Karnataka : ಗೋ ಹತ್ಯಾ ನಿಷೇಧ(Priyank Questions BJP Govt) ವಿಧೇಯಕದಿಂದ ಕರ್ನಾಟಕ್ಕೆ, ರಾಜ್ಯದ ರೈತರಿಗೆ, ಕಾರ್ಮಿಕರಿಗೆ, ಚರ್ಮೋಧ್ಯಮಕ್ಕೆ ಎಷ್ಟು ಲಾಭವಾಯಿತು? ಈ ಬಗ್ಗೆ ಯಾರಾದರೂ ಪರಿಶೀಲನೆ ಮಾಡಿದ್ದಾರೆಯೇ?

ಸರ್ಕಾರದ ಬಳಿ ಅಂಕಿ-ಅಂಶ ಇದೆಯೇ? ಸೂಕ್ಷ್ಮವಾಗಿ ಗಮನಿಸಿದರೆ ಈ ಕಾನೂನು ರೈತರಿಗೆ, ಮಾಂಸ ಉದ್ಯಮಕ್ಕೆ, ಚರ್ಮ ಉದ್ಯಮಕ್ಕೆ, ಕಾರ್ಮಿಕರಿಗೆ ಮಾರಕವಾಗಿದೆ ಎಂದು ಕಾಂಗ್ರೆಸ್(Congress) ನಾಯಕ ಪ್ರಿಯಾಂಕ್ ಖರ್ಗೆ(Priyank Questions BJP Govt) ಹೇಳಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಗೋವುಗಳ ನಿರ್ವಹಣೆ ವೆಚ್ಚ ಭರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಅದರೆ ರಾಜ್ಯದ 177 ಗೋಶಾಲೆಗಳ 21,207 ಜಾನುವಾರು ಪೈಕಿ ದತ್ತು ಪಡೆಯಲಾದವು ಕೇವಲ 151 ಮಾತ್ರ.
ಇದನ್ನೂ ಓದಿ : https://vijayatimes.com/pfi-ban-petition-dismissed/
ಈಗ ‘ತಾವು ಗೋಮಾತೆಯ ರಕ್ಷಕರು’ ಎನ್ನುವ ಬಿಜೆಪಿ ಶಾಸಕರು, ಮಂತ್ರಿಗಳು, ಆರ್ಎಸ್ಎಸ್ ನವರು ಎಲ್ಲಿದ್ದಾರೆ? ಹಣಕಾಸು ಇಲಾಖೆ,
ಈ ವಿಧೇಯಕದಿಂದ ರಾಜ್ಯದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಅದರೆ ಬಿಜೆಪಿ ನಾಯಕರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ, ಕಾರ್ಮಿಕರು,
ರೈತರು, ಕೈಗಾರಿಕೆಗಳ ಬಗ್ಗೆ ಕಾಳಜಿಯಿಲ್ಲ. ಅವರಿಗೆ ಕಾಯ್ದೆ ಜಾರಿಗೆ ತಂದು ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಬೇಕಿತ್ತು ಎಂದು ಆರೋಪಿಸಿದ್ದಾರೆ.
ಗೋ ಶಾಲೆಯ ಪ್ರತಿ ಜಾನುವಾರಿನ ಮೇವಿಗೆ ₹70 ನಿಗದಿ ಮಾಡಿದ್ದಾರೆ, ಆದರೆ ₹150ಕ್ಕಿಂತ ಕಡಿಮೆ ಮೊತ್ತಕ್ಕೆ ಮೇವು ಸಿಗುತ್ತಿಲ್ಲ.

ಗೋ ಹತ್ಯೆ ನಿಷೇಧದಿಂದ ಕಡಿಮೆಯಾಗುವ ಮಾಂಸ ಉತ್ಪತ್ತಿ ಸರಿಗೊಳಿಸಲು 50% ರಷ್ಟು ಸಹಾಯ ಧನ ನೀಡಿ 76,650 ಕುರಿ ಘಟಕಗಳನ್ನು ರೈತರಿಗೆ ನೀಡಬೇಕಿದೆ.
ಇಲ್ಲಿಯವರೆಗೂ ಒಂದಾದರೂ ಘಟಕ ತೆರೆದಿದ್ದಾರಾ? ಈ ಕಾಯ್ದೆಯಿಂದ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅರ್ಥಿಕ ಇಲಾಖೆಯೇ ಹೇಳಿದೆ.
ಇದನ್ನೂ ಓದಿ : https://vijayatimes.com/pm-questioned-by-siddu/
ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯ ನಿರ್ಧಾರವನ್ನು ತಡೆ ಹಿಡಿಯುವ ಬಗ್ಗೆ ಆಲೋಚನೆ ನಡೆಸಬೇಕು ಎಂದೂ ವಿವರಿಸಿತ್ತು. ಆದರೆ ಸರ್ಕಾರ ಆ ಬಗ್ಗೆ ಕನಿಷ್ಠ ಗಮನವನ್ನೂ ಕೊಡಲಿಲ್ಲ ಎಂದು ಟೀಕಿಸಿದ್ದಾರೆ.
- ಮಹೇಶ್.ಪಿ.ಎಚ್