ನಂದಿನಿ ಹಾಲು ದರ ಏರಿಕೆ (price of coffee tea increased) ಪರಿಣಾಮ
ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ದರ ಹೆಚ್ಚಳ ಅನಿವಾರ್ಯ ಎಂದ ಹೋಟೆಲ್ ಮಾಲೀಕರು
Bengaluru : ಈಗಾಗಲೇ ನಂದಿನಿ ಹಾಲಿನ ಬೆಲೆ ಏರಿಕೆಯಿಂದ (price of coffee tea increased) ಕಂಗಾಲಾಗಿರುವ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ಕಾಫಿ ಹಾಗೂ ಟೀ ಬೆಲೆಯನ್ನು ₹5 ಹೆಚ್ಚಿಸಲಾಗಿದೆ. ನವೆಂಬರ್ 1ರಿಂದ ನಂದಿನಿ ಹಾಲಿನ ಹೊಸ ದರ ಜಾರಿಗೆ ಬಂದಿದ್ದು, ಅದರ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೂ ಬಿದ್ದಿದೆ.

ಹೀಗಾಗಿ ನವೆಂಬರ್ 2ರಿಂದಲೇ ಪರಿಷ್ಕೃತ ದರ ಜಾರಿಗೆ ತರಲಾಗಿದ್ದು, ಇನ್ಮುಂದೆ ಪ್ರತಿದಿನ ಹೋಟೆಲ್‌ಗಳಲ್ಲಿ ಕಾಫಿ ಅಥವಾ ಟೀ ಕುಡಿಯುವ ಗ್ರಾಹಕರು ಹೆಚ್ಚುವರಿ
ಹಣ ಪಾವತಿಸಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಈ ಬೆಳವಣಿಗೆ ಜನಸಾಮಾನ್ಯರ ದೈನಂದಿನ ಖರ್ಚಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜ್ಯದ ವಿವಿಧ ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ಪ್ರತಿ ಕಪ್ (price of coffee tea increased) ಕಾಫಿ ಹಾಗೂ ಟೀ ಬೆಲೆಯನ್ನು ₹5 ಹೆಚ್ಚಿಸಿ ಹೊಸ ದರ ಜಾರಿಗೆ ತರಲಾಗಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈ ಹಿಂದೆ ಹಾಲಿನ ದರ ಏರಿಕೆಯಿಂದ ಆಹಾರ ಪದಾರ್ಥಗಳ ಬೆಲೆಯನ್ನೂ ಪರಿಷ್ಕರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿತ್ತು.
ಇದೀಗ ಹಾಲಿನ ಖರೀದಿ ವೆಚ್ಚ ಹೆಚ್ಚಾಗಿರುವುದರಿಂದ ಹಳೆಯ ದರದಲ್ಲಿ ಕಾಫಿ, ಟೀ ಮಾರಾಟ ಮಾಡುವುದು ಕಷ್ಟವಾಗುತ್ತಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಹಾಲು ಪ್ರಮುಖ ಕಚ್ಚಾ ವಸ್ತುವಾಗಿರುವುದರಿಂದ ಅದರ ಬೆಲೆ ಏರಿಕೆ ಹೋಟೆಲ್ ಉದ್ಯಮದ ನಿರ್ವಹಣಾ ವೆಚ್ಚದ ಮೇಲೂ ಪರಿಣಾಮ ಬೀರಿದೆ.
ಹಾಲಿನ ವಿವಿಧ ಪ್ಯಾಕೆಟ್‌ಗಳ ಬೆಲೆಯಲ್ಲಿ ಲೀಟರ್‌ಗೆ ₹8ರಿಂದ ₹12ರವರೆಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ₹46 ಇದ್ದ ಟೋನ್ಡ್ (Toned) ಹಾಲಿನ ದರ ಈಗ ₹54ಕ್ಕೆ
ಏರಿಕೆಯಾಗಿದೆ. ₹47 ಇದ್ದ ಹೋಮೋಜಿನೈಸ್ಡ್ ಟೋನ್ಡ್ ಹಾಲು ₹56ಕ್ಕೆ ತಲುಪಿದೆ. ₹50 ಇದ್ದ ಹೋಮೋಜಿನೈಸ್ಡ್ ಹಸುವಿನ ಹಾಲಿನ ಬೆಲೆ ₹58 ಆಗಿದೆ.
ಅದೇ ರೀತಿ ₹52 ಇದ್ದ ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ದರ ತಲಾ ₹64ಕ್ಕೆ ಏರಿಕೆಯಾಗಿದೆ. ₹53 ಇದ್ದ ಹೋಮೋಜಿನೈಸ್ಡ್ ಶುಭಂ (Homogenized Shubham) ಹಾಲಿನ ಬೆಲೆ ಈಗ ₹65 ಆಗಿದೆ. ಈ ಹೊಸ ದರಗಳು ನವೆಂಬರ್ 1ರಿಂದ ಜಾರಿಗೆ ಬಂದಿವೆ.
ಹಾಲಿನ ಬೆಲೆ ಏರಿಕೆಯ ಪರಿಣಾಮ ಕೇವಲ ಕಾಫಿ ಮತ್ತು ಟೀಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಕಡಿಮೆ. ಮುಂಬರುವ ದಿನಗಳಲ್ಲಿ ಹಾಲಿನಿಂದ ತಯಾರಿಸುವ ಸಿಹಿತಿಂಡಿಗಳು, ಇಡ್ಲಿ, ದೋಸೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ.
ಹೋಟೆಲ್‌ಗಳ ನಿರ್ವಹಣಾ ವೆಚ್ಚ ಹೆಚ್ಚಾದರೆ ಮಧ್ಯಾಹ್ನದ ಊಟದ ದರಗಳ ಮೇಲೂ ಅದರ ಪರಿಣಾಮ ಬೀರಬಹುದು. ಈಗಾಗಲೇ ತರಕಾರಿ, ಅಡುಗೆ ಎಣ್ಣೆ,
ಗ್ಯಾಸ್ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಇದು ಮತ್ತೊಂದು ಹೊರೆಯಾಗುವ ಆತಂಕ ಮೂಡಿಸಿದೆ.
ನಂದಿನಿ ಹಾಲಿನ ಬೆಲೆಯನ್ನು ಕೊನೆಯ ಬಾರಿಗೆ 2025ರ ಏಪ್ರಿಲ್ 1ರಂದು ಲೀಟರ್‌ಗೆ ₹4 ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು 2024ರ ಜೂನ್‌ನಲ್ಲಿ 500 ಮಿಲಿ
ಪ್ಯಾಕೆಟ್‌ಗೆ ಹೆಚ್ಚುವರಿಯಾಗಿ 50 ಮಿಲಿ ಹಾಲು ನೀಡುವ ವ್ಯವಸ್ಥೆಗೆ ಅನುಗುಣವಾಗಿ ಲೀಟರ್‌ಗೆ ₹2 ಹೆಚ್ಚಳ ಮಾಡಲಾಗಿತ್ತು.
ಇದೀಗ ಮತ್ತೊಮ್ಮೆ ಹಾಲಿನ ದರದಲ್ಲಿ ಗಣನೀಯ ಏರಿಕೆಯಾಗಿರುವುದು ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಾಲಿನ ಬೆಲೆ ಏರಿಕೆಯಿಂದ ಹೋಟೆಲ್‌ಗಳ
ಆಹಾರ ದರಗಳೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಜೇಬಿಗೆ ಇನ್ನಷ್ಟು ಹೊರೆ ಬೀಳಲಿದೆಯೇ ಎಂಬ ಆತಂಕ ಎದುರಾಗಿದೆ.
ಇದನ್ನು ಓದಿ : https://vijayatimes.com/yathindra-siddaramaiah-meets-mahadevappa/