Bengaluru : ನಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಯಾಕೆ ಪ್ರಕಟಿಸಬೇಕು? ಈ ಮಸೂದೆ ಈ ಹಿಂದಿನ ಸುಪ್ರೀಂಕೋರ್ಟ್(Supremecourt) ತೀರ್ಪುಗಳ(Verdict) ಉಲ್ಲಂಘನೆ ಹೇಗಾಗುವುದಿಲ್ಲ ಎಂದು ಸರ್ಕಾರ ಬಹಿರಂವಾಗಿ ತಿಳಿಸಬೇಕು.

ಬಿಜೆಪಿ ಸರ್ಕಾರದ(BJP Government) ಬಳಿ ಬಲವಂತದ ಮತಾಂತರದ ದಾಖಲೆಗಳೇ ಇಲ್ಲ. ಕೇವಲ ಕೇಶವಕೃಪಾದ ಓಲೈಕೆಗೆ ಈ ಮಸೂದೆ ತಂದಿದ್ದಾರೆ ಎಂದು ಕಾಂಗ್ರೆಸ್ ಶಾಸಕ(Congress MLA) ಪ್ರಿಯಾಂಕ್ ಖರ್ಗೆ(Priyank Kharghe) “ಮತಾಂತರ ನಿಷೇಧ ಕಾಯ್ದೆ”ಯನ್ನು ವಿರೋಧಿಸಿದ್ದಾರೆ.
ಇದನ್ನೂ ಓದಿ : https://vijayatimes.com/hyderabad-liberation-day/
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರದ ಬಳಿ ಬಲವಂತದ ಮತಾಂತರದ ದಾಖಲೆಗಳೇ ಇಲ್ಲ. ಕೇವಲ ಕೇಶವಕೃಪಾದ ಓಲೈಕೆಗೆ ಈ ಮಸೂದೆ ತಂದಿದ್ದಾರೆ. ಸೆಕ್ಷನ್ 4ರಲ್ಲಿ, ಮತಾಂತರಗೊಂಡವರ ಬಗ್ಗೆ ರಕ್ತ ಸಂಬಂಧಿಗಳು ಮಾತ್ರವಲ್ಲ, ಮೂರನೇ ವ್ಯಕ್ತಿ ಕೂಡ ದೂರು ನೀಡಿದರೂ ಆ ದೂರು ದಾಖಲಾಗುತ್ತದೆ ಎಂದಿದೆ.

ಇದು ನೈತಿಕ ಪೊಲೀಸ್ ಗಿರಿಯಾಗಿದ್ದು, ಸಂವಿಧಾನಕ್ಕೆ ವಿರುದ್ಧವಾಗಿದೆ. ಸಂವಿಧಾನದತ್ತ ಹಕ್ಕನ್ನು ಬಳಸಿಕೊಳ್ಳಲು ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಯಾಕೆ ಪಡೆಯಬೇಕು? ಎಂದು ಪ್ರಶ್ನಿಸಿದ್ದಾರೆ. ಇನ್ನು ಮಸೂದೆಯಲ್ಲಿ, ಬಲವಂತದ ಮತಾಂತರ ಪ್ರಕರಣ ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದು, ಸರ್ಕಾರದ ಬಳಿ ಈ ಬಗ್ಗೆ ಅಂಕಿ ಅಂಶಗಳಿವೆಯೇ?
ಕಳೆದ 3 ವರ್ಷಗಳಲ್ಲಿ ಎಷ್ಟು ಮತಾಂತರವಾಗಿದೆ ಎಂದು ಹೇಳಿದೆಯೇ? ರಾಜ್ಯದಲ್ಲಿ ಬಲವಂತದ ಮತಾಂತರ ಹೆಚ್ಚಾಗಿದೆ ಎಂದು ಹೇಳುವ ಸರ್ಕಾರದ ಸಚಿವರೇ ಈ ಬಗ್ಗೆ ಅಂಕಿ ಅಂಶಗಳಿಲ್ಲ ಎಂದೂ ಹೇಳಿದ್ದಾರೆ. 40% ಕಮಿಷನ್, ಗುತ್ತಿಗೆದಾರರ ಸಂಘದ ದೂರು, ಬೆಂಗಳೂರಿನ ಅವ್ಯವಸ್ಥೆ, ಭ್ರಷ್ಟಾಚಾರ, ದುರಾಡಳಿತ ಮರೆಮಾಚಲು ಈ ಮಸೂದೆ ತಂದಿದ್ದಾರೆ.

ಮುಖ್ಯಮಂತ್ರಿಗಳೇ, ನೀವು ಯುಪಿ – ಎಂಪಿ ಮಾದರಿ ತರುತ್ತಿದ್ದೀರಿ. ನಮ್ಮದು ಬುದ್ಧ, ಬಸವ, ಗಾಂಧಿ, ಬಾಬಾಸಾಹೇಬರ ನಾಡು. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾಗಪುರದ ವಿಷಗೊಬ್ಬರ ಹಾಕಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
- ಮಹೇಶ್ ಪಿ.ಎಚ್