Meghalaya : ಇತ್ತೀಚಿನ ದಿನಗಳಲ್ಲಿ ಮದುವೆಗಳು(Proud Daughter Mother) ಚಿತ್ರ-ವಿಚಿತ್ರವಾಗಿ ನಡೆಯುತ್ತಿರುವುದು ತೀರ ಸಮಾನ್ಯ ಸಂಗತಿಯಾಗಿದೆ. ಆದ್ರೆ, ಇಲ್ಲೊಂದು ಮದುವೆ ಚಿತ್ರ-ವಿಚಿತ್ರ ಅಲ್ಲದೇ ವಿಭಿನ್ನವಾಗಿ ನಡೆದಿರುವುದು ಅನೇಕರಿಗೆ ಅಶ್ಚರ್ಯ ಮೂಡಿಸಿದೆ.
ಹೌದು, ತನ್ನ 50 ವರ್ಷದ ತಾಯಿಗೆ ತಾನೆ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗಳ ಖುಷಿಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ತಂದೆ-ತಾಯಿ ಮಕ್ಕಳು ತಮ್ಮ ಎತ್ತರಕ್ಕೆ ಬೆಳೆದು, ಜೀವನ ನಡೆಸುವ ಸಾಮರ್ಥ್ಯವನ್ನು ಹೊಂದಿದ ಬಳಿಕ ಅವರ ಮದುವೆ ಮಾಡಲು ಸಕಲ ಸಿದ್ಧತೆ, ಜವಾಬ್ದಾರಿಯನ್ನು ಹೊತ್ತು ಬರುತ್ತಾರೆ.
ಆದ್ರೆ, ಈ ಘಟನೆಯಲ್ಲಿ ತನ್ನ 50 ವರ್ಷ ವಯಸ್ಸಿನ ತಾಯಿಗೆ ಮಗಳೇ ಮುಂದೆ ನಿಂತು ಮದುವೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Proud Daughter Mother) ಆಗಿದೆ.
ಇದನ್ನೂ ಓದಿ : https://vijayatimes.com/prasanth-sambargi-statement-on-pathan/
ಮೇಘಾಲಯದ, ಶಿಲ್ಲಾಂಗ್ ನಲ್ಲಿ ವಾಸವಿರುವ ಯುವತಿ ದೇಬ್ ಅರ್ತಿ ರಿಯಾ ಚಕ್ರವರ್ತಿ ಅವರ ತಾಯಿಯ ಮೊದಲ ಪತಿ ತನ್ನ ಅಮ್ಮನಿಗೆ 25 ವರ್ಷವಿದ್ದಾಗ ನಿಧನರಾದರು.
ಆಕೆಯ ಪತಿ ಶಿಲ್ಲಾಂಗ್‌ನಲ್ಲಿ ಪ್ರಸಿದ್ಧ ವೈದ್ಯರಾಗಿದ್ದರು, ಹಠಾತ್ ಮೆದುಳಿನ ರಕ್ತಸ್ರಾವದಿಂದ ನಿಧನ ಹೊಂದಿದರು.
ತನ್ನ ಗಂಡ ನಿಧನರಾದ ಬಳಿಕ ಮರು ಮದುವೆಯಾಗದ ಅವರು, ಏಕಾಂಗಿಯಾಗಿ ದೀರ್ಘಕಾಲ ಜೀವನದಲ್ಲಿ ಹೋರಾಟ ನಡೆಸಿ, ಮಗಳನ್ನು ವಿದ್ಯಾವಂತೆ ಮಾಡಿದ್ದಾರೆ.
ಮದುವೆ ವಯಸ್ಸಿಗೆ ಬಂದ ಮಗಳು ರಿಯಾ ಚಕ್ರವರ್ತಿ, ತನ್ನ ತಾಯಿಗೆ ಮರು ಮದುವೆಯಾಗುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/vande-bharath-express-in-hubbali/
ಅನೇಕ ಬಾರಿ ಒತ್ತಾಯ ಮಾಡಿದ ಬಳಿಕ ಮಗಳ ಆಸೆಯಂತೆ ಮತ್ತೆ ಮದುವೆಯಾಗಲು ಅವರ ತಾಯಿ ಒಪ್ಪಿಗೆ ಸೂಚಿಸಿದ್ದಾರೆ. ತಮ್ಮ ತಾಯಿಗೆ 50ನೇ ವಯಸ್ಸಿನಲ್ಲಿ ಮದುವೆ ಮಾಡಿದ್ದಾರೆ ಮಗಳು ರಿಯಾ ಚಕ್ರವರ್ತಿ.
ಈ ಬಗ್ಗೆ ಸ್ಥಳೀಯ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಮಗಳು ರಿಯಾ ಚಕ್ರವರ್ತಿ,
“ಈಗ ನನ್ನ ತಾಯಿ ತುಂಬಾ ಸಂತೋಷವಾಗಿದ್ದಾರೆ ಮತ್ತು ಜೀವನವನ್ನು ತುಂಬಾ ಆನಂದಿಸುತ್ತಿದ್ದಾರೆ.” ಈ ಬಗ್ಗೆ ಹೆಚ್ಚಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ(Instagram) ವಿವರವಾಗಿ ಬರೆದು, ರೀಲ್ಸ್ ಪೋಸ್ಟ್ ಮಾಡುವ ಮುಖೇನ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ತಮ್ಮ ತಾಯಿಗೆ ಮರು ಮದುವೆಯ ಸಿದ್ಧತೆಗಳನ್ನು ವೀಡಿಯೋ(Video) ಮಾಡಿದ್ದಾರೆ. ತಾಯಿ-ಮಗಳ ಜೋಡಿಯು ಮದುವೆಗೆ ಮಾಡಿದ ಶಾಪಿಂಗ್,
https://fb.watch/hqxu1-caHH/ ನಿಮ್ಮ ಪ್ರಕಾರ ಮುಂದಿನ ಸಿಎಂ ಯಾರಾಗಬೇಕು? : ಜನಾಭಿಪ್ರಾಯ
ಉಡುಗೊರೆಗಳನ್ನು ತೆರೆಯುವುದು, ಮೆಹಂದಿ ಹಾಕಿಸಿಕೊಳ್ಳುವುದು ಮತ್ತು ಹಲವು ಬಗೆಯ ಸಂಭ್ರಮಗಳನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ತಾಯಿ ಅವರ ಮದುವೆ ಸಂಭ್ರಮದ ಒಂದು ತುಣುಕನ್ನು ಮತ್ತು ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ರೀಲ್ ಹಂಚಿಕೊಂಡ ಒಂದು ತಿಂಗಳ ಬಳಿಕ, ಸುಮಾರು 1000 ಬಾರಿ ವೀಕ್ಷಣೆ ಮಾಡಲಾಗಿದೆ ಮತ್ತು ಹಲವಾರು ಕಾಮೆಂಟ್‌ಗಳು ಈ ವೀಡಿಯೋಗೆ ಲಭಿಸಿದೆ.
ಇನ್‌ಸ್ಟಾಗ್ರಾಮ್ ಕಾಮೆಂಟ್‌ಗಳಲ್ಲಿ ಒಬ್ಬ ವ್ಯಕ್ತಿ, “ದೇವರು ವಧುವನ್ನು ಆಶೀರ್ವದಿಸಲಿ. ನಂಬಿಕೆ ಅರ್ಹರಾದ ಮಗಳು” ಎಂದು ಕಮೆಂಟ್ ಮಾಡಿದ್ದಾರೆ.
https://fb.watch/hqM7dyTJhi/ GATE CRASH ಪೊಲೀಸರಿಗೆ ರೂಲ್ಸ್ ಇಲ್ವಾ? ಪ್ರಶ್ನಿಸಿದ್ರೆ ಜೀಪು ಹತ್ತಿಸ್ತಾರೆ.
ಮತ್ತೋರ್ವ ವ್ಯಕ್ತಿ, “ನೀವು ನಿಮ್ಮ ತಾಯಿಗೆ ಅದ್ಭುತ ಮಗಳು. ಎಲ್ಲಾ ಹೆಣ್ಣುಮಕ್ಕಳು ನಿಮ್ಮಂತೆಯೇ ಇರಬೇಕೆಂದು ನಾನು ಬಯಸುತ್ತೇನೆ. ಮಾ ದುರ್ಗಾ ಯಾವಾಗಲೂ ನಿಮ್ಮನ್ನು ಆಶೀರ್ವದಿಸಲಿ” ಎಂದು ಕಮೆಂಟ್ ಮಾಡಿ ಶುಭ ಹಾರೈಸಿದ್ದಾರೆ.