Bengaluru : ವಿಧಾನಸಭಾ ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಪಕ್ಷ(priyanka gandhi unveiled project) ಇದೀಗ ಮತ್ತೊಂದು ಯೋಜನೆಯನ್ನು ಜನರ ಮುಂದಿಟ್ಟಿದೆ! ಕರ್ನಾಟಕ ಕಾಂಗ್ರೆಸ್ ಸೋಮವಾರ ‘ಗೃಹ ಲಕ್ಷ್ಮಿ’ (Gruha lakshmi)ಯೋಜನೆಯನ್ನು ಘೋಷಿಸುವ ಮುಖೇನ ತಮ್ಮ ಎರಡನೇ ಯೋಜನೆಯನ್ನು ಅನಾವರಣಗೊಳಿಸಿದೆ.

ಈ ಬಗ್ಗೆ ಹೆಚ್ಚು ವಿವರಣೆ ನೀಡಿರುವ ಕಾಂಗ್ರೆಸ್, ಈ ಯೋಜನೆಯಡಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗೃಹಿಣಿಗೆ ತಿಂಗಳಿಗೆ 2,000 ರೂ.
ಹಣವನ್ನು ನೀಡುವುದಾಗಿ ಭರವಸೆ ನೀಡಿದೆ. 1.5 ಕೋಟಿ ಗೃಹಿಣಿಯರಿಗೆ ಈ ಯೋಜನೆ ಅನುಕೂಲವಾಗಲಿದೆ ಎಂದು ಪಕ್ಷ ಹೇಳಿರುವ ಈ ಯೋಜನೆಯನ್ನು,
ಬೆಂಗಳೂರಿನ ಅರಮನೆ ಮೈದಾನದಲ್ಲಿ(priyanka gandhi unveiled project) ಪಕ್ಷದ ‘ನಾ ನಾಯಕಿ’ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka gandhi vadra) ಅವರ ಸಮ್ಮುಖದಲ್ಲಿ ಘೋಷಣೆ ಮಾಡಲಾಗಿದೆ.
ಇನ್ನು ಈ ಯೋಜನೆ ಬಗ್ಗೆ ತಿಳಿಯುತ್ತಿದ್ದಂತೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷವು(BJP), ಕಾಂಗ್ರೆಸ್ ಪಕ್ಷದ ಈ ಯೋಜನೆ ಕುರಿತು ವ್ಯಂಗ್ಯವಾಡಿದೆ.
ಇದು ‘ಮತ್ತೊಂದು ಸುಳ್ಳು’! ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ.
ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನಿರ್ಲಕ್ಷಿಸಲ್ಪಟ್ಟ ಮಹಿಳಾ ಸಬಲೀಕರಣ, ಅತ್ಯಾಚಾರ ಆರೋಪಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಪ್ರಶ್ನಾತೀತವಾಗಿ ಉಳಿದಿವೆ!

ಈಗ ತಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ಗೃಹ ಲಕ್ಷ್ಮಿ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ,
ಇದು ಖಾತರಿ ಸುಳ್ಳಿನ ಸರಣಿಯಾಗಿದೆ ಎಂದು ಬಿಜೆಪಿ ಪಕ್ಷ ವ್ಯಂಗ್ಯವಾಡಿದೆ. ಈ ಮೂರ್ಖತನದ ಬಗ್ಗೆ ರಾಜ್ಯದ ಜನತೆಗೆ ಅರಿವಿದೆ.
ಕಾಂಗ್ರೆಸ್ ಸರಣಿ ಸುಳ್ಳುಗಳನ್ನು ಪೋಣಿಸುವ ಮೂಲಕ ಜನರನ್ನು ನಂಬಿಸಲು ಯತ್ನಿಸುತ್ತಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್(Tweet) ಮಾಡಿದೆ.
ಇದನ್ನು ಓದಿ: https://vijayatimes.com/thejaswi-praksh-statement/
ರಾಜ್ಯದ ಎಲ್ಲ ಮನೆಗಳಿಗೂ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ತಿಳಿಸಿದ್ದ ಬೆನ್ನಲ್ಲೇ ಕಾಂಗ್ರೆಸ್ ಇದೀಗ ಮತ್ತೊಂದು ಯೋಜನೆಯ ಬಗ್ಗೆ ಘೋಷಣೆ ಮಾಡಿದೆ.
ಬೆಲೆ ಏರಿಕೆಯ ವಿರುದ್ಧ ಹೋರಾಡಲು ಕನ್ನಡಿಗರಿಗೆ ಸಹಾಯ ಮಾಡಲು ಮತ್ತು ಆಹಾರ, ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ವಸ್ತುಗಳನ್ನು ಉಳಿಸಲು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್(DK Shiva kumar) ಈ ಹಿಂದೆ ಹೇಳಿದ್ದರು.