ದೆಹಲಿಯ(NewDelhi) ಕುತುಬ್ ಮಿನಾರ್(Qutub Minar) ಸಂಕೀರ್ಣದಲ್ಲಿ ಉತ್ಖನನ(Excavating) ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಕೇಂದ್ರ ಸಂಸ್ಕೃತಿ ಸಚಿವಾಲಯ ಆದೇಶಿಸಿದೆ ಎಂಬ ವರದಿಗಳು ಹೊರಬಂದ ನಂತರ,

ಸಂಸ್ಕೃತಿ ಸಚಿವ(Union Minister) ಜಿಕೆ ರೆಡ್ಡಿ(GK Reddy) ವರದಿಗಳ ಕುರಿತು ಪ್ರತಿಕ್ರಿಯಿಸಿ, ‘ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಕುತುಬ್ ಮಿನಾರ್ ವಿವಾದವು ಪ್ರಸ್ತುತ ಗ್ಯಾನವಾಪಿ ಮಸೀದಿಯ(Gyanvapi Mosque) ವಿವಾದ ಬೆನ್ನಲ್ಲೇ ಬಂದಿದೆ, ಕುತುಬ್ ಮಿನಾರ್ ಅನ್ನು ಹಿಂದೂ ಚಕ್ರವರ್ತಿ ರಾಜಾ ವಿಕ್ರಮಾದಿತ್ಯನಿಂದ ನಿರ್ಮಿಸಲಾಗಿದೆ ಮತ್ತು ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ನಿರ್ಮಿಸಲಾಗಿದೆಯೇ ವಿನಃ
ಕುತುಬ್ ಅಲ್-ದೀನ್ ಐಬಕ್ ನಿರ್ಮಿಸಿಲ್ಲ ಎಂದು ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಪ್ರತಿಪಾದಿಸಿದ ನಂತರ ಇದು ವಿವಾದವಾಗಿ ಪರಿವರ್ತನೆಗೊಂಡಿತು. ಸಂಕೀರ್ಣದಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ ಎಂದು ಹೇಳಲಾಗಿದೆ. ಮೇ 21 ರಂದು, ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೂವರು ಇತಿಹಾಸಕಾರರು, ನಾಲ್ವರು ASI ಅಧಿಕಾರಿಗಳು ಮತ್ತು ಸಂಶೋಧಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ಕುತುಬ್ ಮಿನಾರ್ ಸಂಕೀರ್ಣದಲ್ಲಿ 1991 ರಿಂದ ಉತ್ಖನನ ಕಾರ್ಯ ನಡೆದಿಲ್ಲ ಎಂದು ಎಎಸ್‌ಐ ಅಧಿಕಾರಿಗಳು ಕಾರ್ಯದರ್ಶಿಗೆ ತಿಳಿಸಿದರು. ಈ ಹಿಂದೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಕ್ತಾರ ವಿನೋದ್ ಬನ್ಸಾಲ್, ಕುತುಬ್ ಮಿನಾರ್ ವಾಸ್ತವವಾಗಿ ‘ವಿಷ್ಣು ಸ್ತಂಭ’ ಮತ್ತು 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ ಪಡೆದ ವಸ್ತುಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.