Visit Channel

ದ್ರೌಪದಿ ಮುರ್ಮು ಬಿಜೆಪಿಯ ‘ಡಮ್ಮಿ’ ರಾಷ್ಟ್ರಪತಿ ಅಭ್ಯರ್ಥಿ : ಪುದುಚೇರಿ ಕಾಂಗ್ರೆಸ್

Puducherry Congress

ರಾಷ್ಟ್ರಪತಿ ಚುನಾವಣೆಗೆ(President Election) ಬಿಜೆಪಿ(BJP) ನೇತೃತ್ವದ ಎನ್‍ಡಿಎ(NDA) ಮೈತ್ರಿಕೂಟದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಾರ್ಖಂಡ್‍ನ(Jharkhand) ಮಾಜಿ ರಾಜ್ಯಪಾಲೆ ಮತ್ತು ಬುಡಕಟ್ಟು ಸಮುದಾಯಕ್ಕೆ(Tribal Community) ಸೇರಿದ ದ್ರೌಪದಿ ಮುರ್ಮು(Draupadi Murmu) ಅವರನ್ನು ‘ಡಮ್ಮಿ ರಾಷ್ಟ್ರಪತಿ ಅಭ್ಯರ್ಥಿ’ ಎಂದು ಪುದುಚೇರಿ ಕಾಂಗ್ರೆಸ್(Pondichery Congress) ಟೀಕಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

Draupadi Murmu


ಪುದುಚೇರಿ ಕಾಂಗ್ರೆಸ್ ಘಟಕದ ಅಧಿಕೃತ ಟ್ವೀಟರ್(Tweeter) ಖಾತೆಯಿಂದ ಮಾಡಲಾದ ಟ್ವೀಟ್‍ನಲ್ಲಿ, “ ಬಿಜೆಪಿಯೂ ದ್ರೌಪದಿ ಮುರ್ಮು ಅವರನ್ನು ಡಮ್ಮಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಲು ಬಯಸುತ್ತದೆ. ರಾಷ್ಟ್ರಪತಿ ಚುನಾವಣೆ ಮೂಲಕ ಬಿಜೆಪಿಯೂ ಎಸ್‍ಸಿ(SC) ಮತ್ತು ಎಸ್‍ಟಿ(ST) ಸಮುದಾಯಗಳನ್ನು ವಂಚಿಸಲು ಬಯಸುತ್ತದೆ” ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್‍ಗೆ ಎಲ್ಲೆಡೆಯಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. ಆದರೆ ಈ ಟ್ವೀಟ್‍ನ ಸ್ಕ್ರೀನ್‍ಶಾಟ್‍ಗಳು ಎಲ್ಲೆಡೆ ವೈರಲ್ ಆಗಿದ್ದು, ಕಾಂಗ್ರೆಸ್ ಪಕ್ಷದ ಈ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ(Shehjad Poonwala) ಈ ಕುರಿತು ಟ್ವೀಟರ್‍ನಲ್ಲಿ ಬರೆದುಕೊಂಡಿದ್ದು, “ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಮತ್ತು ಬುಡಕಟ್ಟು ಸಮುದಾಯವನ್ನು ಅವಮಾನಿಸುತ್ತಿದೆ. ಜಾರ್ಖಂಡ್‍ನ ರಾಜ್ಯಪಾಲೆಯಾಗಿ, 2 ಬಾರಿ ಶಾಸಕಿಯಾಗಿ, ಮಂತ್ರಿಯಾಗಿದ್ದ ದ್ರೌಪದಿ ಮುರ್ಮು ಅವರು ಅವಮಾನಕ್ಕೊಳಗಾಗಿದ್ದಾರೆ.” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು,

 bjp

ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ(Yashwanth Sinha) ಕಣಕ್ಕಿಳಿದಿದ್ದರೆ, ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಕಣಕ್ಕಿಳಿದಿದ್ದಾರೆ. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಎನ್‍ಡಿಎ ಮೈತ್ರಿಕೂಟ ಹೆಚ್ಚಿನ ಮತ ಮೌಲ್ಯ ಹೊಂದಿದ್ದು, ದ್ರೌಪದಿ ಮುರ್ಮು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.