- ಹಬ್ಬಕ್ಕೆ ಊರಿಗೆ ತೆರಳಲು (Home for the festival) ಮುಂದಾಗಿರುವ ಜನರಿಗೆ ಬಿಗ್ ಶಾಕ್
- ದುಬಾರಿ ದರದಿಂದ (Expensive rates) ಜನ ಹೈರಾಣು
- ದುಪ್ಪಟ್ಟು ಹಣ ವಸೂಲಿ (Money recovery) ಮಾಡಲು ಮುಂದಾಗಿರುವ ಖಾಸಗಿ (Private bus Hike prices) ಬಸ್ ಮಾಲೀಕರು
Bengaluru: ಯುಗಾದಿ, ರಂಜಾನ್ ,ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ (Ugadi, Ramzan, Gauri Ganesh, Dussehra, Diwali, Sankranti) ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಸಾಕು ಖಾಸಗಿ ಬಸ್ (Private bus) ಮಾಲೀಕರಿಗೆ ಭರ್ಜರಿ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ (Double recovery) ಇಳಿದು ಬಿಡುತ್ತಾರೆ. ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಗುನ್ನಾ (Gunna for the pocket) ಇಡುತ್ತಾರೆ. ಇದೀಗ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಊರಿನ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ ಎದುರಾಗಿದೆ. ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ (Ugadi) , ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ (Leave for three days) ಸಿಗುತ್ತದೆ. ಹೀಗಾಗಿ ಮಾರ್ಚ್ 28 ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ (People are planning.) . ಆದರೆ ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ (Bangalore) ಬೇರೆ ಬೇರೆ ಊರಿಗೆ ಹೊರಡುವ ಖಾಸಗಿ ಬಸ್ ಟಿಕೆಟ್ (Private bus ticket) ದರ ಹೀಗಿದೆ.
(ಎಸಿ ಮತ್ತು ನಾರ್ಮಲ್ ಬಸ್ ದರ ವಿವರ ರೂಪಾಯಿಗಳಲ್ಲಿ)
ಬೆಂಗಳೂರು-ದಾವಣಗೆರೆ
ಪ್ರಸ್ತುತ ದರ = 450-1300
ಹಬ್ಬದ ದರ = 750-5500
ಬೆಂಗಳೂರು-ಧಾರವಾಡ
ಪ್ರಸ್ತುತ ದರ = 600-1100
ಹಬ್ಬದ ದರ = 1069-5500
ಬೆಂಗಳೂರು – ಹುಬ್ಬಳ್ಳಿ
ಪ್ರಸ್ತುತ ದರ=475-1100
ಹಬ್ಬದ ದರ=1200-4200
ಬೆಂಗಳೂರು-ಬೆಳಗಾವಿ
ಪ್ರಸ್ತುತ ದರ=389-1200
ಹಬ್ಬದ ದರ=1129-5500
ಬೆಂಗಳೂರು-ಮಂಗಳೂರು
ಪ್ರಸ್ತುತ ದರ=650-1300
ಹಬ್ಬದ ದರ=1200-4500
ಬೆಂಗಳೂರು-ಕಲ್ಬುರ್ಗಿ
ಪ್ರಸ್ತುತ ದರ=750-1000
ಹಬ್ಬದ ದರ=1200-2200
ಬೆಂಗಳೂರು-ರಾಯಚೂರು
ಪ್ರಸ್ತುತ ದರ=650-990
ಹಬ್ಬದ ದರ=1100-2990
ಬೆಂಗಳೂರು-ಹಾಸನ
ಪ್ರಸ್ತುತ ದರ=463-1000
ಹಬ್ಬದ ದರ=750-1600
ಬೆಂಗಳೂರು-ಯಾದಗಿರಿ
ಪ್ರಸ್ತುತ ದರ=699-900
ಹಬ್ಬದ ದರ=1300-2200
ಬೆಂಗಳೂರು-ಶಿವಮೊಗ್ಗ
ಪ್ರಸ್ತುತ ದರ =500-990
ಹಬ್ಬದ ದರ =1199-1800
ಇದನ್ನೂ ಓದಿ: http://ವಿಧಾನಸಭೆಯಲ್ಲಿ ಗದ್ದಲ : 6 ತಿಂಗಳವರೆಗೆ 18 ಬಿಜೆಪಿ ಶಾಸಕರು ಅಮಾನತು
ಇನ್ನು ಖಾಸಗಿ ಬಸ್ಗಳ ದರ ಏರಿಕೆಯ (Private bus fares increase) ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ ನಟರಾಜ್ ಶರ್ಮ (President Nataraj Sharma) ಅವರನ್ನು ಪ್ರಶ್ನಿಸಿದಾಗ, ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರ (State government) ಈ ಬಾರಿಯ ಬಜೆಟ್ನಲ್ಲಿ ಖಾಸಗಿ ಬಸ್ನವರಿಗೆ ಒಂದು ರೂಪಾಯಿ ಕೂಡ ಮೀಸಲಿಡಲಿಲ್ಲ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಬಸ್ ಮಾಲೀಕರು ಹಬ್ಬ ಮಾಡಬೇಕಲ್ಲವೇ? (Shouldn’t the bus owner be celebrating?) ರೋಡ್ ಟ್ಯಾಕ್ಸ್, ಇನ್ಸುರೆನ್ಸ್, ಹೊಸ ಬಸ್ ಗಳ ಬೆಲೆ, ಸ್ಪೇರ್ ಪಾರ್ಟ್ಸ್ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಾಗಿದೆ. (Private bus Hike prices) ಹಾಗಾಗಿ ಹಬ್ಬಗಳ ವೇಳೆ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.