Bangalore : ಕನ್ನಡದ ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ (Actor Chetan Ahimsa) ಪ್ರತಿದಿನ ಒಂದಲ್ಲಾ ಒಂದು ವಿಚಾರವಾಗಿ ಚರ್ಚೆಯಾಗುತ್ತಾ ಬಂದಿದ್ದಾರೆ. ಈಗ ಅವರಿಗೆ (Protection of Chetan from deportation) ಕರ್ನಾಟಕ ಹೈಕೋರ್ಟ್ (High Court of Karnataka) ಗಡೀಪಾರಿನಿಂದ
ಮಧ್ಯಂತರ ರಕ್ಷಣೆ ನೀಡಿದೆ ಹಾಗೂ ಅವರಿಗೆ ಮುಂದಿನ ವಿಚಾರಣೆವರೆಗೂ ಅವರ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್ ಅನ್ನು ರದ್ದುಗೊಳಿಸಬಾರದೆಂದು ಸರ್ಕಾರಕ್ಕೆ ಸೂಚಿಸಿದೆ.
ಒಂದು ವೇಳೆ ಒಸಿಐ ಕಾರ್ಡ್ ರದ್ದುಗೊಂಡರೆ ಚೇತನ್ ಕುಮಾರ್ (Chetan Kumar) ಅಕ್ರಮ ವಲಸಿಗರಾಗುತ್ತಾರೆ ಹಾಗೂ ಅವರನ್ನು ಗಡೀಪಾರು ಮಾಡಬೇಕಾಗುತ್ತದೆ.
ಇತ್ತೀಚೆಗಷ್ಟೆ ಹಿಂದುತ್ವದ ಬಗ್ಗೆ ಟ್ವೀಟ್ (Tweet) ಮಾಡಿ ಅರೆಸ್ಟ್ ಆಗಿ ಜಾಮೀನು ಪಡೆದು ಹೊರ ಬಂದಿದ್ದರೂ
ಆಗಲೂ ಸುಮ್ಮನಿರದ ಚೇತನ್ ಗಾಂಜಾ ಕೃಷಿ, ಹಾಗೂ ತಿರುಪತಿ ದೇವಸ್ಥಾನದ ಬಗ್ಗೆ ಕೂಡ ತೀರಾ ಚರ್ಚೆಯಾಗುವಂತೆ ವಿವಾದಾತ್ಮಕವಾಗಿ ಮಾತನಾಡಿದ್ದರು .
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು (Central Govt) ಚೇತನ್ ವೀಸಾ ರದ್ದು ಮಾಡಿದೆ. ಗಡೀಪಾರಿನಿಂದ ಚೇತನ್ ಅವರಿಗೆ ಮಧ್ಯಂತರ ರಕ್ಷಣೆ
ನೀಡಿದವರು ಜಸ್ಟಿಸ್ ಎಂ ನಾಗಪ್ರಸನ್ನ.ಈ ಬಗ್ಗೆ ಮಾತನಾಡಿದ ಅವರು ಚೇತನ್ರವರು ನ್ಯಾಯಾಂಗದ ವಿರುದ್ಧ ಯಾವುದೇ
ರೀತಿಯ ಟ್ವಿಟ್ ಮಾಡಬಾರದು ಮತ್ತು ಈ ಕುರಿತಾದ ಅವರ ಎಲ್ಲಾ ಟ್ವಿಟ್ಗಳನ್ನು ಕೂಡ ಅಳಿಸಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/deadly-ice-cream/
ಚೇತನ್ರವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಅವರ ಒಸಿಐ ಕಾರ್ಡ್ ರದ್ದತಿ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ಈಗ ಅವರಿಗೆ ಸದ್ಯಕ್ಕೆ ಅವರ ಅಭಿಪ್ರಾಯ ಆಲಿಸುವ ಅವಕಾಶ ನೀಡಲಾಗಿಲ್ಲ , ಶೋಕಾಸ್ ನೋಟಿಸ್ ಮಾತ್ರ ನೀಡಿದೆ ಎಂಬುದನ್ನು (Protection of Chetan from deportation) ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.
ಅವರ ಮುಂದಿನ ವಿಚಾರಣೆಯು ಬರುವ ಜೂನ್ ತಿಂಗಳಿನಲ್ಲಿ ನಡೆಯಲಿದೆ. ಆದರೆ ಅವರಿಗೆ ವಿಧಿಸಲಾಗಿರುವ ಷರತ್ತನ್ನು ಈ ಅವಧಿಯಲ್ಲಿ ಅವರು ಉಲ್ಲಂಘಿಸಿದರೆ
ಅವರಿಗೆ ಗಡೀಪಾರಿನಿಂದ ನೀಡಲಾಗಿರುವ ರಕ್ಷಣೆಯು ಸ್ವಯಂಚಾಲಿತವಾಗಿ ಅನೂರ್ಜಿತಗೊಳ್ಳುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ಕರ್ನಾಟಕ ರಾಜ್ಯದಲ್ಲಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದು ವಿವಾದಾತ್ಮಕವಾಗಿ ಹೇಳಿದ್ದ ಚೇತನ್ ;
ಇತ್ತೀಚೆಗೆ “ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸುಖು (Himachal Pradesh CM Sukhwinder Sukhu) ,
ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿದ್ದು ಈ ವಿಷಯವಾಗಿ ಪರ ವಿರೀಧಗಳು ವ್ಯಕ್ತವಾಗುತ್ತಿದೆ .
ಇದರ ನಡವೆ ಕರ್ನಾಟಕದಲ್ಲಿಯೂ ಅದು ಜಾರಿಯಾಗಲಿ” ಎಂದು ನಟ ಚೇತನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ (Social media) ಪೋಸ್ಟ್ ಹಂಚಿಕೊಂಡಿದ್ದರು.
ಜೊತೆಗೆ ಹಿಮಾಚಲ ಪ್ರದೇಶದ ಸಿಎಂ ನಡೆಗೆ ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ದರು. ಚತನ್ ಅವರ ಈ ವಿವಾದಾತ್ಮಕ ಹೇಳಿಕೆಗೆ ಹಲವಾರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : https://vijayatimes.com/lic-premium-collection-this-year/
ಹಿಂದೂಗಳ ಆಕ್ರೋಶಕ್ಕೆ ಕಾರಣವಾದ ತಿರುಪತಿ ದೇವಸ್ಥಾನದ ಬಗ್ಗೆ ಚೇತನ್ ವಿವಾದಾತ್ಮಕ ಮಾತು; ಚೇತನ್ ಇತ್ತೀಚೆಗೆ ಸುದ್ದಿ ಮಾಧ್ಯಮವೊಂದಕ್ಕೆ
ನೀಡಿದ ಸಂದರ್ಶನದಲ್ಲಿ ಬುದ್ಧನ ಮಂದಿರವನ್ನು ಕೆಡವಿ ಆ ಜಾಗದಲ್ಲಿ ತಿರುಪತಿ ದೇವಸ್ಥಾನ ಕಟ್ಟಿದ್ದಾರೆ ಎಂದು ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡಾ ಹಂಚಿಕೊಂಡಿದ್ದರು. ಹಿಂದೂಗಳ ಆಕ್ರೋಶಕ್ಕೆ ಇದು ಕಾರಣವಾಗಿದೆ.