- ಬೆಲೆ ಏರಿಕೆ ಸರಣಿಗೆ ಕಾವೇರಿ ನೀರು ಕೂಡ ಸೇರ್ಪಡೆ (Put a stop to excessive water use)
- ನಾಲ್ಕು ಹಂತದಲ್ಲಿ ದರ ಏರಿಕೆ ಸುಳಿವು ನೀಡಿದ ಜಲಮಂಡಳಿ
- ಬೆಂಗಳೂರು ಜನರಿಗೆ ಮತ್ತೊಂದು ಹೊರೆ
Bengaluru: ಇದೀಗ ಬೆಲೆ ಏರಿಕೆ ಸರಣಿಗೆ ಕಾವೇರಿ ನೀರು (Cauvery Water) ಕೂಡ ಸೇರ್ಪಡೆಯಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುವ ಮುನ್ನವೇ ಬೆಲೆ ಏರಿಕೆ ಬಿಸಿ ತಟ್ಟಿದೆ. ಬಿಕ್ಕಾಬಿಟ್ಟಿಯಾಗಿ ನೀರು ಸುರಿಯೋರು ಬ್ರೇಕ್ ಹಾಕಬೇಕಿದೆ. ಯಾಕಂದ್ರೆ ಕಾವೇರಿ ನೀರಿನ ದರ ಕೂಡ ಏರಿಕೆ ಆಗಿದೆ.
ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳಮಾಡುವ ವಿಚಾರವಾಗಿ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ (Ram Prasath Manohar) ಮಾಹಿತಿ ನೀಡಿದ್ದು, ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ, ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಲಿದೆ ಎಂಬ ಬಗ್ಗೆ ರಾಮ್ ಪ್ರಸಾತ್ ಮನೋಹರ್ ವಿವರಗಳನ್ನು ನೀಡಿದ್ದಾರೆ.

ಇನ್ನು ಹೊಸ ನೀರಿನ ದರಗಳು ಹೀಗಿವೆ:
- ಡೊಮೆಸ್ಟಿಕ್ ಕನೆಕ್ಷನ್ಗೆ (Domestic connection) ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
- ಮೊದಲ ಸ್ಯಾಬ್: ತಿಂಗಳಿಗೆ 8 ಸಾವಿರ ಲೀಟರ್ ಬಳಕೆ ಮಾಡುವವರಿಗೆ ಪ್ರತಿ ಸಾವಿರ ಲೀಟರ್ಗೆ ಸದ್ಯ ₹7 ದರ ನಿಗದಿಪಡಿಸಲಾಗಿದೆ. ಪ್ರತಿ ಲೀಟರ್ಗೆ 1 ಪೈಸೆ ಹೆಚ್ಚಳ ಮಾಡಿದರೆ ಸಾವಿರ ಲೀಟರ್ಗೆ ₹17 ಪಾವತಿಸಬೇಕಾಗಲಿದೆ. ಮಾಸಿಕ ಪಾವತಿ (Monthly payment) ದರವು ₹56 ರಿಂದ ₹136ಕ್ಕೆ ಹೆಚ್ಚಾಗಲಿದೆ.
- 2ನೇ ಸ್ಲ್ಯಾಬ್: 8001 ಲೀಟರ್ನಿಂದ 25 ಸಾವಿರ ಲೀಟರ್ಗೆ ಸದ್ಯ ಪ್ರತಿ ಸಾವಿರ ಲೀಟರ್ಗೆ ₹11ಇದ್ದು, ಪರಿಷ್ಕೃತ ದರ ಜಾರಿಗೊಂಡರೆ ₹21 ಪಾವತಿಸಬೇಕಾಗಲಿದೆ. ಕನಿಷ್ಠ ₹168 ರಿಂದ ಗರಿಷ್ಠ ₹525 ಕ್ಕೆ ಹೆಚ್ಚಾಗಲಿದೆ.
- 3ನೇ ಸ್ಲ್ಯಾಬ್: 25001 ಲೀಟರ್ನಿಂದ 50 ಸಾವಿರ ಲೀಟರ್ಗೆ ಸದ್ಯ ಪ್ರತಿ ಸಾವಿರ ಲೀಟರ್ಗೆ ₹25 ಇದ್ದು, ಪರಿಷ್ಕೃತ ದರ ಜಾರಿಗೊಂಡರೆ ₹35 ಆಗಲಿದೆ. ಕನಿಷ್ಠ ₹875 ರಿಂದ 1750ರವರೆಗೆ ಪಾವತಿಸಬೇಕಾಗಲಿದೆ.
- 4ನೇ ಸ್ಲ್ಯಾಬ್: 50,001 ಲೀಟರ್ಗಿಂತ ಹೆಚ್ಚಿನ ನೀರು ಬಳಕೆದಾರರಿಗೆ ಸದ್ಯ ಪ್ರತಿ ಸಾವಿರ ಲೀಟರ್ಗೆ ₹45 ಇದ್ದು, ಪರಿಷ್ಕೃತ ದರ ಜಾರಿಗೆ ಬಂದರೆ ₹55 ರು. ಪಾವತಿಸಬೇಕಾಗಲಿದೆ. ₹2250 ರಿಂದ ನೀರಿನ ಬಳಕೆಯಂತೆ ಹಣ ಪಾವತಿಸಬೇಕಾಗಲಿದೆ.
ಇನ್ನು ನೀರಿನ ದರ ಹೆಚ್ಚಳದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಜನರಿಗೆ ಹೊರೆಯಾಗದಂತೆ ನೀರಿನ ದರ ಏರಿಕೆ ಮಾಡಿರುವುದಾಗಿ ಹೇಳಿದ್ದಾರೆ. ಕಳೆದ 11 ವರ್ಷದಲ್ಲಿ ನೀರಿನ ದರ ಏರಿಕೆಯಾಗಿಲ್ಲ. ಈ 11 ವರ್ಷದಲ್ಲಿ ಮೂರು ಬಾರಿ ವಿದ್ಯುತ್ ದರ (Electricity price) ಹೆಚ್ಚಾಗಿದೆ. ನೌಕರರ ಸಂಬಳ ಜಾಸ್ತಿಯಾಗಿದೆ.
ಅನಿವಾರ್ಯವಾಗಿ ನೀರಿನ ದರ ಹೆಚ್ಚಳ ಮಾಡಲೇಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.ಸದ್ಯ ವಸತಿ ಕಟ್ಟಡಗಳಿಗೆ ಪೂರೈಕೆ ಮಾಡುವ ನೀರಿಗೆ ಒಟ್ಟು ನಾಲ್ಕು ಸ್ಲ್ಯಾಬ್ ನಲ್ಲಿ ದರ ನಿಗದಿ ಪಡಿಸಲಾಗಿದೆ. ಅದೇ ನಾಲ್ಕು ಸ್ಲ್ಯಾಬ್ ಅನ್ನು ಮುಂದುವರೆಸುವುದಕ್ಕೆ ನಿರ್ಧಿಸಿ ಪ್ರತಿ ಲೀಟರ್ ದರನ್ನು 1 ಪೈಸೆ ಹೆಚ್ಚಳ ಮಾಡುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಲಾಗಿದೆ.
ಇನ್ನೂ ಅಪಾರ್ಟ್ಮೆಂಟ್ (Apartment), ವಸತಿಯೇತರ ಬಳಕೆಯ ನೀರಿನ ದರ ಸಹ ವಿವಿಧ ಸ್ಲ್ಯಾಬ್ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುತ್ತಿದೆ. (Put a stop to excessive water use) ಅದೂ ಸಹ ಗುರುವಾರವೇ ಪ್ರಕಟಗೊಳ್ಳಲಿದೆ. ಇದೇ ವೇಳೆ ಸ್ಯಾನಿಟರಿ ನೀರಿನ ದರ ಸಹ ಹೆಚ್ಚಳವಾಗಲಿದೆ ಎಂಬ ಮಾತು ಕೇಳಿಬಂದಿದೆ.