ಮುಸ್ಲಿಂ ಹಿನ್ನೆಲೆಯ ಲೇಖಕರ ಪುಸ್ತಕ ಓದಬೇಡಿ ಎಂದು ಯಾವಾಗ ಫರಮಾನು ಹೊರಡುವುದೊ ಕಾಣೆ ಎಂದು ಕನ್ನಡ ಲೇಖಕ(Rahamat Tarikere about Banaras) ಮತ್ತು ಪ್ರಾದ್ಯಾಪಕ ರೆಹಮತ್ ತರಿಕೇರಿ ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ‘ಬನಾರಸ್’(Rahamat Tarikere about Banaras) ಚಿತ್ರವನ್ನು ಮುಸ್ಲಿಂ ನಟನಿರುವ ಕಾರಣಕ್ಕೆ ಬಹಿಷ್ಕರಿಸುವ ಹೇಳಿಕೆಯನ್ನು ಕಂಡಾಗ ಆಶ್ಚರ್ಯವಾಗಲಿಲ್ಲ. ಇದು ‘ಮುಸ್ಲಿಂ ವ್ಯಾಪಾರಿಗಳಿಂದ ಖರೀದಿ ಮಾಡಬೇಡಿ, ‘ಅವರನ್ನು ಪ್ರೀತಿಸಿ ಮದುವೆಯಾಗಬೇಡಿ’,
ಇದನ್ನೂ ಓದಿ : https://vijayatimes.com/review-of-banaras/
‘ಅವರಿಗೆ ಬಾಡಿಗೆ ಮನೆಕೊಡಬೇಡಿ’, ‘ಅವರು ಈ ದೇಶದಲ್ಲಿರಬಾರದು’ ಇತ್ಯಾದಿ ಹೇಳಿಕೆ-ಗ್ರಹಿಕೆಗಳ ತಾರ್ಕಿಕ ಮುಂದುವರಿಕೆಯಷ್ಟೆ. ಮುಸ್ಲಿಂ ಹಿನ್ನೆಲೆಯ ಲೇಖಕರ ಪುಸ್ತಕ ಓದಬೇಡಿ ಎಂದು ಯಾವಾಗ ಫರಮಾನು ಹೊರಡುವುದೊ ಕಾಣೆ. ಸಮಸ್ಯೆಯೆಂದರೆ, ಕಲಾ ಲೋಕದಲ್ಲಿ ಬಹಿಷ್ಕಾರಗಳು ಬಹಿಷ್ಕರಿಸುವವರ ಅಪೇಕ್ಷಿತ ಆಶಯಕ್ಕೆ ವಿರುದ್ಧ ಪರಿಣಾಮವನ್ನು ಬೀರುವುದು.
ಇದನ್ನೂ ಓದಿ : https://vijayatimes.com/hd-devegowda-letter-to-pm/
ಬಹಿಷ್ಕಾರಗಳಲ್ಲಿ, ಅವಕ್ಕೆ ಗುರಿಯಾಗುವ ವ್ಯಕ್ತಿ/ಸಮುದಾಯಗಳ ಮೇಲಾಗುವ ಪರಿಣಾಮಗಳಿಗಿಂತ ಘೋರವಾದುದು, ಅದನ್ನು ವಿಧಿಸುವವರು ಕುಬ್ಜ ಮತ್ತು ನಿಕೃಷ್ಟಗೊಳ್ಳುವುದು. ನಂಜನ್ನು ಉಗುಳುವಾಗ, ಅದನ್ನು ನಾವು ಹೊಟ್ಟೆಯಲ್ಲಿ ಧರಿಸಿರಬೇಕಾಗುತ್ತದೆ. ನಮ್ಮ ನಾಲಗೆಯ ಮೂಲಕ ಹೊರಹಾಕಬೇಕಾಗುತ್ತದೆ. ಆಗದು ನಮ್ಮ ಒಳಗನ್ನೂ ಸುಟ್ಟಿರುತ್ತದೆ.

ಇನ್ನು ಭಾರತೀಯ ಸಿನಿಮಾದ ಮೊದಲ ದಿನಗಳಲ್ಲಿ, ಮುಂಬೈ ಚಿತ್ರ ಜಗತ್ತಿನಲ್ಲಿ ಕಲಾವಿದರ ಜಾತಿ, ಧರ್ಮ, ಲಿಂಗ ಪ್ರದೇಶಗಳ ಹಿನ್ನೆಲೆಗಿಂತ, ವ್ಯಕ್ತಿ ಪ್ರತಿಭೆ, ಪರಿಣತಿ ಮತ್ತು ಅನುಭಗಳಿಗೆ ಆದ್ಯತೆಯಿತ್ತು. ಬಂಡವಾಳಶಾಹಿ ಮಾರುಕಟ್ಟೆ ಆಯಾಮವುಳ್ಳ ಸಿನಿಮಾ ಮಾಧ್ಯಮದಲ್ಲೇ ಸಾಂಪ್ರದಾಯಿಕ ಕಟ್ಟುಪಾಡು ಮೀರುವ ಗುಣವು ಸಾಂಪ್ರದಾಯಿಕ ಕಲಾಲೋಕದಲ್ಲಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿತ್ತು.
https://youtu.be/Hha3KHrTSyk ಬ್ಯಾಡರಹಳ್ಳಿ – ವಿಶ್ವೇಶ್ವರಯ್ಯ ಲೇಔಟ್ ಅವಶ್ಯಕತೆ ಇಲ್ಲದ 150 ಅಡಿ ಲಿಂಕ್ ರೋಡ್.
ಕಲೆ, ವಾಣಿಜ್ಯ, ಭಾಷೆಗಳಿಗೆ ಜಾತಿ-ಧರ್ಮಗಳನ್ನು ಮೀರುವ ಈ ಗುಣವು, ಮುಂಬೈ ಶಹರಿನಲ್ಲಿ ಹೆಚ್ಚು ಪ್ರಕಟವಾಗುತ್ತಿತ್ತು. ವಾಣಿಜ್ಯ ರಾಜಧಾನಿಯಾದ ಮುಂಬೈ ಜಾತ್ಯತೀತ ಕಲೆಗಳ ಕೇಂದ್ರವೂ ಆಗಿ ರೂಪುಗೊಂಡಿದ್ದು, ಒಂದು ಸ್ವಾರಸ್ಯಕರ ಮತ್ತು ಐತಿಹಾಸಿಕ ಸಂಗತಿ ಎಂದು ಸುದೀರ್ಘ ಲೇಖನವನ್ನು ಬರೆದುಕೊಂಡಿದ್ದಾರೆ.
- ಮಹೇಶ್.ಪಿ.ಎಚ್