- ಬೆಂಗಳೂರಿನಲ್ಲಿ ರೇಬೀಸ್ ಪ್ರಕರಣಗಳ ಹೆಚ್ಚಳ
- ಕಳೆದ 6 ತಿಂಗಳಲ್ಲಿ ರೇಬೀಸ್‌ನಿಂದ 17 ಜನ ಸಾ*
- ರೇಬೀಸ್‌ನ ಲಕ್ಷಣಗಳ ಬಗ್ಗೆ ಜಾಗೃತಿ ಇರಲಿ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳಿನಿಂದ ರೇಬೀಸ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ.
ಕಳೆದ ಆರು ತಿಂಗಳಲ್ಲಿ 17 ಜನರು ರೇಬೀಸ್‌ನಿಂದ ಮೃ*ಪಟ್ಟಿದ್ದಾರೆ. ನಾಯಿ ಕಡಿತದ ಪ್ರಕರಣಗಳು ಲಕ್ಷದ ಗಡಿ ದಾಟಿದೆ. ಇದು ಸಹಜವಾಗಿ ಜನರಲ್ಲಿ ಆತಂಕ ಮೂಡಿಸಿದೆ. ರೇಬೀಸ್‌ನ ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ.
2025ರ ಜನವರಿಯಿಂದ ಜೂನ್ ವರೆಗೆ ಬೆಂಗಳೂರಿನಲ್ಲಿ ಸರಿಸುಮಾರು 17 ಜನರು ರೇಬಿಸ್ ಎಂಬ ಮಾರಣಾಂತಿಕ ಸೋಂಕಿಗೆ ಬ*ಯಾಗಿದ್ದಾರೆ.
ರಾಜ್ಯಾದಂತ ಈ ಅವಧಿಯಲ್ಲಿ ರೇಬಿಸ್ ಗೆ ಒಟ್ಟು 23 ಜನ ಬ*ಯಾಗಿದ್ದಾರೆ. ಕಳೆದ ವರ್ಷಕಿಂತ ಈ ವರ್ಷ ರೇಬಿಸ್ ಪ್ರಕರಣಗಳು ಹೆಚ್ಚಾಗಿವೆ. ಕೇವಲ ಆರು ತಿಂಗಳಲ್ಲಿಯೇ 17 ಸಾ*ಗಳು ಸಂಭವಿಸಿರುವುದು ಆರೋಗ್ಯ ಇಲಾಖೆಗೆ ಎಚ್ಚರಿಕೆಯ ಗಂಟೆಯಾಗಿದೆ.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 60ಕ್ಕೂ ಹೆಚ್ಚು ಜನರು ರೇಬಿಸ್‌ನಿಂದ ಸಾ*ಗೀಡಾಗಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ದತ್ತಾಂಶದ ಪ್ರಕಾರ, ಬೆಂಗಳೂರು ಸೇರಿದ್ದಂತೆ ಬೇರೆ ಬೇರೆ ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 2,60,514 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ.
ಕಳೆದ ಒಂದು ವಾರದಲ್ಲಿ 10,242 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಓರ್ವರು ಮೃ*ಪಟ್ಟಿದ್ದಾರೆ. ಇದು ಈ ಸಾಂಕ್ರಾಮಿಕ ರೋಗದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ಬೀದಿನಾಯಿಗಳ ಸಂತಾನೋತ್ಪತ್ತಿಯಲ್ಲಿ ಹೆಚ್ಚಳವಾಗಿದೆ. ಜೊತೆಗೆ ನಾನ್ ವೆಜ್ ಹೋಟೆಲ್ನವರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ.
ರಕ್ತದ ರುಚಿ ಕಂಡ ನಾಯಿಗಳು ಮಕ್ಕಳು, ವೃದ್ಧರ ಮೇಲೆ ಶ್ವಾನಗಳು ದಾಳಿ ಮಾಡುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದರೆ.ರೇಬೀಸ್ ತೀವ್ರವಾದ ವೈರಲ್ ಸೋಂಕಾಗಿದ್ದು, ಪ್ರಾಣಿಗಳ ಕಡಿತದಿಂದ ಬರುತ್ತದೆ.
ರೇಬೀಸ್‌ನ ಲಕ್ಷಣಗಳು:
ತಲೆನೋವು, ಗಂಟಲು ನೋವು, ಜ್ವರ ಮತ್ತು ಕಚ್ಚಿದ ಸ್ಥಳದಲ್ಲಿ ಜುಮ್ಮೆನಿಸುವಿಕೆ. ಅತಿಯಾದ ಜೊಲ್ಲು ಸುರಿಸುವುದು, ನುಂಗಲು ತೊಂದರೆ, ನುಂಗಲು ಕಷ್ಟವಾಗುವುದರಿಂದ
ನೀರಿನ ಭಯ, ಆತಂಕ, ಗೊಂದಲ, ನಿದ್ರಾಹೀನತೆ, ಪಾರ್ಶ್ವವಾಯು ಮತ್ತು ಕೆಲವೊಮ್ಮೆ ಕೋಮಾವು ರೇಬೀಸ್ ಲಕ್ಷಣಗಳು ಕಂಡು ಬರುತ್ತವೆ.
ಇದನ್ನು ಓದಿ : ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕಿಂಗ್ ಜಾರಿ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ
ಚಿಕಿತ್ಸೆ:
ಯಾವುದೇ ಪ್ರಾಣಿಯು ಕಚ್ಚಿದ ತಕ್ಷಣವೇ ಗಾಯವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸಾಬೂನು ಮತ್ತು ನೀರಿನಿಂದ ಸಾದ್ಯವಾದಷ್ಟು ಸ್ವಚ್ಚವಾಗಿ ತೊಳೆಯಿರಿ. ನಂತರ ಆಂಟಿ ರೇಬೀಸ್ ಲಸಿಕೆಯನ್ನು ತಕ್ಷಣವೇ ಪ್ರಾರಂಭಿಸಿ. ಜೊತೆಗೆ ಚೂರು ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.