ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಜುಲೈ 1 ರಿಂದ 300 ಯೂನಿಟ್ ಉಚಿತ(Free) ವಿದ್ಯುತ್(Electricity) ಘೋಷಿಸಿದೆ, ರಾಜ್ಯದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್(Bhagawanth Mann) ನೇತೃತ್ವದ ಸರ್ಕಾರವು ಒಂದು ತಿಂಗಳು ಪೂರ್ಣಗೊಂಡಿದೆ.
ಈ ಹಿನ್ನಲೆ, ಗುರುವಾರ ಜಲಂಧರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಭಗವಂತ್ ಮಾನ್, ‘16ರಂದು ಪಂಜಾಬ್ ಜನತೆಗೆ ಉತ್ತಮ ಸುದ್ದಿ ನೀಡಲಿದ್ದೇವೆ’ ಎಂದು ಸುಳಿವು ಕೊಟ್ಟಿದ್ದರು. ಪಂಜಾಬ್ನಲ್ಲಿ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಕುರಿತು ಚರ್ಚಿಸಲು ಭಗವಂತ್ ಮಾನ್ ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮೂಲಗಳು ತಿಳಿಸಿವೆ.
ಪ್ರತಿ ಮನೆಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು ಪಂಜಾಬ್ನಲ್ಲಿ ಕಳೆದ ತಿಂಗಳು ಮುಕ್ತಾಯವಾದ ವಿಧಾನಸಭಾ ಚುನಾವಣೆಯಲ್ಲಿ AAP ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ. ಭಗವಂತ್ ಮನ್ ಕಳೆದ ತಿಂಗಳು ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣಾ ಯೋಜನೆಯನ್ನು ಜಾರಿಗೆ ತಂದರು, ಇದು ಚುನಾವಣೆಯಲ್ಲಿ ಎಎಪಿಯ ಪ್ರಮುಖ ಪ್ರಚಾರ ಕಾರ್ಯಸೂಚಿಯಾಗಿದೆ ಎಂಬುದು ಗಮನಾರ್ಹ ಅಂಶ!