- ಮೊಬೈಲ್ ಬಳಕೆಗೆ ಮಿತಿ, ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲು ಸರ್ಕಾರದ ಕ್ರಮ
- ರಾಜ್ಯ ಶಾಲೆಗಳಲ್ಲಿ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ ಕಡ್ಡಾಯ ಜಾರಿ
- ಓದು, ಕ್ರೀಡೆ ಮತ್ತು ಸೃಜನಾತ್ಮಕ ಚಟುವಟಿಕೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಣ (put down mobile grab a book) ಇಲಾಖೆಯ ಸುತ್ತೋಲೆ
Bengaluru: ಕರ್ನಾಟಕದಲ್ಲಿ ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳನ್ನು ಕಡಿಮೆ ಮಾಡಲು ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಕ್ಲಸ್ಟರ್‌ನಲ್ಲಿ ಸಮೂಹ ಸಂಪನ್ಮೂಲ ಶಿಕ್ಷಕರಾದ ಚಿಕ್ಕವೀರಯ್ಯ ಟಿ.ಎನ್. ಅವರು ಆರಂಭಿಸಿದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನವು ಯಶಸ್ಸು ಕಂಡ ಬಳಿಕ, ಅದನ್ನು ಈಗ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲು ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಅಭಿಯಾನವು ಮಕ್ಕಳನ್ನು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿಟ್ಟು, ಓದು ಮತ್ತು ಪಠ್ಯೇತರ ಚಟುವಟಿಕೆಗಳತ್ತ ಸೆಳೆಯುವ ಉದ್ದೇಶ ಹೊಂದಿದೆ.
2025-26ನೇ ಸಾಲಿನಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವನ್ನು 2026-27ನೇ ಶೈಕ್ಷಣಿಕ ವರ್ಷದಿಂದಲೇ ಇನ್ನಷ್ಟು ಗಟ್ಟಿಯಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ಕೋವಿಡ್ ನಂತರ, ಮಕ್ಕಳಲ್ಲಿ ಮೊಬೈಲ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಆನ್‌ಲೈನ್ ತರಗತಿಗಳ ಅಗತ್ಯದಿಂದ ಆರಂಭವಾದ ಈ ಬಳಕೆ, ನಂತರ ಮನರಂಜನೆ ಮತ್ತು ಆಟಗಳತ್ತ ತಿರುಗಿ ಗೀಳಾಗಿ ಮಾರ್ಪಟ್ಟಿದೆ.
ಇದರಿಂದ ಮಕ್ಕಳ ಓದುವ ಅಭ್ಯಾಸ ಕುಗ್ಗುತ್ತಿರುವುದು, ಕ್ರೀಡಾ ಚಟುವಟಿಕೆಗಳಿಂದ ದೂರವಾಗುತ್ತಿರುವುದು ಹಾಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಶಿಕ್ಷಕರ ಮತ್ತು ಪೋಷಕರ ಗಮನಕ್ಕೆ ಬಂದಿದೆ.
ಈ ಹಿನ್ನೆಲೆದಲ್ಲಿ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನವು ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಜೊತೆಗೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನೂ ಉತ್ತೇಜಿಸಲು ಉದ್ದೇಶಿಸಿದೆ.
ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಶಾಲೆಗಳಲ್ಲಿ ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಪ್ರತಿಭಾ ಕಾರಂಜಿ, ಕಲೋತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಪಾತ್ರಾಭಿನಯ, ನೃತ್ಯ, (put down mobile grab a book) ಭಾಷಣ ಸ್ಪರ್ಧೆಗಳು ಹಾಗೂ ಸಮುದಾಯಮುಖಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ, ಮೊಬೈಲ್ ಬಳಕೆಯ ಮಿತಿಯ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಸಹಭಾಗಿತ್ವವನ್ನು ಒದಗಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (put down mobile grab a book) ಗ್ರಂಥಾಲಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ತಜ್ಞರನ್ನು ಶಾಲೆಗಳಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಯೋಜನೆಯೂ ರೂಪಿಸಲಾಗಿದೆ.
ಈ ಅಭಿಯಾನದಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಾಲಾ ಮಟ್ಟದಲ್ಲಿ ನಡೆಯುವ ಎಸ್‌ಡಿಎಂಸಿ (SDMC) ಹಾಗೂ ಪೋಷಕರ ಸಭೆಗಳಲ್ಲಿ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಕುರಿತು ತಜ್ಞರಿಂದ ಮಾಹಿತಿ ನೀಡಲು ಸೂಚಿಸಲಾಗಿದೆ.
ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಸಮಯ ಮಿತಿ ನಿಗದಿಪಡಿಸುವುದು, ಅವರು ಏನು ನೋಡುತ್ತಿದ್ದಾರೆ ಎಂಬುದನ್ನು ಗಮನಿಸುವುದು ಹಾಗೂ ಪರ್ಯಾಯ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ.
ಮುಖ್ಯವಾಗಿ, ಪೋಷಕರೇ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದು ಮತ್ತು ಇತರೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, (put down mobile grab a book) ಮಕ್ಕಳು ಸಹ ಅದನ್ನು ಅನುಸರಿಸುವ ಸಾಧ್ಯತೆ ಹೆಚ್ಚುತ್ತದೆ.
“ಮೊದಲು ಪೋಷಕರು ಮಾದರಿ ಆಗಬೇಕು” ಎಂಬ ಸಂದೇಶ ಈ ಅಭಿಯಾನದ ಮುಖ್ಯ ಅಂಶವಾಗಿದೆ.
ರಾಮನಗರದಲ್ಲಿ ಈ ಅಭಿಯಾನ ಯಶಸ್ವಿಯಾಗಲು ಶಿಕ್ಷಕ ಚಿಕ್ಕವೀರಯ್ಯ ಅವರ ಪ್ರಾಮಾಣಿಕ ಪ್ರಯತ್ನವೇ ಕಾರಣವೆಂದು ಹೇಳಬಹುದು.
ಅವರ ಪ್ರೇರಣಾದಾಯಕ ಭಾಷಣದ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಬನ್ನಿಕುಪ್ಪೆ ಕ್ಲಸ್ಟರ್‌ನ (cluster)14 ಶಾಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಂಡು ಮಕ್ಕಳಲ್ಲಿ ಮೊಬೈಲ್ ಗೀಳು ಕಡಿಮೆಯಾಗಿ, ಪುಸ್ತಕ ಓದಿನತ್ತ ಆಸಕ್ತಿ ಹೆಚ್ಚಿದದ್ದು ಗಮನಾರ್ಹವಾಗಿದೆ.
ಇದೀಗ ಇದೇ ಮಾದರಿಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಮಕ್ಕಳ ಭವಿಷ್ಯವನ್ನು ಆರೋಗ್ಯಕರ ಮತ್ತು ಜ್ಞಾನಪೂರ್ಣ ದಾರಿಯಲ್ಲಿ ರೂಪಿಸುವ ಈ ಪ್ರಯತ್ನ ಯಶಸ್ವಿಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ಇದನ್ನು ಓದಿ : https://vijayatimes.com/honda-shine-new-launched/