ವಾಷಿಂಗ್‌ಟನ್ ಡಿ 16 : ಖಾಸಗಿ ಜೆಟ್ ಒಂದು ಪತನಗೊಂಡ ಪರಿಣಾಮ 9 ಮಂದಿ ಸಾವೀಗಿಡಾದ ಘಟನೆ ಅಮೆರಿಕಾದಲ್ಲಿ ನಡೆದಿದೆ. ತುರ್ತು ಲ್ಯಾಂಡಿಗ್ ಸಮಯದಲ್ಲಿ ಖಾಸಗಿ ಜೆಟ್ ಪತನಗೊಂಡ ಘಟನೆ ಸ್ಯಾಂಟೋ ಡೋಮಿಂಗೋದಲ್ಲಿರುವ ಲಾಸ್ ಅಮೆರಿಕಾಸ್ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ.
ವಿಮಾನ ದುರಂತ ವಿಷಾದಕರ. ಈ ಅಪಘಾತದಲ್ಲಿ ವಿಮಾನದೊಳಗೆ ಇದ್ದಂತಹ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 9 ಜನ ಮೃತಪಟ್ಟಿದ್ದಾರೆ ಎಂದು ಹೆಲಿಡೋಸ ಏವಿಯೇಷನ್ ಗ್ರೂಪ್ ವಿಮಾನಯಾನ ಸಂಸ್ಥೆಯು ತಿಳಿಸಿದೆ.
ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಪ್ಲೋರಿಡಾಗೆ ಹೊರಟ ವಿಮಾನವು ಟೇಕ್ ಆಫ್ ಆದ 15 ನಿಮಿಷದಲ್ಲೇ ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತರ ಮಾಹಿತಿ ಕುರಿತು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ.