- ಜಾತಿ ಗಣತಿ (Caste census) ವರದಿ ವಿರುದ್ಧ (R Ashok attacks siddu govt) ಹೂಂಕರಿಸಿದ ಆರ್. ಅಶೋಕ್
- ಮುಸ್ಲಿಮರಿಗೇಕೆ (Muslims) ಅಲ್ಪಸಂಖ್ಯಾತ ಸ್ಥಾನಮಾನ ಎಂದು ಪ್ರಶ್ನಿಸಿದ ಆರ್. ಅಶೋಕ್
- ಜಾತಿ ಗಣತಿ ವರದಿ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಪ್ರತಿಪಕ್ಷ ನಾಯಕ (Leader of the Opposition)
Bengaluru: ರಾಜ್ಯ ಸಚಿವ ಸಂಪುಟದ (State Cabinet) ಮುಂದೆ ಮಂಡನೆಯಾಗಿರುವ ಜಾತಿ ಗಣತಿ ವರದಿ (Caste Census Report) ವಿರುದ್ಧ ಮತ್ತೊಮ್ಮೆ ಹೂಂಕರಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R. Ashok) ,ಜಾತಿ ಗಣತಿ ವರದಿ ಇಡೀ ಸಮಾಜವನ್ನು ಶಾಶ್ವತವಾಗಿ ಬೇರ್ಪಡಿಸಲಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಬಿಜೆಪಿ (State BJP) ಪ್ರಧಾನ ಕಚೇರಿಯಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್. ಅಶೋಕ್, ಜಾತಿ ಗಣತಿ ವರದಿಯನ್ವಯ ರಾಜ್ಯದಲ್ಲಿ ಮುಸ್ಲಿಮರೇ (Muslims in the state) ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದಮೇಲೆ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.
ಜಾತಿ ಗಣತಿ ವರದಿಯಲ್ಲಿರುವ ಜನಸಂಖ್ಯೆ ಅಕಿ-ಅಂಶಗಳು (Aki-elements) ನಿಜವೇ ಆದರೆ, ರಾಜ್ಯದಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದಾಗ ಅವರಿಗೇಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಈ ಕೂಡಲೇ ಮುಸ್ಲಂ ಸಮುದಾಯಕ್ಕೆ ನೀಡಲಾಗಿರುವ ಅಲ್ಪಸಂಖ್ಯಾತ ಸ್ಥಾನಮಾನ ಹಿಂಪಡೆಯಬೇಕು ಎಂದು ಆರ್. ಅಶೋಕ್ ವ್ಯಂಗ್ಯಭರಿತ (Ashok) ಧಾಟಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಾತಿಗಣತಿ ವರದಿ ಪ್ರಕಾರ ಮುಸಲ್ಮಾನರು ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂದರೆ ಅವರಿಗೆ ಅಲ್ಪಸಂಖ್ಯಾತರು ಎನ್ನುವುದೇಕೆ? ಜಾತಿಗಣತಿ ವರದಿ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣೆಯ ಗಿಮಿಕ್ (Election gimmick) ಅಷ್ಟೇ. ಮುಂದಿನ ಸಚಿವ ಸಂಪುಟದಲ್ಲಿ ಉಪಸಮಿತಿ ರಚಿಸಿ ಕೈ ತೊಳೆದುಕೊಳ್ಳುತ್ತಾರೆ ಎಂದು ಆರ್. ಅಶೋಕ್ (R. Ashok) ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೆ ಜಾತಿ ಜನಗಣತಿ ಮೂಲಕ ಕಾಂಗ್ರೆಸ್ ಪಕ್ಷ (Congress party) ಸಮಾಜದಲ್ಲಿ ವಿಷಬೀಜ ಬಿತ್ತಲು ಹೊರಟಿದೆ. ಅಧಿಕಾರಕ್ಕಾಗಿ ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್, ಇದೀಗ ಸಮುದಾಯಗಳ ನಡುವೆ ಪರಸ್ಪರ ಅಪನಂಬಿಕೆ ಉಂಟು ಮಾಡುವ ಕುತಂತ್ರಕ್ಕೆ ಕೈಹಾಕಿದೆ. ಆದರೆ ಬಿಜೆಪಿ (BJP) ಇದಕ್ಕೆ ಅವಕಾಶ ನೀಡುವುದಿಲ್ಲ. ಸಮಾಜದ ಒಗ್ಗಟ್ಟಿಗೆ ಬಿಜೆಪಿ ತನ್ನೆಲ್ಲಾ ಶಕ್ತಿಯನ್ನು ಬಳಸಿ ಹೋರಾಡಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ.
ಅಧಿಕಾರಕ್ಕಾಗಿ ಬಣ ಬಡಿದಾಟ ನಡೆಯುತ್ತಿದ್ದು, ಯಾವ ಸಮಯದಲ್ಲಿ ಯಾರ ಕುರ್ಚಿ ಅಲುಗಾಡುವುದೋ ತಿಳಿಯದಾಗಿದೆ. ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜಾತಿ ಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ. ಅಸಲಿಗೆ ಈ ವರದಿಯನ್ನು ಜಾರಿ ಮಾಡುವ ಇರಾದೆ ಕಾಂಗ್ರೆಸ್ಗೂ ರಾಜ್ಯ ಸಚಿವ ಸಂಪುಟದ (State Cabinet) ಮುಂದೆ ಮಂಡನೆಯಾಗಿರುವ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ.
ಇದನ್ನು ಓದಿ : http://ಸಮಾಜದ ಹೆಸರಿನಲ್ಲಿ ಸಭೆ ನಡೆಸುವ ಬದಲು ಪಕ್ಷ ಸಂಘಟನೆಗೆ ಒತ್ತು ನೀಡಿ :ಯತ್ನಾಳ್ ಬಣಕ್ಕೆ ಟಾಂಗ್ ನೀಡಿದ ಬಿವೈ ವಿಜಯೇಂದ್ರ
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ವರದಿಯನ್ನು ಸ್ವೀಕರಿಸಬಾರದು. ಹಾಗೊಂದು ವೇಳೆ ವರದಿಯನ್ನು ಸ್ವೀಕರಸಿದ್ದೇ ಆದಲ್ಲಿ, ಜಾತಿ ಗಣತಿ ವರದಿ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು (Fierce fight) ಹಮ್ಮಿಕೊಳ್ಳಲಿದೆ ಎಂದು ಆರ್. (R Ashok attacks siddu govt) ಅಶೋಕ್ ಎಚ್ಚರಿಕೆ ನೀಡಿದರು.