ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ ನಡೆಸುತ್ತಿದ್ದು , ಪ್ರಿಯಾಂಕಾ ಗಾಂಧಿಯವರು (Priyanka contest from Mysore) ಕರ್ನಾಟಕದ ಕೊಡಗು – ಮೈಸೂರು ಅಥವಾ
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ . ಅಜ್ಜಿ ಇಂದಿರಾ ಗಾಂಧಿ (Indira Gandhi), ಅಮ್ಮ ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ
ಕಣಕ್ಕಿಳಿಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ. Bengaluru : ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಂಡಿರುವ ರಾಹುಲ್ ಗಾಂಧಿಯವರ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ ಈ ಕಾರಣದಿಂದ
ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮಹತ್ತರ ಜವಾಬ್ದಾರಿಯನ್ನು ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ಅವರನ್ನು ಕರ್ನಾಟಕದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಸುವ ಎಲ್ಲ ಸಾಧ್ಯತೆಗಳಿವೆ.
ಇದನ್ನು ಓದಿ: ಶಿಕ್ಷಣ ಸಚಿವರ ತವರಿನಲ್ಲಿ ಸೋರುತ್ತಿರುವ ಕೊಠಡಿಯೊಳಗೆ ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ ವಿದ್ಯಾರ್ಥಿಗಳು !
ಇನ್ನು ಕರ್ನಾಟಕದಲ್ಲಿ ಭರ್ಜರಿಯಾಗಿ ಜಯಗಳಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಗುರಿ ಹೊಂದಿದೆ. ಈ ಹಿನ್ನೆಲೆ ಕಾಂಗ್ರೆಸ್
ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಮೈಸೂರು – ಕೊಡಗು ಅಥವಾ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಪ್ಲಾನ್ ಮಾಡಲಾಗುತ್ತಿದ್ದು, ಪ್ರಿಯಾಂಕಾ ಅವರು
ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಸದ್ಯದ (Priyanka contest from Mysore) ಕುತೂಹಲವಾಗಿದೆ.
ಸದ್ಯಕ್ಕೆ ಪ್ರತಾಪ್ ಸಿಂಹರವರು ಮೈಸೂರು- ಕೊಡಗು ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದಕ್ಕಿಂತ ಮೊದಲು
ಮೈಸೂರು- ಕೊಡಗು ಕ್ಷೇತ್ರಕ್ಕೆ ಮೈಸೂರು ರಾಜಮನೆತನದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಚಿಂತಿಸಿತ್ತು. ಆದ್ರೆ ಅವರು ರಾಜಕೀಯದಲ್ಲಿ ನಿರಾಸಕ್ತಿ
ಹೊಂದಿರುವುದರಿಂದ ಪ್ರಿಯಾಂಕಾ ಗಾಂಧಿ ಅವರನ್ನು ಚುನಾವಣೆಗೆ ನಿಲ್ಲಿಸಲು ತಯಾರಿ ನಡೆಸಿದೆ.
ಪ್ರಿಯಾಂಕಾ ಗಾಂಧಿಯವರು ಮೈಸೂರಿನಿಂದ ಸ್ಪರ್ಧಿಸಲು ನಿರಾಕರಿಸಿದರೆ ಮಾಜಿ ಶಾಸಕರಾದ ಡಾ. ಯತಿಂದ್ರ ಸಿದ್ದರಾಮಯ್ಯ (siddaramaiah) ಅವರು ಸ್ಪರ್ಧಿಸುವುದು ಬಹುತೇಕ ಕನ್ಫರ್ಮ್ ಆಗಿದೆ.
ಅಲ್ಲದೆ ಪ್ರಿಯಾಂಕಾ ಗಾಂಧಿಯವರು ಅಲ್ಪ ರಾಜಕೀಯ ಜೀವನದಲ್ಲಿ ಕೆಲವು ಹಿನ್ನಡೆಗಳನ್ನು ಅನುಭವಿಸಿದ್ದಾರೆ. ಆದರೆ ಚುನಾವಣಾ ಪ್ರಚಾರ ಹಾಗು ಪಕ್ಷದ ನಾಯಕರೊಂದಿಗಿನ ಸಂಬಂಧದ
ವಿಚಾರದಲ್ಲಿ ರಾಹುಲ್ ಗಾಂಧಿಗಿಂತ (Rahul Gandhi) ಪ್ರಿಯಾಂಕಾ ಗಾಂಧಿ ಒಂದು ಕೈ ಮೇಲೆ ಎನ್ನುವುದು ಒಂದಿಷ್ಟು ಕಾಂಗ್ರೆಸ್ (Congress) ನಾಯಕರ ಅಭಿಮತವಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮುಖಚಹರೆ ಹೊಂದಿರುವ ಪ್ರಿಯಾಂಕ ಗಾಂಧಿಯವರು ಹಳ್ಳಿ ಹಾಗು ಹಳೆ ಕಾಲದ ಮತದಾರರಿಗೆ ಬೇಗ ಕನೆಕ್ಟ್ ಆಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ
ವಿರುದ್ಧ ದೃಢವಾದ ನಿಲುವು ಹೊಂದಿರುವ ಅವರು ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸುವ ತಾಕತ್ತು ಹೊಂದಿದ್ದಾರೆ. ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ವೀರೇಂದ್ರ ಪಾಟೀಲ್ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು.
ಚುನಾವಣಾ ನೇತೃತ್ವ ಹೊತ್ತ ದೇವರಾಜ ಅರಸ್ ಇಲ್ಲಿಂದ ಇಂದಿರಾ ಗಾಂಧಿ ಅವರನ್ನು ಗೆಲ್ಲುವಂತೆ ನೋಡಿಕೊಂಡಿದ್ದರು. ಆಗ ಇಂದಿರಾಗಾಂಧಿ ಅವರಿಗೆ ಡಿ.ಬಿ ಚಂದ್ರೇಗೌಡ (D.B Chandregowda)
ಅವರು ಕ್ಷೇತ್ರ ಬಿಟ್ಟು ಕೊಟ್ಟಿದ್ದರು ಅದೇ ರೀತಿ ಪ್ರಿಯಾಂಕಾ ಗಾಂಧಿ ಈಗ ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
1999 ರಲ್ಲಿ ಇವರ ತಾಯಿ ಸೋನಿಯಾ ಗಾಂಧಿ ಅವರುಬಳ್ಳಾರಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು, ಬಿಜೆಪಿ (BJP) ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಗೆಲುವು ಸಾಧಿಸಿದ ಸೋನಿಯಾ
ಗಾಂಧಿ ಕೊನೆಗೆ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಈಗ ಅದೇ ಮಾದರಿಯಲ್ಲಿ ಅಂದರೆ ಅಜ್ಜಿ, ತಾಯಿಯಂತೆ ಕರ್ನಾಟಕದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದೆ.
ಭವ್ಯಶ್ರೀ ಆರ್.ಜೆ