Mysuru : ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಗೊಂಡ “ಆರ್ಕೆಸ್ಟ್ರಾ ಮೈಸೂರು”(Raghu Dixit deep displeasure) ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸದ ಕನ್ನಡ ಸಿನಿ ಪ್ರೇಕ್ಷಕರ ವಿರುದ್ಧ ಕನ್ನಡ ಚಿತ್ರರಂಗದ ಗಾಯಕ, ನಟ ರಘು ದೀಕ್ಷಿತ್ (Raghu dixit) ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಶುಕ್ರವಾರ ರಾಜ್ಯಾದ್ಯಂತ ನಟ ಪೂರ್ಣ ಹಾಗೂ ನಿರ್ದೇಶಕ ಸುನೀಲ್ ಮೈಸೂರು ಅವರ ನಿರ್ದೇಶನದಲ್ಲಿ ಮೂಡಿಬಂದ ಆರ್ಕೆಸ್ಟ್ರಾ ಮೈಸೂರು ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಯಿತು.
ಚಿತ್ರ ಯಶಸ್ವಿಯಾಗಿ ಬಿಡುಗಡೆಗೊಂಡರು, ಯಶಸ್ವಿಯಾಗಿ ಪ್ರದರ್ಶನ ಕಾಣದೇ ಇರುವುದು ಚಿತ್ರತಂಡ ಹಾಗೂ ಚಿತ್ರದ ನಿರ್ಮಾಪಕ, ಗಾಯಕ ರಘು ದೀಕ್ಷಿತ್ ಅವರಿಗೆ ತೀವ್ರ ಬೇಸರವನ್ನು ಉಂಟು ಮಾಡಿದೆ.
ಸಂಕ್ರಾಂತಿಗೊಂದು (Raghu Dixit deep displeasure) ಸಿನಿಮಾ ಎಂದು ಈ ಮೊದಲೇ ಹೇಳಿದ್ದ ಚಿತ್ರತಂಡ, ಅದರಂತೆಯೇ ಸಂಕ್ರಾಂತಿ ಹಬ್ಬದ ಮುನ್ನ ದಿನ ಚಿತ್ರವನ್ನು ಬಿಡುಗಡೆಗೊಳಿಸಿತು.
ಆದ್ರೆ, ಚಿತ್ರಮಂದಿರಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರೇಕ್ಷಕರ ಸಂಖ್ಯೆ ಕಾಣಿಸಿಕೊಂಡ ಹಿನ್ನೆಲೆ, ರಘು ದೀಕ್ಷಿತ್ ಅವರು ಸಿನಿಪ್ರೇಕ್ಷಕರ ವಿರುದ್ಧ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ವೀಡಿಯೋ ಮೂಲಕ ಈ ರೀತಿ ವ್ಯಕ್ತಪಡಿಸಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ನಾನು ಮತ್ತು ನಮ್ಮ ಮೈಸೂರಿನ ಹುಡುಗರೆಲ್ಲಾ ಸೇರಿಕೊಂಡು ಒಂದು ಚಿತ್ರ ಮಾಡಬೇಕು ಎಂದು ನಿರ್ಧಾರ ಮಾಡಿ, ನಾವು ಬೆಳೆದು ಬಂದ ಸಂಸ್ಕೃತಿಯ ಬಗ್ಗೆ ತಿಳಿಸಬೇಕು ಎಂದು ಮೈಸೂರಿನ ಜಾಗಗಳಲ್ಲಿಯೇ ಚಿತ್ರಿಸಿ ಆರ್ಕೆಸ್ಟ್ರಾ ಮೈಸೂರು ಎಂಬ ಚಿತ್ರವನ್ನು ನಾವು ನಿರ್ಮಾಣ ಮಾಡಿದ್ವಿ.
ಈ ಚಿತ್ರಕ್ಕೆ ಅಶ್ವಿನ್ ವಿಜಯಕುಮಾರ್ ಎಂಬ ಚಿಕ್ಕ ಹುಡುಗನೇ ಇದಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಜನವರಿ 13ರಂದು ಬಿಡುಗಡೆಯಾಯಿತು. ಅಂದೇ ಯಾರೆಲ್ಲಾ ಈ ಚಿತ್ರ ನೋಡಿದ್ದಾರೋ ಅವರೆಲ್ಲಾ ಈ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಟ್ವಿಟರ್ (Twitter) , ಫೇಸ್‌ಬುಕ್‌ನಲ್ಲಿ (Facebook) ವ್ಯಕ್ತಪಡಿಸಿದ್ದಾರೆ.
ಒಳ್ಳೊಳ್ಳೆ ವಿಮರ್ಶೆಗಳು ಕೂಡ ನಮ್ಮ ಸಿನಿಮಾಗೆ ವ್ಯಕ್ತವಾಗಿವೆ. ಒಂದು ಸದಭಿರುಚಿಯ ಸಿನಿಮಾ ನೀಡಿದ್ದೀವಿ. ಆದ್ರೆ? 2 ವರ್ಷಕ್ಕೆ ಒಂದು ಕಥೆಯನ್ನು ಪರಿಶೀಲಿಸಿ ತದನಂತರ ಸಿನಿಮಾ ಮಾಡುವ ನಾನು,
ಈ ಚಿತ್ರವನ್ನು ಚ್ಯೂಸಿಯಾಗಿ ಆಯ್ಕೆ ಮಾಡಿ, ಹಣ ಪಡೆಯದೇ ಮ್ಯೂಸಿಕ್ ಮಾಡಿಕೊಟ್ಟೆ, ಕಾರಣ ಈ ಸಿನಿಮಾ ಅಷ್ಟು ಒಳ್ಳೆ ಕಥೆಯನ್ನು ಒಳಗೊಂಡಿತ್ತು.
ಇದನ್ನೂ ಓದಿ: https://vijayatimes.com/gautam-gambhir-tong-to-virat-kohli/
ನಿರ್ಮಾಪಕ ಅಶ್ವಿನ್ ಅವರು ನನ್ನನ್ನು ಈ ಚಿತ್ರದ ಒಂದು ಭಾಗದ ನಿರ್ಮಾಪಕರನ್ನಾಗಿ ಮಾಡಿದರು. ಅದು ಅವರ ದೊಡ್ಡ ಗುಣ! ಈ ಚಿತ್ರ ಜನರಿಗೆ ಇಷ್ಟವಾಗುತ್ತೆ ಎಂದು ಎಷ್ಟೋ ದಿನಗಳಿಂದ ನಾವು ಯೋಚಿಸಿ ಚಿತ್ರಿಸಿದೆವು.
ಬಿಡುಗಡೆಗೊಂಡ ಅಷ್ಟು ಹಾಡುಗಳು ಕೂಡ ಸೂಪರ್ ಹಿಟ್ (Super Hit) ಆಯ್ತು. ಎಷ್ಟೋ ತಿಂಗಳಿನಿಂದ ಈ ಸಿನಿಮಾ ಬಗ್ಗೆ ಪ್ರಚಾರ ಮಾಡಿಕೊಂಡು ಬಂದಿದ್ದೇವೆ. ಆದ್ರೆ, ಮೊದಲ ದಿನ ಹೊರತುಪಡಿಸಿದ್ರೆ,
ಇನ್ನೆಲ್ಲೂ ಚಿತ್ರಮಂದಿರ ತುಂಬಿಲ್ಲ! ಜನರಿಗೆ ಈ ಸಿನಿಮಾ ಮುಟ್ಟುತ್ತೆ ಅಂದುಕೊಂಡ್ವಿ ಆದ್ರೆ ಯಾಕೆ ಮುಟ್ಟಲಿಲ್ಲ ಎಂಬುದಕ್ಕೆ ಪ್ರಾಯಶಃ ನಾವು ಜನರ ಮೇಲೆ ಇಟ್ಟುಕೊಂಡಿರೋ ನಂಬಿಕೆ ಅಂತ ಅನ್ಸುತ್ತೇ ಈಗ!
ಸಂಕ್ರಾಂತಿ ದಿನ ಯಾಕೆ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲ್ಲ? ಯಾಕೆ ಧಮ್ ಇಲ್ವಾ ನಿಮಗೆ? ಪರಭಾಷೆ ಸಿನಿಮಾಗಳ ಮಧ್ಯೆ ಬಿಡುಗಡೆ ಮಾಡೋದು ಕಷ್ಟನಾ ಅಂತ ಕೇಳುವವರಿದ್ದಾರೆ!
ಎಲ್ಲೋ ಕುಳಿತು ಪ್ರಶ್ನಿಸುವವರೆಲ್ಲಾ ಈಗ ಎಲ್ಲಿ ಹೋದ್ರು? ಎಲ್ಲಿ ಹೋಯಿತು ಅವರ ಅಭಿಮಾನ? ನಾನು ವೈಯಕ್ತಿಕವಾಗಿ ಗ್ಯಾರಂಟಿ ಕೊಡ್ತೀನಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಖಂಡಿತ ಕಣ್ಣೀರು ಹಾಕ್ತೀರಿ,
ಮುಖದ ಮೇಲೆ ನಗುವಿರುತ್ತೆ, ಎದೆಯಲ್ಲಿ ಏನೋ ಸಾಧಿಸಬೇಕು ಎಂಬ ಕಿಚ್ಚು ಹುಟ್ಟಿಕೊಳ್ಳುತ್ತೆ. ಕನ್ನಡಿಗರೆಲ್ಲರೂ ಒಟ್ಟಿಗೆ ಸೇರಿ ಕನ್ನಡ ಚಿತ್ರಮಂದಿರಗಳಲ್ಲಿ ತುಂಬುತ್ತಿದ್ದ ಆ ಒಂದು ಪದ್ದತಿ ಇಂದು ಎಲ್ಲಿ ಹೋಗಿದೆ?
ಕನಸು ಕಟ್ಟಿರೋ ಒಂದು ದೊಡ್ಡ ಹೃದಯವನ್ನು ಮುರಿಯುತ್ತೀರಾ ಅಷ್ಟು ಸುಲಭವಾಗಿ? ನಮ್ಮ ಹೃದಯ ಹೊಡೆಯೋ ಶಕ್ತಿಯಿದ್ಯಾ ಕನ್ನಡಿಗರಿಗೆ? ಯಾಕೆ ಒಂದು ಒಳ್ಳೆ ಸಿನಿಮಾ ಕೊಟ್ರೆ ಅದನ್ನು ಸ್ವೀಕರಿಸಲ್ಲ?
ಬರೀ ಐಟಂ ಸಾಂಗ್(Itom song) ಇರುವ ಚಿತ್ರಗಳಿದ್ದರೇ ಸಾಕಾ? ಅಥವಾ ದೊಡ್ಡ ಸ್ಟಾರ್ ನಟರಿದ್ದರೇ ಮಾತ್ರ ನೋಡುವುದಾ? ಹಾಗೇನಾದ್ರು ಇದ್ರೆ ಹೇಳಿ.
ಹೊಸ ತಂಡಗಳು, ಹೊಸಬರು ಬರೋದನ್ನೇ ನಿಲ್ಲಿಸಿ ಬಿಡ್ತಾರೆ! ಹೊಸ ನಿರ್ದೇಶಕರು, ಹೊಸಬರು ಬರೋದೇ ನಿಲ್ಲಿಸ್ತಾರೆ. ಇದರ ಬದಲು ಬೇರೆ ಯಾವುದಾದರು ಕಸಬು ಮಾಡಲು ನಿರ್ಧರಿಸುತ್ತಾರೆ. ಒಂದು ನರ್ಸಿಂಗ್ ಹೋಂ ಕಟ್ಟಿಕೊಂಡ್ರೆ ಸುಲಭವಾಗಿ ಕಾಸು ಮಾಡ್ಬೋದು ಅವರು.
ಇದನ್ನೂ ಓದಿ: https://vijayatimes.com/hariprasad-has-sneered-bjp/