಲೆಕ್ಕದಲ್ಲಿ ಏರಿಕೆಯಾಗಿತ್ತು ಭಾನುವಾರ ಕೂಡ ಪೆಟ್ರೋಲ್ ದರ ಲೀಟರಿಗೆ 35 ಪೈಸ ಹೆಚ್ಚಳವಾಗಿತ್ತು. ಇದರಿಂದಾಗಿ ದೇಶಾದ್ಯಂತ ಆಯಾ ರಾಜ್ಯಗಳತರಿಗೆ ಆಧರಿಸಿ, ದರವೂ ವಿಭಿನ್ನವಾಗಿದೆ.

ಸೋಮವಾರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 107.59 ರೂಪಾಯಿ ಮತ್ತು ಡೀಸೆಲ್ ಬೆಲೆ 96.32 ರೂ. ಆಗಿದೆ. ಇದೇ ವೇಳೆ, ದೇಶದ ವಾಣಿಜ್ಯ ರಾಜಧಾನಿಯೆಂದು ಕರೆಸಿಕೊಳ್ಳುವ ಮುಂಬೈನಲ್ಲಿ ಪೆಟ್ರೋಲ್ ರೇಟ್ 113.46 ರೂ. ಆಗಿದ್ದು, ಡೀಸೆಲ್ ದರವು 104 ರೂಪಾಯಿ ಆಗಿದೆ.ಬೋಪಾಲ್ ನಲ್ಲಿ ಪೆಟ್ರೋಲ್ ದರ ಅತ್ಯಧಿಕ ಅಂದರೆ, 116.26 ರೂ. ಆಗಿದ್ದರೆ, ಡೀಸೆಲ್ ದರವು 105.54 ರೂಪಾಯಿಗೆ ಏರಿಕೆಯಾಗಿದೆ.

ದಕ್ಷಿಣ ಭಾರತದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ದರ 104.12 ಆಗಿದ್ದರೆ, ಡೀಸೆಲ್ ದರ 100,59 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರಿಗೆ 111.38 ರೂ ಆಗಿದ್ದು ಡೀಸೆಲ್ ದರವು 102.23 ರೂ.ಗೆ ಏರಿದೆ. ಬಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 108.11 ರೂ. ಆಗಿದೆ, ಡೀಸೆಲ್ ಬೆಲೆಯು 99.43 ಆಗಿದ್ದು ನೂರರ ಗಡಿಗೆ ಹತ್ತಿರ ತಲುಪಿದೆ. ಆಯಾ ರಾಜ್ಯಗಳ ತೆರಿಗೆ ಅಧರಿಸಿ, ಪೆಟ್ರೋಲ್‌, ಡೀಸೆಲ್ ದರವೂ ಹೆಚ್ಚು ಕಡಿಮೆ ಇರಲಿದೆ.

ಪೆಟ್ರೋಲಿಯಂ ಕಂಪನಿಗಳು ದರವನ್ನು ಏರಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೇಲಿನ ದರ ಏರಿಕೆ ಆಧರಿಸಿ ದೇಶದಲ್ಲಿ ಮಾಡುತ್ತದೆ, ಇದರ ನೇರ ಹೊರೆಯು ಜನರ ಮೇಲೆ ಬೀಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲಿಗೆ 85.79 ಡಾಲರ್ ಇದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.