• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ರಾಜ್ಯದ ಆಸ್ಪತ್ರೆಗಳಲ್ಲಿ ಬಳಸುತ್ತಿರುವ 400 ಔಷಧಗಳ ಗುಣಮಟ್ಟ ಕಳಪೆ : ಔಷಧ ನಿಯಂತ್ರಣ ಇಲಾಖೆಯಿಂದ ದೃಢ

Keerthana by Keerthana
in Vijaya Time, ಆರೋಗ್ಯ, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ರಾಜ್ಯದ ಆಸ್ಪತ್ರೆಗಳಲ್ಲಿ ಬಳಸುತ್ತಿರುವ 400 ಔಷಧಗಳ ಗುಣಮಟ್ಟ ಕಳಪೆ : ಔಷಧ ನಿಯಂತ್ರಣ ಇಲಾಖೆಯಿಂದ ದೃಢ
0
SHARES
6
VIEWS
Share on FacebookShare on Twitter

Bengaluru: ಬಳ್ಳಾರಿಯಲ್ಲಿ (Bellary) ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ (Paschim Banga Pharmaceuticals) ಕಂಪನಿ ಪೂರೈಸಿದ್ದ ‘ರಿಂಗರ್ ಲ್ಯಾಕ್ಟೇಟ್’ (Ringer’s lactate) ಐವಿ ದ್ರಾವಣವನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿತ್ತು. ಅದರ ಬೆನ್ನಲ್ಲೇ ರಾಜ್ಯದ ಔಷಧ ನಿಯಂತ್ರಕರು ನಡೆಸಿದ ಪರೀಕ್ಷೆಯಲ್ಲಿ ಈ ದ್ರಾವಣದ 22 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಬಂದಿತ್ತು. ಇದರಿಂದಾಗಿ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ರಾಜ್ಯದ ಒಂಬತ್ತು ಜಿಲ್ಲಾ ವೃತ್ತಗಳಲ್ಲಿ ಹೆಚ್ಚುವರಿ ಔಷಧ ನಿಯಂತ್ರಕರು (Drug regulators) ದೂರು ದಾಖಲಿಸಿಕೊಂಡಿದ್ದಾರೆ.

ಆದರೆ ಈದೀಗ ರಾಜ್ಯದ ಆಸ್ಪತ್ರೆಗಳಲ್ಲಿ (State hospitals) ಬಳಸಲಾಗುತ್ತಿರುವ 400ಕ್ಕೂ ಅಧಿಕ ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ರಾಜ್ಯ ಔಷಧ ನಿಯಂತ್ರಣ ಇಲಾಖೆ (State Drug Control Department) ನಡೆಸಿದ ಪ್ರಯೋಗಾಲಯ ಪರೀಕ್ಷೆಗಳಿಂದ ದೃಢಪಟ್ಟಿದೆ. ರಾಜ್ಯದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಹಾಗೂ ಕ್ಲಿನಿಕ್‌ಗಳಲ್ಲಿ ಬಳಸಲಾಗುತ್ತಿರುವ ಔಷಧಗಳಿಗೆ (Medicines) ಸಂಬಂಧಿಸಿದಂತೆ 2023–24ನೇ ಸಾಲಿನಲ್ಲಿ ಇಲಾಖೆ ಅಧಿಕಾರಿಗಳು 7,420 ಔಷಧಗಳ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ಈ ಮಾದರಿಗಳಲ್ಲಿ 285 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲವೆಂಬ ವರದಿ ಬಂದಿದೆ. 2024–25ನೇ ಸಾಲಿನಲ್ಲಿ ಅಕ್ಟೋಬರ್‌ ತಿಂಗಳವರೆಗೆ 3,636 ಮಾದರಿಗಳನ್ನು ಪ್ರಯೋಗಾಲಯ (Laboratory) ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 177 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ದೃಢಪಟ್ಟಿದೆ.

ರಾಜ್ಯದಲ್ಲಿ 37 ಸಾವಿರಕ್ಕೂ ಅಧಿಕ ಖಾಸಗಿ ಔಷಧ ಮಳಿಗೆಗಳು (Private drug stores) ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಖಾಸಗಿ ಔಷಧ ಮಳಿಗೆಗಳನ್ನು ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದಾರೆ. 24 ಔಷಧ ಮಳಿಗೆಗಳು ಪರವಾನಗಿ ಇಲ್ಲದೆ (without license) ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಎರಡು ವರ್ಷಗಳಲ್ಲಿ ಪತ್ತೆಮಾಡಲಾಗಿದೆ. ಇನ್ನು ಔಷಧಿಗಳನ್ನ ಮಾರುಕಟ್ಟೆಗೆ ಸರಬರಾಜು ಮಾಡುವ ಮುನ್ನ ಕಂಪನಿಗಳು ಪ್ರಮಾಣಿತ ಗುಣಮಟ್ಟ ಪರೀಕ್ಷೆ ಮಾಡಿಸಬೇಕು. ಆದರೆ, ಕೆಲ ಕಂಪನಿಗಳು ಪರೀಕ್ಷೆಗೆ ಒಳಪಡಿಸದೇ ನಿರ್ಲಕ್ಷ್ಯ ತೋರಿವೆ. ಔಷಧದ ಪ್ರಮಾಣಿತ ಗುಣಮಟ್ಟ ಹೊಂದಿರದ ಕಂಪನಿಗಳ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ

Tags: bengaluruKarnatakamedicinespaschim banga pharmaceuticalsprosecutionstate drug control deaprtmentstate hosp[ital

Related News

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ
ಪ್ರಮುಖ ಸುದ್ದಿ

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ

February 17, 2026
ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ
ದೇಶ-ವಿದೇಶ

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ

February 17, 2026
ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್
ದೇಶ-ವಿದೇಶ

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್

February 17, 2026
ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ
ಪ್ರಮುಖ ಸುದ್ದಿ

ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ

February 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.