Shikaripura: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಶಿಕಾರಿಪುರದಲ್ಲಿ (protest in Shikaripura) ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ತೀವ್ರತರ ಪ್ರತಿಭಟನೆ ನಡೆದಿದೆ.
ಈ ವೇಳೆ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ(B.S.Yeddiyurappa) ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲು ಮುಂದಾಗಿದ್ದು ಚಪ್ಪಲಿ, ಕಲ್ಲು ತೂರಾಟ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಳಮೀಸಲಾತಿ ವರದಿ ಅಂಗೀಕಾರದಿಂದ ಕೊರಚ, ಕೊರವ, ಭಜಂತ್ರಿ, ಭೋವಿ, ಬಂಜಾರ, ಡೊಂಬರ ಮುಂತಾದ ಅತ್ಯಂತ ಹಿಂದುಳಿದ ಜನಾಂಗಕ್ಕೆ ಭಾರೀ ಅನ್ಯಾಯವಾಗಿದೆ.
ಇದು ಬಿಜೆಪಿ (BJP) ಸರ್ಕಾರದ ದೊಡ್ಡ ಕುತಂತ್ರವಾಗಿದೆ.
ಚುನಾವಣಾ ಸಂದರ್ಭದಲ್ಲಿ ಸದಾಶಿವ ಆಯೋಗವನ್ನು ಜಾರಿಗೆ ತಂದು ಪರಿಶಿಷ್ಟರನ್ನು ನಾಶ ಮಾಡಲು ಹೊರಟಿದೆ ಎಂದು ಆರೋಪಿ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಬಂಜಾರ ಸಮುದಾಯದ ನೂರಾರು
ಮಂದಿ ಶಿಕಾರಿಪುರ ಪಟ್ಟಣದಲ್ಲಿನ ಯಡಿಯೂರಪ್ಪ ಅವರ ಮನೆ ಕಡೆಗೆ ನುಗ್ಗಿ, ಬ್ಯಾರಿಕೇಡ್ ಮುರಿದು ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಿದ್ದಾರೆ. ಕೆಲವು ಯುವಕರು ಛಾವಣಿ ಮೇಲೆ ಹತ್ತಿ ಬಿಜೆಪಿ
ಬಾವುಟವನ್ನು ಕಿತ್ತು ಹಾಕಿದರು. ಮೋದಿ ಚಿತ್ರವಿದ್ದ ಫ್ಲೆಕ್ಸ್ಗಳನ್ನು (Flex) ಹರಿದು ಹಾಕಿದರು ಆಕ್ರೋಶ (protest in Shikaripura) ವ್ಯಕ್ತಪಡಿಸಿದರು.
ಇದನ್ನು ಓದಿ : ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಅಷ್ಟು ಮಾತ್ರವಲ್ಲದೆ, ಕುಪಿತಗೊಂಡ ಪ್ರತಿಭಟನಾಕಾರರು ಯಡಿಯೂರಪ್ಪನವರ(Yeddiyurappa) ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಲಾಗಿದ್ದ ಸೀರೆಗಳನ್ನು ತಂದು ಯಡಿಯೂರಪ್ಪ ಅವರ ಮನೆ ಮುಂದೆ ಸುಟ್ಟು
ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನಾಕಾರರು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕಲ್ಲು ತೂರಾಟದಲ್ಲಿ ಸಣ್ಣಪುಟ್ಟ ಗಾಯಗಳೂ ಆಗಿವೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್
ಪಡೆಯನ್ನು ಕರೆಸಲಾಗಿದೆ. ಎಸ್ಪಿ ಮಿಥುನ್ ಕುಮಾರ್ (Mithun Kumar) ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಮತ ಹಾಕಬೇಡಿ: ಒಳಮೀಸಲಾತಿ ನಿರ್ಧಾರದ ಕುರಿತ ವಿರೋಧ ಕೇವಲ ಶಿಕಾರಿಪುರದಲ್ಲಿ ಮಾತ್ರ ವ್ಯಕ್ತವಾಗಿಲ್ಲ ಬದಲಾಗಿ ರಾಜ್ಯಾದ್ಯಂತ ನಾನಾ ಪರಿಶಿಷ್ಟ ಪಂಗಡದ ನಾಯಕರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಓಟಿನ ರಾಜಕೀಯಕ್ಕಾಗಿ ಡಬಲ್ ಇಂಜಿನ್ (Double Engine) ಸರ್ಕಾರ ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಬಂಜಾರ ಸಮುದಾಯದ
ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,

ಕಳೆದ ಜನವರಿ 4 ರಂದು ಸದಾಶಿವ ಆಯೋಗದ ವರದಿ ಜಾರಿ ಮಾಡಲ್ಲ ಎಂದು ಹೇಳಿ. ಈಗ ಆರ್ ಎಸ್ ಎಸ್ (RSS) ಕುಮ್ಮಕ್ಕಿನಿಂದ ಈಗ ಜಾರಿಗೊಳಿಸಿದೆ.
ನಾವು ಹಿಂದುಗಳೆಲ್ಲ ಒಂದು ಎಂದು ಹೇಳುವ ಬಿಜೆಪಿ (BJP) ಮತ್ತೆ ಒಳಮೀಸಲಾತಿ ಜಾರಿಗೆ ತಂದು ಅಸ್ಪೃಶ್ಯ, ಸ್ಪೃಶ್ಯ ಎಂದು ಮಾಡಿ ಕೆಲ ಜಾತಿಗಳಿಗೆ ಮೀಸಲಾತಿ ಹೆಚ್ಚು ನೀಡಿ ಉಳಿದ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದೆ.
ಅದಕ್ಕಾಗಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬಾರದೆಂದು ಪ್ರತಿ ತಾಂಡಗಳಿಗೆ ತೆರಳಿ ಹೇಳಲಿದ್ದೇವೆ ಎಂದು ಬಂಜಾರ ಮುಖಂಡರು ಘೋಷಿಸಿದ್ದಾರೆ.