Bengaluru: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನಗಳ ಚಾಲಕರು ಮತ್ತು (Private Transport Strike Withdrawn) ಮಾಲೀಕರಿಗೆ ಹೊಡೆತಬಿದ್ದಿದೆ
ಎಂದು ಇಂದು (ಸೆ. ೧೧) ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು, ಕ್ಯಾಬ್ ಮಾಲೀಕರು ಫ್ರೀಡಂ ಪಾರ್ಕ್ ನಲ್ಲಿ (Freedom Park) ಬಂದ್ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು.
ಆದರೆ ಇವರ ಬೇಡಿಕೆಯನ್ನು ಈಡೇರಿಸುವುದಾಗಿ ಅಲ್ಲಿಗೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಅವರು ಭರವಸೆ ನೀಡಿರುವ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟವು
ಬೆಂಗಳೂರು (Bengaluru) ನಗರ ಬಂದ್ಅನ್ನು (Private Transport Strike Withdrawn) ಹಿಂಪಡೆದಿದ್ದಾರೆ.

ಬಂದ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ:
ಖಾಸಗಿ ಸಾರಿಗೆಯ ಕೆಲ ಬೇಡಿಕೆ ಈಡೇರಿಸಲು ಭರವಸೆ ನೀಡಿದ್ದೇನೆ ಮತ್ತು ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮಯ ಬೇಕಾಗುತ್ತದೆ ಹಾಗೂ ನಾನೇ ಖಾಸಗಿ ಸಾರಿಗೆಯವರ ಪರ ಇದ್ದೇನೆ.
ಕೆಲವರು ಯಾವುದೇ ಅನುಮತಿ ಇಲ್ಲದೆ ಬೈಕ್ ಟ್ಯಾಕ್ಸಿ (Bike Taxi) ಓಡಿಸುತ್ತಿದ್ದಾರೆ. ಅಂತವರಿಗೆ ಸದ್ಯದಲ್ಲೇ ಹೊಸ ಆ್ಯಪ್ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಅಲ್ಲದೆ ನಾನು ನಿಮ್ಮ ಪರವಾಗಿದ್ದೇನೆ ನಿಮಗೆ ಸಹಾಯ ಮಾಡಲು ಪ್ರಯತ್ನ ಮಾಡಿದ್ದೇನೆ. ಈ ಹಿಂದೆ ಸಾರಿಗೆ ಸಚಿವ ಆಗಿದ್ದಾಗಲೂ ಸಹಾಯ ಮಾಡಿದ್ದೇನೆ ಮತ್ತು ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ
ಮಾಡುತ್ತೇವೆ ಹಾಗೂ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಸರ್ಕಾರದಿಂದ ಅಗ್ರೀಗೇಟ್ ಆಪ್ ಮಾಡಲು ಕ್ರಮ
ಕೈಗೊಳ್ಳಲಾಗುಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರಶ್ನೆಗಳು ಹಾಗೂ ಬೇಡಿಕೆಗಳು
1.ಮಹಿಳೆಯರಿಗೆ ಫ್ರೀ ಬಸ್ (Free bus) ಯೋಜನೆಯಿಂದ ಆಟೋಗಳು, ಸ್ಕೂಲ್ ಬಸ್ ಗಳ ಗತಿ ಏನು?
2.ಬಿಎಂಟಿಸಿಗೆ (BMTC) ಪರಿಹಾರ ಕೊಡುವ ರೀತಿ ಖಾಸಗಿ ವಾಹನಗಳಿಗೆ ಪರಿಹಾರ ಯಾಕಿಲ್ಲ?
3.ರ್ಯಾಪಿಡೋ ಬೈಕ್ ಟ್ಯಾಕ್ಸಿ (Rapido Bike Taxi) ಜೊತೆ ಒಳ ಒಪ್ಪಂದ ಇದ್ಯಾ?
4.ರ್ಯಾಪಿಡೋ ಬೈಕ್ ನಲ್ಲಿ ಹಿಂದಿನ ಸವಾರಿಗೆ ಹೆಲ್ಮೆಟ್ (Helmet) ಇಲ್ಲದೆ ಇದ್ದರೂ ಕ್ರಮ ಇಲ್ಲ ಏಕೆ?
5.ವಿದ್ಯಾನಿಧಿ ಯೋಜನೆ ಚಾಲಕರಿಗೆ ವಿಸ್ತರಣೆ ಏಕಿಲ್ಲ?
6.ವೈಟ್ ಬೋರ್ಡ್ (White Board) ಇರುವ ರ್ಯಾಪಿಡೋ ಬೈಕ್ ಗೆ ಅವಕಾಶ ಏಕೆ?
7.ಪೊಲೀಸರ ವರ್ತನೆ ಬದಲಾವಣೆ ಆಗಬೇಕು.
8.ರಾಜ್ಯಮಟ್ಟದಲ್ಲಿ ಪ್ರತಿಭಟನೆ ವಿಸ್ತಾರಣೆ ಮಾಡುತ್ತೇವೆ.
9.ರಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಆಗಲೇ ಬೇಕು
10.ಇತರ ರಾಜ್ಯಗಳಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸ್ಥಗಿತವಾಗಿದೆ. ಕರ್ನಾಟಕದಲ್ಲಿ ಏಕಿಲ್ಲ?

11.ಓಲಾ ಊಬರ್ (Ola, Uber) ಸೇವೆಯಲ್ಲಿ ಪಾರದರ್ಶಕತೆ ಇರಬೇಕು. ಕಂಪನಿಗೆ ಹಾಗೂ ಚಾಲಕರಿಗೆ ಎಷ್ಟು ದರ ಎಂಬುದು ಬಹಿರಂಗವಾಗಬೇಕು.
12.ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ
13.ಶಕ್ತಿ ಯೋಜನೆಯಿಂದ ಚಾಲಕರಿಗೆ ಅನ್ಯಾಯವಾಗಿದೆ. ಇದನ್ನು ನಿಲ್ಲಿಸಬೇಕು.
14.ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್
15.ಚಾಲಕರಿಗೆ ಸುಲಭ ಕಂತುಗಳಲ್ಲಿ, ಕಡಿಮೆ ಬಡ್ಡಿ ಯಲ್ಲಿ ಸಾಲ ನೀಡಬೇಕು.
16.ವಾಣಿಜ್ಯ ಬಳಕೆ ವಾಹನಗಳ ತೆರಿಗೆ ಯಥಾಸ್ಥಿತಿ ಕಾಪಾಡಬೇಕು.
17.ವೈಟ್ ಬೋರ್ಡ್ ನಲ್ಲಿ ಬಾಡಿಗೆ ವಿಚಾರವಾಗಿ ಕಾನೂನು ತರಬೇಕು
18.ಒಂದು ನಗರ ಒಂದು ದರ ನಿಗದಿ ಮಾಡಬೇಕು.
19.ಚಾಲಕರಿಗೆ ಆರೋಗ್ಯ ವಿಮೆ ಒದಗಿಸಬೇಕು
20.ಚಾಲಕರಿಗೆ ವಸತಿ ಯೋಜನೆ ಆರಂಭ
ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ
ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ನಟರಾಜ್ ಶರ್ಮಾ (Nataraj Sharma) ಅವರು ಬಂದ್ ಅನ್ನು ಹಿಂಪಡೆದ ಬಳಿಕ ಮಾತನಾಡಿದ್ದು, 32ರಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ
ಸಚಿವರು ಭರವಸೆ ನೀಡಿದ್ದಾರೆ ಹಾಗಾಗಿ ಬಂದ್ ಹಿಂಪಡೆಯುತ್ತಿದ್ದೇವೆ ಮತ್ತು ಟ್ಯಾಕ್ಸ್ (Tax) ಕಡಿಮೆ ಮಾಡುವುದರ ಬಗ್ಗೆಯೂ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ
ನಾಡಿದ್ದು ಮತ್ತೆ ಹೋರಾಟ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆಪ್ ಆಧಾರಿತ ರಾಪಿಡೋ ಬೈಕ್ ಟ್ಯಾಕ್ಸಿ, ಪೋರ್ಟರ್ (Porter), ಅಂಕಲ್ ಡೆಲಿವರಿ ಕಾನೂನು ಬಾಹಿರವಾಗಿದ್ದು, ಅವುಗಳ ಸಂಚಾರ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಖಾಸಗಿ ಸಾರಿಗೆ
ಸಂಘಟನೆಗಳ ಪ್ರಮುಖ ಬೇಡಿಕೆಯಾದ ರಾಪಿಡೋ ಬೈಕ್ ಟ್ಯಾಕ್ಸ್ ಹಾಗೂ ಓಲಾ, ಊಬರ್ ವಿಚಾರದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ (Supreme Court) ಪ್ರಕರಣಗಳು ಇದ್ದು, ಸ್ಟೇ
ತೆರವುಗೊಳಿಸುವ ನಿಟ್ಟಿನಲ್ಲಿ ಹಿರಿಯ ವಕೀಲರನ್ನು ನೇಮಕ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಇದನ್ನು ಓದಿ: ಸಿಸಿಬಿ ದಾಳಿ: ಅಪ್ರಾಪ್ತವರಿಗೆ ಮಧ್ಯ ಮಾರಾಟ ಹಿನ್ನೆಲೆ ಬೆಂಗಳೂರಿನ ಪಬ್, ಬಾರ್ ಗಳ ಮೇಲೆ ಸಿಸಿಬಿ ದಾಳಿ
- ಭವ್ಯಶ್ರೀ ಆರ್.ಜೆ