ಪುನೀತ್ ಅಂತ್ಯಕ್ರಿಯೆ ಇಂದು ನಡೆಯಲಿದೆ. ಕಳೆದ ಎರಡು ದಿನಗಳಿಂದ ಪುನೀತ್ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಡಲಾಗಿತ್ತು. ಲಕ್ಷಗಟ್ಟಲೇ ಅಭಿಮಾನಿಗಳು ಅಪ್ಪುರನ್ನು ಕೊನೆಯ ಬಾರಿ ನೋಡಿ ಕಣ್ತುಂಬಿಕೊಂಡರು. ಕನ್ನಡ ಸೇರಿದಂತೆ ಪರಭಾಷಾ ಕಲಾವಿದರು ಕೂಡ ಅಪ್ಪು ನೋಡಲು ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಅಪ್ಪು ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ.