Visit Channel

ಕುತುಬ್ ಮಿನಾರ್‌ಗೆ ‘ವಿಷ್ಣು ಸ್ತಂಭ’ ಎಂದು ನಾಮಕರಣ ಮಾಡಲು ಆಗ್ರಹ!

qutub

ದೆಹಲಿಯ(NewDelhi) ವಿಶ್ವಪ್ರಸಿದ್ದ ಐತಿಹಾಸಿಕ(Historical) ಸ್ಮಾರಕ ಕುತುಬ್ ಮಿನಾರ್‌ಗೆ(Qutub Minar) ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ದೆಹಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.

qutub

ಪ್ರತಿಭಟನೆ ನಡೆಸಿದ ಸುಮಾರು ೫೦ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಕುತುಬ್ ಮಿನಾರ್ ಬಳಿ ಬಂಧಿಸಿದ್ದಾರೆ. ಇನ್ನು ೧೩ನೇ ಶತಮಾನದಲ್ಲಿ ದೆಹಲಿ ಸುಲ್ತಾನ್ ಕುತ್ಬುದ್ದೀನ್ ಐಬಕ್‌ನಿಂದ ನಿರ್ಮಾಣವಾಗಿದೆ ಎಂದು ಹೇಳಲಾಗುವ ಈ ಸ್ತಂಭವನ್ನು ಮೂಲದಲ್ಲಿ ಹಿಂದೂ ದೊರೆ ರಾಜಾ ವಿಕ್ರಮಾದಿತ್ಯನು ನಿರ್ಮಾಣ ಮಾಡಿದ್ದನು. ಆದರೆ ಭಾರತದ ಮೇಲೆ ದಾಳಿ ಮಾಡಿದ ಕುತ್ಬುದ್ದೀನ್ ಐಬಕ್‌ನು ಈ ಸ್ಮಾರಕವನ್ನು ತಾನು ನಿರ್ಮಾಣ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಆದರೆ ಇಂದಿಗೂ ಕೂಡಾ ಕುತುಬ್ ಮಿನಾರ್ ಸ್ಮಾರಕದಲ್ಲಿ ಅನೇಕ ಹಿಂದೂ ದೇವಾಲಯಗಳ ಅವಶೇಷಗಳಿವೆ. ಮುಖ್ಯ ಕಟ್ಟಡದಲ್ಲಿ ದೇವ-ದೇವತೆಗಳ ವಿಗ್ರಹಗಳಿವೆ. ಹಿಂದೂ ದೇವಾಲಯವನ್ನು ನಾಶ ಮಾಡಿ, ಕುತುಬ್ ಮಿನಾರ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಮರಳಿ ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಆಗ್ರಹಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕುತುಬ್ ಮಿನಾರ್ ಮುಂಬಾಗದಲ್ಲಿ ಹನುಮಾನ್ ಚಾಲೀಸ್ ಪಠನೆ ಮಾಡಲು ಹಿಂದೂ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

qutub

ಹನುಮಾನ್ ಚಾಲೀಸ್ ಪಠನೆ ಮಾಡಲು ಅವಕಾಶ ನಿರಾಕರಿಸಿದ ದೆಹಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೆಹಲಿಯ ವಿವಿಧ ಸ್ಮಾರಕಗಳ ಬಳಿ ಹೆಚ್ಚಿನ ಪೊಲೀಸ ಭದ್ರತೆ ಕಲ್ಪಿಸಲಾಗಿದೆ. ಕೆಲ ಹಿಂದೂ ಸಂಘಟನೆಯ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.