Bengaluru: ಬಿಜೆಪಿಯ ದೊಡ್ಡ ದೊಡ್ಡ ಶಾಸಕರೂ ಯು.ಟಿ. ಖಾದರ್ (U T Khader) ಅವರನ್ನು (R Ashok Against Zameer Ahmed) ಸ್ಪೀಕರ್ ಮಾಡುವ ಮೂಲಕ ಅವರಿಗೆ ನಮಸ್ಕರಿಸಿ
ನಿಲ್ಲುವಂತೆ ಮಾಡಿದ್ದೇವೆ ಎಂಬ ವಸತಿ ಸಚಿವ ಜಮೀರ್ ಖಾನ್ (Zameer Khan) ಹೇಳಿಕೆಗೆ ಸಂಬಂಧಿಸಿದಂತೆ ನಾವು ಸ್ಪೀಕರ್ ಸ್ಥಾನಕ್ಕೆ ಗೌರವವನ್ನು ಕೊಡುತ್ತೇವೆ. ಈ ರೀತಿಯ ಮತೀಯ
ವಿಚಾರಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ (Abdul Kalam) ಅವರ ಮೇರು ವ್ಯಕ್ತಿತ್ವಕ್ಕೆ ಗೌರವ ಕೊಡುತ್ತೇವೆ. ಈ ರೀತಿ ಮತೀಯ ಟಿಪ್ಪು ವಿಚಾರದ ವಿರುದ್ಧ ಹೋರಾಡುತ್ತವೆ. ಹಾಗೆಯೇ ಸಾವರ್ಕರ್
ಅವರ ಫೋಟೋ ತೆಗೆಯುತ್ತೇವೆ ಅಂತಾರೆ, ಈಗ ನೆಹರು ಫೋಟೋ ಹಾಕುತ್ತೇವೆ ಅಂತಾರೆ. ಕಾಂಗ್ರೆಸ್ನವರದ್ದು (Congress) ವಂಶ ಪಾರಂಪರ್ಯ ರಾಜಕಾರಣ ಎಂದು ವಿಪಕ್ಷ ನಾಯಕ
ಆರ್ ಅಶೋಕ್ (R Ashok Against Zameer Ahmed) ವಾಗ್ದಾಳಿ ಮಾಡಿದರು.
ನೆಲಮಂಗಲದಲ್ಲಿ (Nelamangala) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ನವರದ್ದು ವಂಶ ಪಾರಂಪರ್ಯ ರಾಜಕಾರಣ ತಾತ, ಮಗ, ಮೊಮ್ಮಗ ಹೀಗೆ ನಾಲ್ಕು
ತಲೆಮಾರುಗಳ ವಂಶ ಪಾರಂಪರ್ಯ ಫೋಟೋಗಳು ಕರ್ನಾಟಕದಲ್ಲಿ (Karnataka) ಇರಬೇಕು ಎಂಬ ನಿಲುವಿಗೆ ಬಂದಿದ್ದಾರೆ. ಸರ್ಕಾರ ಕೆಲಸ ಮಾಡದಿದ್ದರೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ.
ಸರಿದಾರಿಗೆ ಬಾರದೆ ಹೋದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಸ್ವಪಕ್ಷದವರೇ ಅಸಮಾಧಾನ ಹೊರ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು ಉತ್ತರ ಕರ್ನಾಟಕ ಮಧ್ಯ ಕರ್ನಾಟಕ,
ಹಳೆ ಮೈಸೂರು, ಕರಾವಳಿ ಕರ್ನಾಟಕ ಅಂತ ನಾಲ್ಕು ಭಾಗಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ಮುಖ್ಯಮಂತ್ರಿ ಆಗಿದ್ದರು. ಈಗಾಗಲೇ ಜಗದೀಶ್ ಶೆಟ್ಟರ್ (Jagadeesh Shettar),
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಕರಾವಳಿ ಕರ್ನಾಟಕ ಭಾಗದಿಂದ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದರು. ಮಧ್ಯ ಕರ್ನಾಟಕದಿಂದ ಬಿಎಸ್ ಯಡಿಯೂರಪ್ಪ
(B S Yadiyurappa) ಅವರು ಮುಖ್ಯಮಂತ್ರಿ ಆಗಿದ್ದರು ಎಂದು ತಿಳಿಸಿದರು.
ಹಳೆ ಮೈಸೂರು ಭಾಗಕ್ಕೆ ಬಿಜೆಪಿ (BJP) ಇತಿಹಾಸದಲ್ಲಿ ಯಾವತ್ತೂ ಪ್ರಾತಿನಿಧ್ಯ ಸಿಕ್ಕಿಲ್ಲ,ಇದೇ ಮೊದಲು ಸಿಕ್ಕಿರುವುದು. ಉಳಿದಂತೆ ಮುಖ್ಯಮಂತ್ರಿಗಳು ಆಗಿರೋದು ಎಲ್ಲಾ ಉತ್ತರ ಕರ್ನಾಟಕ
ಭಾಗದ ಅವರೇ ಹೆಚ್ಚು. ನಮ್ಮಲ್ಲಿ ಆ ಬೇಧ ಭಾವ ಇಲ್ಲ. ಎಲ್ಲರನ್ನೂ ಇವತ್ತಿನಿಂದಲೇ ಮಾತನಾಡಿಸಿ ಅಸಮಾಧಾನ ಸರಿಪಡಿಸುತ್ತೇವೆ. ಭಿನ್ನಾಭಿಪ್ರಾಯ ಇರುವವರ ಜೊತೆ ಮಾತನಾಡಿ ಸರಿಪಡಿಸುತ್ತೇವೆ
ಎಂದರು.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಫೋನ್ ಕಾಲ್ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಕ ಡೌಟೇ ಇಲ್ಲ, ಇದು ಮೂರನೇ ಬಾರಿ ಆಗುತ್ತಿರುವುದು.
ಅವರ ಪಕ್ಷದ ಸಚಿವರು, ಶಾಸಕರೇ ಆರೋಪ ಮಾಡಿದ್ದಾರೆ. ಅತಿ ಆಯ್ತು ಅಂತ ಹೇಳಿದ್ದಾರೆ. ಇವತ್ತು ವಿಡಿಯೋ ಬಂದಿರುವುದು ಜಗತ್ಪ್ರಸಿದ್ಧಿಯಾಗಿದೆ ಎಂದು ಹೇಳಿದರು.
ಈಗ ದಾಖಲೆ ಸಿಕ್ಕಾಗಿದೆ ಕಾಂಗ್ರೆಸ್ 60% ಅನ್ನೋದು. 40% ಕಮಿಷನ್ ಅಂತ ಸುಳ್ಳು ಆರೋಪ ಮಾಡಿದರು ದಾಖಲೆ ಕೊಡಲೇ ಇಲ್ಲ. ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ
ಅವರಿಗೆ ಎಟಿಎಂ (ATM) ಆಗಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ? ಪೋಲಿಸ್ ಇಲಾಖೆ ಸೇರಿ ಎಲ್ಲ ಇಲಾಖೆಯಲ್ಲೂ ವರ್ಗಾವಣೆ ದಂಧೆ ನಡೆಯುತ್ತಿದೆ. ಇದರ ವಿಚಾರವಾಗಿ ಮುಂದಿನ ಸದನದಲ್ಲಿ
ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಬಿಳಿ ಕೂದಲ ಸಮಸ್ಯೆಗೆ ತೆಂಗಿನ ಕಾಯಿಯ ನಾರಿನ ಉಪಯುಕ್ತ ಮಾಹಿತಿ.
- ಭವ್ಯಶ್ರೀ ಆರ್ ಜೆ