Hassan : ಮೈಸೂರಿನಿಂದ ಹಾಸನಕ್ಕೆ (Mysore to Hassan) ತೆರಳುತ್ತಿದ್ದ ವೇಳೆ ಜೀಪ್ ಪಲ್ಟಿಯಾಗಿ ಪ್ರೊಬೆಷನರಿ IPS ಅಧಿಕಾರಿ ಹರ್ಷಬರ್ದನ್ ಸಾವಿಗೀಡಾಗಿರುವ ಘಟನೆ ಹಾಸನದ ಗೊರೂರು ಬಳಿ ನಡೆಸಿದೆ.
ಮೈಸೂರಿನ ಪೊಲೀಸ್ (Mysore Police) ಅಕಾಡೆಮಿಯಲ್ಲಿ ತರಬೇತಿ ಮುಗಿಸಿ DySPಯಾಗಿ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗುವ ವೇಳೆ IPS ಅಧಿಕಾರಿ ಹರ್ಷವರ್ಧನ್ (Harsh Vardhan) ಸಾವನ್ನಪ್ಪಿದ್ದಾರೆ. ಹಾಸನಕ್ಕೆ ಬರುತ್ತಿದ್ದ ವೇಳೆ ಜೀಪ್ ಟಯರ್ ಸಿಡಿದು ಬುಲೆರೋ ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ (Hassan’s private hospital) ಕೊನೆಯುಸಿರೆಳೆದಿದ್ದಾರೆ.
IPS ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ (Such an accident) ಜರುಗಿದೆ ಎನ್ನುವುದು ಬಹಳಾ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷಬರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃ*ನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ (Karnataka) ಕೇಡರ್ಗೆ ಆಯ್ಕೆಯಾಗಿದ್ದ ಬಿಹಾರ ಮೂಲದ ಪ್ರೊಬೇಷನರಿ ಐಪಿಎಸ್ (IPS) ಅಧಿಕಾರಿ ಹರ್ಷಬರ್ಧನ್ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಾಸನಕ್ಕೆ ತೆರಳುವಾಗ ಮಾರ್ಗಮಧ್ಯೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ದುರಾದೃಷ್ಟಕರ. ಐಪಿಎಸ್ ಹುದ್ದೆಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ, ಹರ್ಷಬರ್ಧನ್ ಅವರ ಯಶಸ್ಸಿನ ಹಿಂದಿನ ಅವರ ಪರಿಶ್ರಮ, ಕುಟುಂಬದ ತ್ಯಾಗ ಹಾಗೂ ಪ್ರೋತ್ಸಾಹವನ್ನು ಮರೆಯಲಾಗದು. ಭವಿಷ್ಯತ್ತಿನಲ್ಲಿ ನಾಡಿನ ಸೇವೆಗೆ ಮಹತ್ವದ ಕೊಡುಗೆ ನೀಡಬಹುದಾದ ಒಬ್ಬ ಅಧಿಕಾರಿಯು ನಿರ್ದಯವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮೃತ ಹರ್ಷಬರ್ಧನ್ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (State BJP president BY Vijayendra) ಅವರು ಸಂತಾಪ ಸೂಚಿಸಿದ್ದಾರೆ.