Karnataka : ಇತ್ತೀಚೆಗೆ ಶಿಕ್ಷಣ ಇಲಾಖೆಯು (Department of Education) ವಿಧ್ಯಾರ್ಥಿಗಳ ಶಿಕ್ಷಣ ನೀತಿಯಲ್ಲಿ ಹೊಸದಾದ ನಿಯಮಗಳನ್ನು ಜಾರಿಗೊಳಿಸಲು ಯೋಜನೆ ಮಾಡಿದೆ. ಕೇಂದ್ರ ಸರ್ಕಾರ (Central Govt) ಈ ಸಲ 9 ರಿಂದ 12ನೇ ತರಗತಿಗಳ ಶಿಕ್ಷಣದಲ್ಲಿ ಬಾರಿ ಬದಲಾವಣೆಗಳನ್ನು ತರಲಿದೆ. ಮತ್ತು ಕರಡು ಪೂರ್ವ ಪಠ್ಯ ಕ್ರಮ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಎರಡು ಬಾರಿ ಸೆಮಿಸ್ಟರ್ ಪರೀಕ್ಷೆಯನ್ನು ಪಿಯುಸಿ ವಿಧ್ಯಾರ್ಥಿಗಳಿಗೆ ಜಾರಿಗೆ ತರಲು ನಿರ್ಧರಿಸಿದೆ. ಈಗಾಗಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳು ಕೊನೆಗೊಂಡಿದ್ದು, ಶಿಕ್ಷಣ ಇಲಾಖೆಯು ಇದೀಗ ಫಲಿತಾಂಶದ ವಿಷಯವಾಗಿ ಮುಖ್ಯ ಮಾಹಿತಿಯನ್ನು ಹೊರಡಿಸಿದೆ.
PUC ಶಿಕ್ಷಣವು ವಿಧ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ ಘಟ್ಟವಾಗಿದೆ. ಪರೀಕ್ಷೆಗಳು ವಿಧ್ಯಾರ್ಥಿಗಳಿಗೆ ಕಳೆದ ತಿಂಗಳ ಮಾರ್ಚ್ 9 ರಂದು ಆರಂಭವಾಗಿತ್ತು. ಮಾರ್ಚ್ 29 ರಂದು PUC ಪರೀಕ್ಷೆಯು ಕೊನೆಗೊಂಡಿತ್ತು. ಏಪ್ರಿಲ್ 5 ರಿಂದ 65 ಕೇಂದ್ರಗಳಲ್ಲಿ ದ್ವಿತೀಯ PUC ಮೌಲ್ಯಮಾಪನವು ಶುರುವಾಗಲಿದೆ.
ಇದನ್ನೂ ಓದಿ : https://vijayatimes.com/%e2%82%b9-40000-fine-for-violation/
ಇನ್ನು 25 ಸಾವಿರ ಉಪನ್ಯಾಸಕರನ್ನು PUC ವಿಧ್ಯಾರ್ಥಿಗಳ ಮೌಲ್ಯ ಮಾಪನಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 45 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯಲಿದೆ. ದ್ವಿತೀಯ ಪಿಯುಸಿ ಫಲಿತಾಂಶದ ಪ್ರಕಟಣೆಯು ಮೇ 5ನೇ ತಾರೀಖಿನಂದು ಪ್ರಕಟವಾಗುವ ಸಾಧ್ಯತೆಗಳಿವೆ. ಮತ್ತು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು 2023, ಮೇ 5ರಿಂದ ಪ್ರಾರಂಭವಾಗಲಿದೆ.
ಇದರಿಂದಾಗಿ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಮೇ ಮೊದಲನೇ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲು ಮೌಲ್ಯ ನಿರ್ಣಯ ಮಂಡಳಿ ನಿರ್ಧಾರ ಕೈಗೊಂಡಿದೆ. ಶಿಕ್ಷಣ ನೀತಿಯಲ್ಲಿ ಇನ್ನು ಮುಂದೆ SSLC ಹಾಗೂ PUC ವಿಧ್ಯಾರ್ಥಿಗಳ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ.
ಇದನ್ನೂ ಓದಿ : https://vijayatimes.com/cow-urine-drinking-side-effects/
10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂಕಗಳನ್ನು ನೀಡುವ ಸಮಯದಲ್ಲಿ ಹಿಂದಿನ ತರಗತಿಯ ಪರೀಕ್ಷಾ ಅಂಕಗಳನ್ನು ಪರಿಗಣಿಸಲಾಗುತ್ತದೆ. ಈ ಸಲ 11 ಮತ್ತು 12ನೇ ತರಗತಿಗಳ ವಿಧ್ಯಾರ್ಥಿಗಳು ಒಟ್ಟು 16 ವಿಷಯಗಳನ್ನು ಓದಬೇಕಾಗುತ್ತದೆ. ಹಾಗೂ 12ನೇ ತರಗತಿಗೆ 11ನೇ ತರಗತಿಯ ಅಂಕಗಳನ್ನು ಪರೀಕ್ಷಾ ಮೌಲ್ಯ ಮಾಪನದ ಸಮಯದಲ್ಲಿ ಪರಿಗಣಿಸಲಾಗುತ್ತದೆ.