ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವೆ ಮಾತಿನ ಸಮರ ಬೃಹತ್ ಚಳುವಳಿಯಂತೆ ಮುನ್ನಗ್ಗುತ್ತಿದೆ. ಸದ್ಯ ದಿನೇ ದಿನೇ ರಾಜಕೀಯ ವಲಯದಲ್ಲಿ ವಿಭಿನ್ನವಾಗಿ, ವಿಶೇಷವಾಗಿ ತಮ್ಮದೇ ಶೈಲಿಯಲ್ಲಿ ಹೇಳಿಕೆಯನ್ನು ಕೊಡುವ ರಾಜಕಾರಣಿಗಳು ನಮ್ಮ ರಾಜ್ಯದಲ್ಲೇನು ಕಡಿಮೆಯಿಲ್ಲ! ಜನಪರ ಕೆಲಸ ಮಾಡುವುದಕ್ಕಿಂತ, ಜನರ ಕಷ್ಟಗಳಿಗೆ ಸ್ಪಂದಿಸುವುದಕ್ಕಿಂತ ಪರ-ವಿರೋಧದ ಹೇಳಿಕೆಗಳಿಗೆ ಸ್ಪಂದಿಸುವಲ್ಲಿ ಸದಾ ಮುಂದೆ ಎಂದೇ ಹೇಳಬಹುದು.

ಅದೇ ರೀತಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಸಮರ ತಾರಕಕ್ಕೆ ಏರಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ(Basavaraj Bommai) ಅವರ ವಿರುದ್ಧ ಕೇಳಿಬಂದ ಆರೋಪಕ್ಕೆ ಪ್ರತ್ಯಾರೋಪ ಮಾಡಿದ್ದಾರೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ. ಹೌದು, ಕಲಬುರ್ಗಿ(Kalburgi) ಜಿಲ್ಲೆಯ ದೇವರಾಜ ಅರಸು ಕಾಲದಿಂದಲೂ ಚಾಲ್ತಿಯಲ್ಲಿದ್ದಂತಹ ಸೌಲಭ್ಯಕ್ಕೆ ಬೊಮ್ಮಾಯಿ ಅವರ ಸರ್ಕಾರ ಕತ್ತರಿ ಹಾಕಿದೆ ಎಂಬ ಆರೋಪ ಕೇಳಿಬಂದ ಹಿನ್ನಲೇ,
ಕೊಡುವ ಕೈ ಕಾಂಗ್ರೆಸ್ ನದ್ದು-ಕಿತ್ತುಕೊಳ್ಳುವ ಕೈ ಬಿಜೆಪಿಯದ್ದು!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 11, 2022
ಉತ್ತರ ಕರ್ನಾಟಕದ ಜನರು ಬಿರು ಬೇಸಿಗೆಯಲ್ಲಿ ಬೇಯುತ್ತಿರುವಾಗ ಸರ್ಕಾರ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲು ಅವ್ಯವಸ್ಥೆ ಆಡಳಿತ ನೀತಿ ಜಾರಿ ಮಾಡಿದೆ.
CM ಅವರೇ,
ಉತ್ತರ ಕರ್ನಾಟಕದಲ್ಲಿ ಮೊದಲು ನೀವು, ಇಡೀ ದಿನ ಕುಳಿತು ಕೆಲಸ ಮಾಡಿ ತೋರಿಸಿ ಅಧಿಕಾರಿಗಳಿಗೆ ಉದಾಹರಣೆಯಾಗಿ. pic.twitter.com/QJLAJ6GevH
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಧ್ವನಿ ಎತ್ತಿದ್ದು, ಉತ್ತರ ಕರ್ನಾಟಕದ ಜನರು ಸುಡುವ ರಣ ಬೇಸಿಗೆಯಲ್ಲಿ ಬೇಯುತ್ತಿರುವಾಗ ಸರ್ಕಾರ ಇನ್ನಷ್ಟು ಸಂಕಷ್ಟಕ್ಕೆ ದೂಡಲು ಅವ್ಯವಸ್ಥೆ ಆಡಳಿತ ನೀತಿ ಜಾರಿ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಉತ್ತರ ಕರ್ನಾಟಕದಲ್ಲಿ ಮೊದಲು ನೀವು, ಇಡೀ ದಿನ ಕುಳಿತು ಕೆಲಸ ಮಾಡಿ ತೋರಿಸಿ ಅಧಿಕಾರಿಗಳಿಗೆ ಉದಾಹರಣೆಯಾಗಿ. ಕೊಡುವ ಕೈ ಕಾಂಗ್ರೆಸ್ ನದ್ದು- ಕಿತ್ತುಕೊಳ್ಳುವ ಕೈ ಬಿಜೆಪಿಯದ್ದು” ಎಂದು ಬರೆದು ಟ್ವೀಟ್ ಮಾಡುವ ಮೂಲಕ ಸಿಎಂಗೆ ಮಾತಿನ ಚಾವಟಿ ಬೀಸಿದ್ದಾರೆ.