ಕೇವಲ ಒಂದು ಧರ್ಮದವರನ್ನು ಮಾತ್ರ ಕರೆಸಿ ವಿಧಾನಸೌಧದಲ್ಲಿ ಜನಸಾಮಾನ್ಯರ ತೆರಿಗೆ ಹಣದಲ್ಲಿ ಅದ್ದೂರಿಯಾಗಿ ಊಟ ಹಾಕುವುದು ಸಂವಿಧಾನ(Constitution) ವಿರೋಧಿ(Opposing) ಕೃತ್ಯ. ನಮ್ಮ ಸಂವಿಧಾನ ಧರ್ಮಾತೀತ. ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದೆ. ಆದರೆ ಹಿಂದೂಗಳ ಯುಗಾದಿ, ದೀಪಾವಳಿ ಮತ್ತು ಕೈಸ್ತರ ಕ್ರಿಸ್ಮಸ್ ಸೇರಿದಂತೆ ಯಾವುದೇ ಧರ್ಮದ ಆಚರಿಣೆಗೂ ವಿಧಾನಸೌಧದಲ್ಲಿ ಜಾಗವಿಲ್ಲ.

ಆದರೆ ಮುಸ್ಲಿಂ ಸಮುದಾಯಕ್ಕೆ ಮಾತ್ರ ಜನರ ತೆರಿಗೆ ಹಣದಲ್ಲಿ ಕೂಟ ಏರ್ಪಡಿಸುವುದನ್ನು ನಾವು ಒಪ್ಪುವುದಿಲ್ಲ ಎಂದು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಹೇಳಿದ್ದಾರೆ. ಓಲೈಕೆ ರಾಜಕಾರಣದಿಂದ ಇಷ್ಟು ವರ್ಷಗಳಿಂದ ಈ ಕೂಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ವಿಧಾನಸೌಧ ನಿಮ್ಮದಲ್ಲ. ಅದು ರಾಜ್ಯದ ಎಲ್ಲ ಪ್ರಜೆಗಳಿಗೂ ಸೇರಿದ್ದು. ಹೀಗಾಗಿ ಈ ಸಲ ಅಲ್ಲಿ ಇಫ್ತಾರ್ ಕೂಟವನ್ನು ಮಾಡಬಾರದು. ನಿಮಗೆ ಮುಸ್ಲಿಂ ಬಾಂಧವರ ಮೇಲೆ ಪ್ರೀತಿ ಇದ್ದರೆ ಖಾಸಗಿ ಹೋಟೆಲ್‍ನಲ್ಲಿ ನಿಮ್ಮ ಸ್ವಂತ ಹಣದಲ್ಲಿ ಬೇಕಿದ್ದರೆ, ಇಫ್ತಾರ್‍ಕೂಟವನ್ನು ಏರ್ಪಡಿಸಿ, ಅದಕ್ಕೆ ನಮ್ಮ ವಿರೋಧವಿಲ್ಲ.
ಆದರೆ ಯಾವುದೇ ಕಾರಣಕ್ಕೂ ಈ ಬಾರಿ ವಿಧಾನಸೌಧದಲ್ಲಿ ಜನರ ತೆರಿಗೆ ಹಣದಲ್ಲಿ ಇಫ್ತಾರ್‍ಕೂಟ ನಡೆಸಲು ನಾವು ಬೀಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಒಂದು ಧರ್ಮಕ್ಕೆ ಬೆಣ್ಣೆ ಇನ್ನೊಂದು ಧರ್ಮಕ್ಕೆ ಸುಣ್ಣ ಹಚ್ಚುವ ಕಾರ್ಯವನ್ನು ಒಪ್ಪಲು ಸಾಧ್ಯವಿಲ್ಲ. ಏಕಾದಶಿ, ಸಂಕ್ರಾಂತಿ, ಯುಗಾದಿ, ಕ್ರಿಸ್ಮಸ್ ಸೇರಿದಂತೆ ಯಾವುದೇ ಧರ್ಮದ ಆಚರಣೆಗೂ ಇಲ್ಲದ ಈ ಅವಕಾಶ ಕೇವಲ ಒಂದು ಧರ್ಮಕ್ಕೆ ಮಾತ್ರ ಏಕೆ? ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು.
ಇಫ್ತಾರ ಕೂಟವನ್ನು ಸರ್ಕಾರ ರದ್ದು ಮಾಡದಿದ್ದರೆ, ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಅನುಮತಿ ತೆಗೆದುಕೊಂಡಿದ್ದೇವೆ. ಇಫ್ತಾರ್ ಕೂಟ ಮಾಡಿದರೆ ಸರ್ಕಾರ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದರು.