Bengaluru : ಕರ್ನಾಟಕ ರಾಜ್ಯ ಕಾಂಗ್ರೆಸ್(State Congress) ಪಕ್ಷದ ಶಾಸಕ ಪ್ರಿಯಾಂಕ್ ಖರ್ಗೆ(Priyank Slams BJP Govt) ಮೈಸೂರಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಉಂಟಾಗಿದ್ದ ಗುಂಡಿಗಳನ್ನು ತುಂಬುತ್ತಿರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೋ ಮುಖೇನ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ(Priyank Slams BJP Govt) ವಿರುದ್ಧ ವಾಗ್ದಾಳಿ ನಡೆಸಿದ ಅವರು,
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತವಾಗಿದ್ದರೆ, ಇತ್ತ ವಿದ್ಯಾರ್ಥಿಗಳು ರಸ್ತೆ ಗುಂಡಿಗಳನ್ನು ಮುಚ್ಚಲು ತಾವೇ ರಸ್ತೆಗೆ ಇಳಿದು ಗುಂಡಿಯನ್ನು ಮುಚ್ಚುತ್ತಿದ್ದಾರೆ.
ರಾಜ್ಯ ಸರ್ಕಾರ ಅಷ್ಟಕ್ಕೂ ಏನು ಮಾಡುತ್ತಿದೆ? ಸರ್ಕಾರ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತವಾಗಿದೆ. ಆದ್ರೆ ಇಲ್ಲಿನ ವಿದ್ಯಾರ್ಥಿಗಳು ಗುಂಡಿಗಳನ್ನು ಮುಚ್ಚುವಲ್ಲಿ ನಿರತವಾಗಿದೆ.
ಈ ವೀಡಿಯೋ ನೋಡಿದ ಬಳಿಕ ತಿಳಿಯುವುದು ಸರ್ಕಾರದ ಆದ್ಯತೆಗಳು ಸ್ಪಷ್ಟವಾಗಿವೆ! ಎಂಬುದು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
https://fb.watch/gY6CU0QX7E/ ಕಣ್ಮನ ಸೆಳೆದ ಫಿಫಾ ವಿಶ್ವಕಪ್ 2022
ಮೈಸೂರು(Mysuru) ಜಿಲ್ಲೆ ಹುಣಸೂರು(Hunsuru) ತಾಲೂಕಿನ ನರಸಿಂಹ ಸ್ವಾಮಿ ಲೇಔಟ್‌ನಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ತಮ್ಮ ಶಾಲೆ ಮತ್ತು ಸುತ್ತಮುತ್ತಲಿನ ಗುಂಡಿಗಳನ್ನು ತುಂಬುತ್ತಿರುವುದು ಕಂಡುಬಂದಿದೆ.
ಶಾಲೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಗುಂಡಿಗಳು ಪ್ರಮಾಣದಲ್ಲಿ ಕಂಡುಬಂದ ಕಾರಣ,
ಇದನ್ನೂ ಓದಿ : https://vijayatimes.com/sign-language-speaking-people/
ಶಾಲೆಯ ವಿದ್ಯಾರ್ಥಿಗಳು ತಂಡವಾಗಿ ಸೇರಿ, ಶಾಲೆಯ ಆಡಳಿತ ಮಂಡಳಿ ಸಹಾಯವನ್ನು ಪಡೆದು ರಸ್ತೆಯ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಕೆಲಸವನ್ನು ಮಾಡಿದ್ದಾರೆ.
ಗುಂಡಿಬಿದ್ದ ರಸ್ತೆಗಳಿಂದ ಪ್ರಯಾಣಿಕರು ಈ ಮಾರ್ಗದಲ್ಲಿ ಸಾಗಲು ಹರಸಾಹಸ ಪಡುವಂತಾಗಿದೆ ಜೊತೆಗೆ ಮಕ್ಕಳನ್ನು ಶಾಲೆಗೆ ಬಿಡಲು ಪೋಷಕರು ಕೂಡ ಪರದಾಡುವಂತಾಗಿದೆ.

ಹಲವಾರು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಾಗಲು ಸಮತೋಲನ ಕಳೆದುಕೊಂಡು ಗುಂಡಿಬಿದ್ದ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ನಿದರ್ಶನಗಳು ಉಂಟು.
ಈ ಸಮಸ್ಯೆ ಬಗ್ಗೆ ಶಾಲಾ ಅಧಿಕಾರಿಗಳು, ಲೋಕೊಪಯೋಗಿ ಸೇರಿದಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
https://twitter.com/PriyankKharge/status/1594579949964652544?s=20&t=AUj1b8wWiROU-s8UwQQYlQ
ಹೀಗಾಗಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಟ್ಟಡದ ಅವಶೇಷಗಳ ಸಹಾಯದಿಂದ ಗುಂಡಿಗಳನ್ನು ಸರಿಪಡಿಸಲು ಸ್ವತಃ ತಾವೇ ಮುಂದಾಗಿರುವುದು ವಿಪರ್ಯಾಸ! ಸದ್ಯ ಈ ಒಂದು ದೃಶ್ಯವನ್ನು ಗಮನಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ತಮ್ಮ ಟ್ವಿಟರ್(Twitter) ಖಾತೆಯಲ್ಲಿ ಈ ವೀಡಿಯೋ ಹಾಕಿ, ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.