Britain : ರಾಣಿ ಎಲಿಜಬೆತ್ ll(Queen Elizabeth ll), ಬ್ರಿಟನ್‌ನ್ನು(Britain) ಅತ್ಯಂತ ಧೀರ್ಘಾಕಾಲ ಆಳಿದ ರಾಣಿಯಾಗಿದ್ದು, ತಮ್ಮ 96ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅನೇಕರು ರಾಣಿ ಎಲಿಜಬೆತ್ II ನಿಧನಕ್ಕೆ ಕಣ್ಣೀರು ಸುರಿಸಿದ್ದಾರೆ, ಇನ್ನು ಕೆಲವರು ಶೋಕ ವ್ಯಕ್ತಪಡಿಸಿದ್ದಾರೆ.

ಆದರೆ ಜನಪ್ರಿಯ ಇ-ಕಾಮರ್ಸ್(E-Commerce) ತಾಣ Ebay ಬಳಕೆದಾರನೊಬ್ಬ ರಾಣಿ ಎಲಿಜಬೆತ್ II ಬಳಸಿದ ಟೀ ಬ್ಯಾಗ್(Tea Bag) ಅನ್ನು ಈ ತಾಣದಲ್ಲಿ ಮಾರಾಟ ಮಾಡಿದ್ದಾನೆ. ರಾಣಿ ನಿಧನದ ನಂತರ ರಾಣಿ ಬಗೆಗಿನ ಜನರ ಕುತೂಹಲ ಗರಿಗೆದರಿದ್ದು, ಇಂಟರ್‌ನೆಟ್‌ನಲ್ಲಿ ಅವರ ಬಗ್ಗೆ ಹುಡುಕಾಡುತ್ತಿದ್ದರು,
ಇದನ್ನೂ ಓದಿ : https://vijayatimes.com/3-year-old-girl-got-up-at-her-own-funeral/
ಇದರ ಲಾಭ ಪಡೆಯಲು ಮುಂದಾಗಿರುವ ವ್ಯಕ್ತಿಯೊಬ್ಬ ಇಬೇಯಲ್ಲಿ ರಾಣಿ ಬಳಸಿದ ಟೀ ಬ್ಯಾಗ್ ಎಂದು ಈ ಟೀ ಬ್ಯಾಗ್ ನ್ನು ಮಾರಾಟಕ್ಕಿಟ್ಟಿದ್ದಾನೆ. ಹೌದು, ರಾಣಿ ಎಲಿಜಬೆತ್ ll ಅವರ 70 ವರ್ಷಗಳ ಆಳ್ವಿಕೆಯ ಸ್ಮರಣಾರ್ಥವಾಗಿ, Ebay ಬಳಕೆದಾರರೊಬ್ಬರು ರಾಣಿ ಎಲಿಜಬೆತ್ ಬಳಸುತ್ತಿದ್ದರು ಎನ್ನಲಾದ ಟೀಬ್ಯಾಗ್ ಅನ್ನು ಮಾರಾಟಕ್ಕಿಟ್ಟಿದ್ದಾರೆ.
ಈ ಟೀ ಬ್ಯಾಗ್ ಅನ್ನು 1998 ರಲ್ಲಿ ರಾಣಿ ವಾಸವಿದ್ದ ವಿಂಡ್ಸರ್ ಕ್ಯಾಸಲ್‌ನಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಬಳಕೆದಾರರು Ebay ಪುಟದಲ್ಲಿ ಹೇಳಿಕೊಂಡಿದ್ದಾರೆ. ಪ್ರಸ್ತುತ ಈ ಟೀ ಬ್ಯಾಗ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ $12,000 ಗೆ ಅಂದರೆ ಭಾರತದ 9,56,471 ರೂಪಾಯಿ ದರ ನಿಗದಿಪಡಿಸಲಾಗಿದೆ.

ವಿವರಣೆಯಲ್ಲಿ ಹೇಳಿರುವಂತೆ, 1998ರ ಕೊನೆಯಲ್ಲಿ ನೋಡಿರಬಹುದಾದ ಟೀ ಬ್ಯಾಗ್ ಇದಾಗಿದೆ ಎನ್ನಲಾಗಿದೆ. ಈ ಟೀ ಬ್ಯಾಗ್ ಅನ್ನು ರಾಣಿ ಎಲಿಜಬೆತ್ ಬಳಸುತ್ತಿದ್ದರು, ಜೊತೆಗೆ ಈ ಟೀ ಬ್ಯಾಗ್‌ಗೆ ಪ್ರತಿಷ್ಠಿತ ಐಇಸಿಎಯಿಂದ ಧೃಢೀಕರಣದ ಪ್ರಮಾಣ ಪತ್ರವೂ ಸಿಕ್ಕಿದೆ.
ಇದನ್ನೂ ಓದಿ : https://vijayatimes.com/protest-at-king-charles-3-declaration/
ದೃಢೀಕರಣದ ಪ್ರಮಾಣ ಪತ್ರದಲ್ಲಿ, “ಈ ಕೆಳಗಿನ ಹೇಳಿಕೆಗಳು ಸಂಪೂರ್ಣವಾಗಿ ನಿಜವೆಂದು ಯಾವುದೇ ಸಂದೇಹವಿಲ್ಲದೆ ನಿರ್ಧರಿಸಬಹುದು. ಇದು ರಾಣಿ ಬಳಸಿದ ನಿಜವಾದ ಟೀ ಬ್ಯಾಗ್ ಆಗಿದೆ.” ಎಂದು ಉಲ್ಲೇಖಿಸಿದೆ.
- ಪವಿತ್ರ