ಚೀನಾ, ಆ. 12 : ಇತ್ತೀಚೆಗಷ್ಟೆ ಟೋಕಿಯೋ ಒಲಂಪಿಕ್ಸ್ ಮುಕ್ತಾಯವಾಗಿದ್ದು ಪದಕ ಗೆದ್ದವರಿಗೆ ಹಲವು ದೇಶಗಳು ಹಣದ ಜೊತೆ ಇನ್ನಿತರ ಉಡುಗೊರೆಗಳನ್ನು ಕೂಡ ನೀಡಿದೆ. ಹಾಗೆ ಚೀನಾದ 14ರ ಹರೆಯದ ಡೈವಿಂಗ್ ಪಟು ಕ್ವಾನ್ ಹಾಂಗ್ ಚನ್ ಒಲಂಪಿಕ್ ನಲ್ಲಿ ಚಿನ್ನ ಜಯಿಸಿದ್ದರು ಹಾಗಾಗಿ ಚೀನಾ ಸರ್ಕಾರ ಹಾಗೂ ಕೆಲವು ಉದ್ಯಮಿಗಳು ಇವರಿಗೆ ಹಣ ಮತ್ತು ಆಸ್ತಿಯನ್ನು ನೀಡಲು ಮುಂದಾಗಿದ್ದರು. ಆದರೆ ಡೈವಿಂಗ್ ಪಟು ಇದನೆಲ್ಲ ತಿರಸ್ಕಾರಗೊಳಿಸಿ ಅಚ್ಚರಿ ಮೂಡಿಸಿದ್ದಾರೆ.
ಕೇವಲ 14 ವರ್ಷದ ಚೀನಾದ ಡೈವಿಂಗ್ ಪಟು ಈ ಬಾರಿಯ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಚೀನಾದ ಎಲ್ಲರ ಮನೆಮಾತರಾಗಿದ್ದಾರೆ. 100 ಮೀಟರ್ ಡೈವಿಂಗ್ ನಲ್ಲಿ ಕ್ವಾನ್ ಹಾಂಗ್ ಚನ್ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದರು. ಈ ಬಗ್ಗೆ ಮಾತನಾಡಿದ ಅವರು ನಾಲ್ಕು ವರ್ಷದ ಹಿಂದೆ ನನ್ನ ತಾಯಿಗೆ ಅಪಘಾತವಾಗಿತ್ತು ಅದಕ್ಕಾಗಿ ನನ್ನ ತಾಯಿಯನ್ನು ಸಾಕುವುದಕ್ಕಾಗಿ ನಾನು ಹಣ ಗಳಿಸುತ್ತೇನೆ ಎನ್ನುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಾಂಗ್ ಚನ್ ಹುಟ್ಟಿದ್ದು ದಕ್ಷಿಣ ಚೀನಾದ ಗುವಾಂಗ್ ಡಾಂಗ್ ನ ಮೈಹೆಯಲ್ಲಿ ತಂದೆ ಕಿತ್ತಳೆ ಕೃಷಿಕರಾಗಿ ಉದ್ಯೋಗ ಮಾಡುತ್ತಿದ್ದಾರೆ. ಒಲಂಪಿಕ್ ಗೆಲುವಿನ ಬಳಿಕ ಜಾಹಂಜಿಯಾಂಗ್ ನ ಆಸ್ಪತ್ರೆಯೊಂದು ಹಾಂಗ್ ಚನ್ ಅವರ ಅಮ್ಮ ಮತ್ತು ಅವರ ತಾತನಿಗೆ ಸಂಪುರ್ಣ ಉಚಿತ ಚಿಕಿತ್ಸೆ ಕೊಡುವುದಾಗಿ ಕೂಡ ಘೋಷಿಸಿತ್ತು. ಜೊತೆಗೆ ಜಾಹಂಜಿಯಾಂಗ್ ನ ಕೆಲವು ಉದ್ಯಮಿಗಳು ಇವರಿಗೆ ಮನೆ, ಟೆಕ್ ಶಾಪ್ ಮತ್ತು ಬೋನಸ್ ಕೂಡ ಕೊಡುವುದಾಗಿ ಹೇಳಿತ್ತು ಮತ್ತು ಹಾಂಗ್ ಚನ್ ಕುಟುಂಬಕ್ಕೆ ಹಲವು ಮೃಗಾಲಯಗಳು, ಉದ್ಯಾನವನಗಳು ಮತ್ತು ರೆಸಾರ್ಟಗಳು ಜೀವಮಾನ ಪರ್ಯಂತ ಉಚಿತ ಪಾಸ್ಗಳನ್ನು ಕೊಡವುದಾಗಿ ಕೂಡ ಹೇಳಿತ್ತು. ಸ್ಥಳೀಯ ಆಹಾರ ಪೂರೈಕೆಯ ಸಂಸ್ಥೆಯು ಹಾಂಗ್ ಚಾನ್ ಗೆ ಬಹು ಇಷ್ಟದ ಖಾದ್ಯವಾದ ಲ್ಯಾಟಿಯಾವೊ ವನ್ನು ಉಚಿತವಾಗಿ ಕೊಡುವುದಾಗಿ ವರದಿ ಮಾಡಿತ್ತು. ಅದರೆ ಈ ಎಲ್ಲಾ ಕೊಡುಗೆಗಳ ಬಗ್ಗೆ ಮಾತನಾಡಿದ ಹಾಂಗ್ ಚನ್ ತಂದೆ ಎಲ್ಲರೂ ನೀಡುತ್ತಿರುವ ಅವಕಾಶಗಳಿಗಾಗಿ ಧನ್ಯವಾದಗಳು ಆದರೆ ನಮಗೆ ಯಾವುದೇ ಕೊಡುಗೆಗಳು ಬೇಡ ಮತ್ತು ನಾವು ಒಂದು ಪೈಸೆ ಹಣವನ್ನು ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇವರ ಗೆಲುವಿನ ವಿಜಯೋತ್ಸವಕ್ಕಾಗಿ ಸಾಕಷ್ಟು ಮಂದಿ ಮನೆಬಳಿ ಜಮಾಯಿಸುತ್ತಿದ್ದು ಈ ಬಗ್ಗೆ ಅವರ ತಂದೆ ಖಾಸಗೀ ಪತ್ರಿಕೆಗೆ ನೀಡದ ಸಂದರ್ಶನದಲ್ಲಿ ಪ್ರಸ್ತುತ ಕೊರೊನಾ ಇರವುದರಿಂದ ಸಾಕಷ್ಟು ಜನ ಮನೆ ಬಳಿ ಬರುವುದರಿಂದ ಕೊರನಾ ಹಾಟ್ ಸ್ಪಾಟ್ ಆಗುವ ಸಾಧ್ಯತೆಯಿದೆ ಹಾಗಾಗಿ ಶುಭಾಶಯ ತಿಳಿಸುವುದಕ್ಕಾಗಿ ಯಾರು ಕೂಡ ಮನಗೆ ಬರಬೇಡಿ ನೀವು ಬೇಕಾದರೆ ಶುಭಾಶಯಗಳನ್ನು ಸಂದೇಶದ ಮೂಲಕ ತಿಳಿಸಿಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಾಧರಣ ಮಧ್ಯಮ ಕುಟುಂಬವೊಂದು ತಮಗೆ ಬಂದಿರುವ ಹಣ ಮತ್ತುಆಸ್ತಿಗಳನ್ನು ತಿರಸ್ಕಾರಗೊಳಿಸುವ ಮೂಲಕ ತನ್ನ ಸರಳತೆಯನ್ನು ಎತ್ತಿ ಹಿಡಿದಿದೆ.