ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ ಜೋಡಿ ಪುನೀತ್ ಸಮಾಧಿ ಮುಂದೆ ಮದುವೆಯಾಗೋಕೆ ನಿರ್ಧರಿಸಿದೆ. ಎರಡು ವರ್ಷದಿಂತ ಪ್ರೀತಿ ಮಾಡುತ್ತಿರೋ ಈ ಜೋಡಿಗಳು ಇಬ್ಬರಿಗೂ ಅಪ್ಪು ಎಂದರೆ ಅಪಾರ ಅಭಿಮಾನ.
ರಾಘಣ್ಣ ಮತ್ತು ಶಿವಣ್ಣ ಅವರಿಗೆ ಫೋನ್ ಮಾಡಿ ಅನುಮತಿ ಪಡೆದಿದ್ದೇವೆ. ಅವರು ಬರಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಗುರು ಪ್ರಸಾದ್ ಹೇಳಿದ್ದಾರೆ.
ನಾವಿಬ್ಬರು ಅಪ್ಪು ಅವರ ಅಪ್ಪಟ ಅಭಿಮಾನಿಗಳು, ಅವರ ಅಕಾಲಿಕ ಅಗಲಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ರೀತಿ ಸಮಾಧಿ ಮುಂದೆ ಮದುವೆಯಾದ್ರೆ ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ. ಹೀಗಾಗಿ ಈ ನಿರ್ಧಾರ ಕೈಗೊಂಡಿರೋದಾಗಿ ನವ ಜೋಡಿ ತಿಳಿಸಿದೆ.
ಪುನೀತ್ ಬದುಕಿದಿದ್ದರೆ ಮದುವೆ ಬಳಿಕ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದುಕೊಂಡಿದ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಸಮಾಧಿ ಎದುರು ಮದುವೆ ಆಗುತ್ತೇವೆ.
‘ಜಾತಕ ತೋರಿಸಿ, ದೇವಸ್ಥಾನದಲ್ಲಿ ಮದುವೆ ಆಗುವುದು ಸಹಜ. ಹಾಗಂತ ದೇವಸ್ಥಾನದಲ್ಲಿ ಮದುವೆ ಆದವರು ಜೀವನ ಪರ್ಯಂತ ಚೆನ್ನಾಗಿ ಇರುತ್ತಾರೆ ಎಂದು ಹೇಳೋಕಾಗಲ್ಲ. ಪುನೀತ್ ಮಾಡಿದ ಸಮಾಜ ಸೇವೆ ನೋಡಿದರೆ ಅವರಿಗಿಂತ ದೊಡ್ಡ ದೇವರು ಯಾರೂ ಇಲ್ಲ ಎನಿಸುತ್ತದೆ’ ಎಂದು ಗಂಗಾ ಹೇಳಿದ್ದಾರೆ.