Visit Channel

ಬಾಡಿಗೆ ತಾಯ್ತನವನ್ನು ಸಂಭ್ರಮಿಸುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ( Priyanka Chopra).!

priyanka nick joans

ಮುಂಬೈ ಜ 22 : ಬಾಲಿವುಡ್ ಅಂಗಳದಲ್ಲಿ ತಮ್ಮ ನಟನೆ ಹಾಗೂ ವಿಭಿನ್ನ ಕಥೆಯಾಧಾರಿತ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಮಾತ್ರವಲ್ಲದೇ, ಅಪಾರ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿರುವ ಪ್ರಮುಖ ನಟಿಯರಲ್ಲಿ ಪ್ರಿಯಾಂಕ ಛೋಪ್ರಾ ಮೊದಲಿಗರು. ಬಾಲಿವುಡ್ ಮಂದಿ ಪ್ರೀತಿಯಿಂದ ಪ್ರಿಯಾಂಕ ಛೋಪ್ರಾ ಅವರನ್ನು ಪಿಂಕಿ ಎಂದೇ ಇಂದಿಗೂ ಕರೆಯುತ್ತಾರೆ. 2018 ರಲ್ಲಿ ಪತಿ ನಿಕ್ ಜೋನ್ಸ್ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಪ್ರಿಯಾಂಕ ಛೋಪ್ರಾ ಯಾವುದೇ ಸಿನಿಮಾಗಳಲ್ಲೂ ಅಷ್ಟಾಗಿ ಅಭಿನಯಿಸಲಿಲ್ಲ.!  ಅಭಿಮಾನಿಗಳು ಪ್ರಿಯಾಂಕ ದಂಪತಿಗಳನ್ನು ಬಹಳ ದಿನದಿಂದ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸದ್ಯ ಈಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುವಲ್ಲಿ ನಿಕ್ ಛೋಪ್ರಾ ದಂಪತಿಗಳು ಯಶಸ್ವಿಯಾಗಿದ್ದಾರೆ. ಹೌದು, ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗುವಿಗೆ ಜನ್ಮ ನೀಡಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಕುರಿತು ಅವರ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಬಾಲಿವುಡ್ ಮಂದಿ ಚೋಪ್ರಾ-ನಿಕ್ ದಂಪತಿಗಳಿಗೆ ಶುಭ ಹಾರೈಸುತ್ತಿದ್ದು, ಈ ರೀತಿಯೇ ಬಾಡಿಗೆ ತಾಯ್ತನವನ್ನು ಕಂಡಿರುವ ಬಾಲಿವುಡ್ ತಾರೆಯರು ಮತ್ಯಾರು ಎಂದು ನೋಡುವುದಾದರೆ ಇಲ್ಲಿದೆ ನೋಡಿ ಅವರ ಮಾಹಿತಿ.

1. ನಟಿ ಶಿಲ್ಪಾ ಶೆಟ್ಟಿ(Shilpa Shetty) ಅವರು 2020 ರಲ್ಲಿ ಬಾಡಿಗೆ ತಾಯ್ತನವನ್ನು ತಮ್ಮ ಎರಡನೇ ಮಗುವಾದ ಸಮೀಶಾ(Samisha) ಎಂಬ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

2. ನವೆಂಬರ್ 2021 ರಲ್ಲಿ ಪ್ರೀತಿ ಜಿಂಟಾ( Preethi Zintha) ಮತ್ತು ಪತಿ ಜೀನ್ ಗುಡೆನೆಫ್( Jeen gudenef) ಅವರು ತಮ್ಮ ಕುಟುಂಬಕ್ಕೆ ಜೈ ಮತ್ತು ಗಿಯಾ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿಕೊಂಡರು.

3. ಮಾರ್ಚ್ 2017ರಲ್ಲಿ ಬಾಲಿವುಡ್ ನಿರ್ದೇಶಕ(Director), ನಿರ್ಮಾಪಕರಾದ( Producer) ಕರಣ್ ಜೋಹರ್( Karan Johar) ತಾವು ಅವಳಿ-ಜವಳಿ ಮಕ್ಕಳಿಗೆ ತಂದೆಯಾಗಿರುವ ಮಾಹಿತಿ ಹಂಚಿಕೊಂಡರು.

4. ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್(Shah Rukh Khan)2013 ರಲ್ಲಿ ಜನಿಸಿದ ಮಗ ಅಬ್ರಹಂ( Abraham) ಹುಟ್ಟಿದ್ದು ಈ ಪ್ರಕ್ರಿಯೇ ಮೂಲಕವೇ ಎಂದು ಬಹಿರಂಗಪಡಿಸಿದ್ದರು.

5. ಮಾಜಿ ದಂಪತಿಗಳಾದ ಕಿರಣ್ ರಾವ್(Kiran Rao) ಮತ್ತು ಅಮೀರ್ ಖಾನ್( Amir Khan) 2011 ರಲ್ಲಿ ಜನಿಸಿದ ತಮ್ಮ ಮಗ ಆಜಾದ್ ರಾವ್ ಖಾನ್( Azad Khan Rao) ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.