ಸೆಂಚುರಿಯನ್ ಡಿ 31 : ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ – ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ
ಈ ವೇಳೆ ಮಾತನಾಡಿದ ಅವರು, “ಈ ನಿರ್ಧಾರ ನಿಜಕ್ಕೂ ಸುಲಭವಾಗಿರಲಿಲ್ಲ. ನನ್ನ ಪತ್ನಿ ಸಶಾ ಮೊದಲನೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜೀವನದ ಮುಂದಿನ ಅಧ್ಯಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ನನಗೆ ಸೂಕ್ತವಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅಂದಹಾಗೆ ಈ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಯೋಚಿಸಿದ್ದೇನೆ. ನನಗೆ ಎಲ್ಲವೂ ನನ್ನ ಕುಟುಂಬವೇ ಎಂದು ತಿಳಿಸಿದ್ದಾರೆ. “ನಾನು ಟೆಸ್ಟ್ ಕ್ರಿಕೆಟನ್ನು ಅನ್ನು ಇಷ್ಟಪಡುತ್ತೇನೆ ಹಾಗೂ ನನ್ನ ದೇಶವನ್ನು ಪ್ರತಿನಿಧಿಸುವುದನ್ನು ನಾನು ಪ್ರೀತಿಸುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಸಂಭವಿಸಿದ ಏರಿಳಿಗಳನ್ನು ನಾನು ಆನಂದಿಸಿದ್ದೇನೆ. ಸಂಭ್ರಮಾಚರಣೆ ಹಾಗೂ ನಿರಾಶದಾಯಕ ಕ್ಷಣಗಳನ್ನು ನಾನು ಅನುಭವಿಸಿದ್ದೇನೆ. ಇದೀಗ ನಾನು ಹೆಚ್ಚು ಇಷ್ಟಪಡುವುದನ್ನು ಕಂಡುಕೊಂಡಿದ್ದೇನೆ,” ಎಂದು ಹೇಳಿದರು.
ಈವರೆಗೆ 54 ಟೆಸ್ಟ್ ಪಂದ್ಯಗಳಲ್ಲಿ 3,300 ರನ್ ಕಲೆ ಹಾಕಿರುವ ಅವರು 221 ಕ್ಯಾಚ್ ಪಡೆದುಕೊಂಡಿದ್ದು 11 ಸ್ಟಂಪಿಂಗ್ ಮಾಡಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಕ್ವಿಂಟನ್ ಡಿ ಕಾಕ್ ಈವರೆಗೆ 54 ಟೆಸ್ಟ್. 124 ಏಕದಿನ, 61 ಟಿ 20 ಪಂದ್ಯಗಳನ್ನು ಆಡಿದ್ದಾರೆ ಜೊತೆಗೆ ಐಪಿಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದಾರೆ.