- ಸೋಮವಾರ ಬೆಳಿಗ್ಗೆ ಪೀಕ್ ಅವರ್ ಸಮಯದಲ್ಲಿ ಕೈ ಕೊಟ್ಟ ನಮ್ಮ ಮೆಟ್ರೋ
- ಸಿಗ್ನಲ್ ಸಮಸ್ಯೆಯಿಂದ ರೈಲುಗಳು ತಡ
- ಮೆಜೆಸ್ಟಿಕ್‌ನಲ್ಲಿ ಭಾರೀ ಜನದಟ್ಟಣೆ (Purple line metro Disruption)
Bengaluru: ಇಂದು ಬೆಳ್ಳಂಬೆಳಿಗ್ಗೆ ಸಿಗ್ನಲಿಂಗ್ ಸಮಸ್ಯೆಯಿಂದಾಗಿ (Signaling problem) ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ (Traffic disruption) ಉಂಟಾಗಿದ್ದು,
ಪರಿಣಾಮ ವಾರಾಂತ್ಯದ ರಜೆ ಬಳಿಕ ಸೋಮವಾರ ಕೆಲಸ, ಕಚೇರಿ, ಕಾಲೇಜುಗಳಿಗೆ (work, office, colleges) ಹೊರಟವರು ಸಮಸ್ಯೆ ಎದುರಿಸುವಂತಾಗಿದೆ.
ಪೀಕ್ ಅವರ್ ನಲ್ಲೇ ವ್ಯತ್ಯಯ ಎದುರಾಗಿದ್ದು, ನಮ್ಮ ಮೆಟ್ರೋ (Namma Metro) ಸಂಚಾರದ ಮೇಲೆ ಅವಲಂಬಿತರಾಗಿರುವ ಜನರು ಪೇಚಾಡುವಂತಾಗಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ (Majestic Metro Station) ಹಸಿರು ಹಾಗೂ ನೇರಳೆ ಬಣ್ಣದ ಇಂಟರ್‌ಚೇಂಜ್ ನಿಲ್ದಾಣವೂ (Interchange station) ಆಗಿದ್ದು,
ಇಂದು ಬೆಳಗ್ಗೆಯಿಂದ ಪ್ರಯಾಣಿಕರ ಭಾರೀ ದಟ್ಟಣೆಗೆ (Heavy traffic) ಸಾಕ್ಷಿಯಾಯಿತು.
ಸರಿಯಾದ ಸಮಯಕ್ಕೆ ಮೆಟ್ರೋ ಬಾರದೆ ಸಮಸ್ಯೆಯಾಗಿದ್ದರಿಂದ ಜನ ಟ್ರೈನ್ ಸಿಗದೆ ಪರದಾಡಿದರು.

ನಿಮಿಷ ನಿಮಿಷಕ್ಕೂ ನೂರಾರು ಪ್ರಯಾಣಿಕರ (Hundreds of passengers) ದಟ್ಟಣೆ ಉಂಟಾಗಿ ಮೆಜೆಸ್ಟಿಕ್ ನಿಲ್ದಾಣದಲ್ಲಿ (Majestic station) ಕಾಲಿಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಸಿಗ್ನಲಿಂಗ್ ಸಮಸ್ಯೆಯಿಂದಾಗಿ (Signaling problem) ಸಂಚಾರದಲ್ಲಿ ವ್ಯತ್ಯಯ ಎದುರಾಗಿತ್ತು. ನೇರಳೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆಯಾಗಿತ್ತು.
ಇದೀಗ ಎಲ್ಲವೂ ಸರಿ ಹೋಗಿದ್ದು ಸಹಜ ಸ್ಥಿತಿಗೆ ಮರಳುತ್ತಿದೆ. ಇದೀಗ ಮೆಟ್ರೋ ಕಾರ್ಯಾಚರಣೆ (Metro operation) ಎಂದಿನಂತೆ ಇದೆ ಎಂದು ಬಿಎಂಆರ್’ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಅತ್ತಿಗುಪ್ಪೆ ನಿಲ್ದಾಣದಲ್ಲೂ ಮೆಟ್ರೋ (Attiguppe Metro station) ಸಂಚರಿಸದೆ ಹಲವು ಹೊತ್ತು ನಿಲ್ದಾಣದಲ್ಲೇ ನಿಂತಿದೆ.
ಎಂಜಿ ರಸ್ತೆಯಲ್ಲೂ ಮೆಟ್ರೋ (MG Road Metro) ಖಾಲಿಯಾಗಿ ನಿಂತಿದೆ ಎಂದು ಮೆಟ್ರೋ ಪ್ರಯಾಣಿಕರೋರ್ವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಪರ್ಪಲ್ ಲೈನ್ ಮೆಟ್ರೋ (Purple Line Metro) ನಿಲ್ದಾಣಗಳಲ್ಲಿ ರೈಲು ಆಗಮನ, ನಿರ್ಗಮನದ ಡಿಸ್ ಪ್ಲೇ ಕೂಡಾ ಹಾಕಿರಲಿಲ್ಲ.
ನಿಧಾನಕ್ಕೆ ಈ ರೈಲುಗಳಿಗಾಗಿ ಬರುವವರ ಸಂಖ್ಯೆಯೂ ಹೆಚ್ಚಾಗಿ ದಟ್ಟಣೆ ಉಂಟಾಗಿತ್ತು (Traffic jams) ಎಂದು ಪ್ರಯಾಣಿಕರು ಒಬ್ಬರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದರು.
ಇದನ್ನು ಓದಿ : ಜಾತಿ ಗಣತಿ ಮರು ಸಮೀಕ್ಷೆ: ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್
ವೈಟ್‌ಫೀಲ್ಡ್ ಕಡೆ (Whitefield side) ಸಂಚರಿಸುವ (Purple line metro Disruption) ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.